Asianet Suvarna News Asianet Suvarna News

ದರ್ಶನ್‌ ಕ್ರೌರ್ಯದ ಬಗ್ಗೆ ಸಿಎಂ ಟೀಕೆ ಬರೀ ವದಂತಿ: ಸಂಪುಟ ಸಭೆಯಲ್ಲಿ ರೇಣುಕಾಸ್ವಾಮಿ ಕೊಲೆ ವಿಚಾರ ಚರ್ಚೆಯಾಗಿಲ್ಲ..!

ಸಂಪುಟ ಸಭೆಯಲ್ಲಿ ದರ್ಶನ್‌ ವಿಚಾರ ಚರ್ಚೆಯೇ ಆಗಿಲ್ಲ. ಅದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ಇಲಾಖೆಗಳಿಂದ ಮಂಡನೆಯಾಗಿದ್ದ ಪ್ರಸ್ತಾವನೆಗಳು ಬಿಟ್ಟರೆ ಬೇರೆ ಯಾವ ಚರ್ಚೆಯೂ ಆಗಿಲ್ಲ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. 
 

Darshan Arrested on Renukaswamy Murder Issue Not Discussed in the Cabinet Meeting grg
Author
First Published Jun 21, 2024, 8:37 AM IST

ಬೆಂಗಳೂರು(ಜೂ.21):  ವದಂತಿಯಾದಂತೆ ನಟ ದರ್ಶನ್ ಮತ್ತು ಗ್ಯಾಂಗ್ ವಿರುದ್ಧದ ಕೊಲೆ ಆರೋಪ ಪ್ರಕರಣ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯೇ ಆಗಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದರ್ಶನ್ ವಿಚಾರ ಚರ್ಚೆಯಾಗಿದೆ. ಈ ವೇಳೆ ಸಿದ್ದರಾಮಯ್ಯ ಅವರು, 'ವಿಡಿಯೋದಲ್ಲಿ ಆತನ ಕ್ರೌರ್ಯ ನೋಡಿದ್ದೇನೆ. ಆತ ಏನು ಮನುಷ್ಯನಾ? ಆ ರೀತಿ ಹೊಡೆಯುತ್ತಾರಾ?' ಎಂದು ಸಿದ್ದರಾಮಯ್ಯ ಅವರು ಮಾತನಾಡಿರುವುದಾಗಿ ವದಂತಿ ಹಬ್ಬಿತ್ತು. 

ಸಾಕ್ಷ್ಯ ನಾಶಕ್ಕೆ ದರ್ಶನ್‌& ಗ್ಯಾಂಗ್‌ ಸರ್ಕಸ್‌, ಶೆಡ್‌ ಕಾರ್ಮಿಕರ ಬಾಯಿ ಮುಚ್ಚಿಸಲು ಭಾರೀ ಆಮಿಷ..!

ಅಲ್ಲದೆ, ಈ ಪ್ರಕರಣವನ್ನು ಸರ್ಕಾರ ಸೂಕ್ಷ್ಮವಾಗಿ ನಿಭಾಯಿಸುತ್ತಿದೆ. ಈ ಪ್ರಕರಣದಲ್ಲಿ ಯಾರೊಬ್ಬರೂ ಹಸ್ತಕ್ಷೇಪಕ್ಕೆ ಯತ್ನಿಸಬಾರದು. ಜತೆಗೆ ಸಚಿವರೂ ಬಹಿರಂಗವಾಗಿ ಹೇಳಿಕೆಯನ್ನೂ ಕೊಡಬಾರದು ಎಂದು ಮುಖ್ಯಮಂತ್ರಿಗಳು ಸೂಚಿಸಿರುವುದಾಗಿ ವರದಿಯಾಗಿತ್ತು. 

ಆದರೆ, ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಯೇ ಆಗಿಲ್ಲ. ಅದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ಇಲಾಖೆಗಳಿಂದ ಮಂಡನೆಯಾಗಿದ್ದ ಪ್ರಸ್ತಾವನೆಗಳು ಬಿಟ್ಟರೆ ಬೇರೆ ಯಾವ ಚರ್ಚೆಯೂ ಆಗಿಲ್ಲ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

Latest Videos
Follow Us:
Download App:
  • android
  • ios