ಇಂದಿನಿಂದ ದಸರಾ ವಿಶೇಷ ರೈಲು ಸಂಚಾರ
ಎಸ್‌ಎಸ್ ಎಸ್ ಹುಬ್ಬಳ್ಳಿ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (07305 / 07306) ಅ.10ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಬೆಳಗ್ಗೆ 11.30ಕ್ಕೆ ಹೊರಟು, ಅದೇ ದಿನ ಯಶವಂತಪುರ ಸಂಜೆ 7.40 ಕ್ಕೆ ತಲುಪಲಿದೆ. ಈ ರೈಲು ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.
ಬೆಂಗಳೂರು(ಅ.10): ದಸರಾ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಣೆಗೆ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ವಿಶೇಷ ರೈಲುಗಳ ಸೇವೆಯನ್ನು ನೈಋತ್ಯ ರೈಲ್ವೆ ನೀಡಲಿದೆ.
ಹುಬ್ಬಳ್ಳಿ-ಯಶವಂತಪುರ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು:
ಎಸ್‌ಎಸ್ ಎಸ್ ಹುಬ್ಬಳ್ಳಿ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (07305 / 07306) ಅ.10ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಬೆಳಗ್ಗೆ 11.30ಕ್ಕೆ ಹೊರಟು, ಅದೇ ದಿನ ಯಶವಂತಪುರ ಸಂಜೆ 7.40 ಕ್ಕೆ ತಲುಪಲಿದೆ. ಈ ರೈಲು ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.
ಹಬ್ಬಕ್ಕೆ ವಿಮಾನದಲ್ಲೇ ಹೋಗಿ, 1000 ರೂ.ಉಳಿಸಿ – ಇಲ್ಲಿದೆ ಭರ್ಜರಿ ಆಫರ್
ಯಶವಂತಪುರ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು(07306) ಅ.10ರಂದು ಯಶವಂತಪುರದಿಂದ ರಾತ್ರಿ 8:55ಕ್ಕೆ ಹೊರಟು, ಮರುದಿನ ಬೆಳಗಾವಿಗೆ ಬೆಳಗ್ಗೆ 8.15ಕ್ಕೆ ತಲುಪಲಿದೆ. ಈ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಎಸ್‌ಎಸ್ ಎಸ್ ಹುಬ್ಬಳ್ಳಿ, ಧಾರವಾಡ, ಅಳ್ಳಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.
ಮೈಸೂರು-ಬೆಂಗಳೂರು ರೈಲು:
ಮೈಸೂರು- ಕೆಎಸ್‌ಆರ್ ಬೆಂಗಳೂರು ಕಾಯ್ದಿರಿಸದ ವಿಶೇಷ ರೈಲು (06279) ಅ.10, 11, 12 ಮತ್ತು 13ರಂದು ಮೈ ಸೂರಿನಿಂದ ರಾತ್ರಿ 11.15ಕ್ಕೆ ಹೊರಟು, ಮರುದಿನ ಕೆಎಸ್‌ಆರ್‌ಬೆಂಗಳೂರಿಗೆ ಮುಂಜಾಗೆ 2.30ಕ್ಕೆ ತಲುಪಲಿದೆ. 6 6.10, 11, 12, 13 ಮತ್ತು 14ರಂದು ಕೆಎಸ್‌ಆರ್ ಬೆಂಗಳೂರಿನಿಂದ ಮುಂಜಾನೆ 3 ಗಂಟೆಗೆ ಹೊರಟು, ಅದೇ ದಿನ ಮೈಸೂ ರಿಗೆ ಬೆಳಗ್ಗೆ 6.15 ಗಂಟೆಗೆ ತಲುಪಲಿದೆ.
ರೈಲು ನಾಗನಹಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ಚಂದ್ರಗಿರಿ ಕೊಪ್ಪಲು, ಬ್ಯಾಡರಹಳ್ಳಿ, ಎಲಿಯೂ ರು, ಮಂಡ್ಯ, ಹನಕೆರೆ, ಮದ್ದೂರು, ಸೆಟ್ಟಿಹಳ್ಳಿ, ಚನ್ನಪಟ್ಟಣ, ರಾಮನಗರಂ, ಬಿಡದಿ, ಹೆಜ್ಜಾಲ, ಕೆಂಗೇರಿ, ನಾಯಂ ಡಹಳ್ಳಿಯಲ್ಲಿ ನಿಲುಗಡೆಯಾಗಲಿವೆ.