Asianet Suvarna News Asianet Suvarna News

ಎಸ್‌ ಡಿ ಎಂ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಡಾ.ಬಿ.ಯಶೋವರ್ಮ ವಿಧಿವಶ!

ಶ್ರೀ ಕ್ಷೇತ್ರ ಧರ್ಮಸ್ಥಳ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ತಮ್ಮ ದೂರದರ್ಶಿ ಕಾರ್ಯಕ್ರಮಗಳ ಮೂಲಕ ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಯಶಸ್ಸಿನಲ್ಲಿ ಪ್ರಮಖ ಪಾತ್ರ ವಹಿಸಿದ್ದ ಡಾ.ಬಿ.ಯಶೋವರ್ಮ ಅನಾರೋಗ್ಯದಿಂದಾಗಿ ಭಾನುವಾರ ನಿಧನರಾದರು.

dakshina kannada News B Yashovarma Secretary of SDME Society Died san
Author
Bengaluru, First Published May 23, 2022, 9:13 AM IST

ಮಂಗಳೂರು (ಮೇ. 23): ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದ, ಪ್ರಸ್ತುತ ಎಸ್ ಡಿಎಂ ಎಜುಕೇಶನ್ ಸೊಸೈಟಿ ಕಾರ್ಯದರ್ಶಿಯಾಗಿದ್ದ ಡಾ. ಬಿ.ಯಶೋವರ್ಮ ಭಾನುವಾರ ನಿಧನರಾದರು.

ಕಳೆದ ಕೆಲವು ತಿಂಗಳಿನಿಂದ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 66 ವರ್ಷದ ಯಶೋವರ್ಮ ಅವರು ಭಾನುವಾರ ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ನಿಧರಾಗಿದ್ದಾರೆ. ಈ ಕುರಿತಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಇನ್ನಷ್ಟೇ ಅಧಿಕೃತವಾಗಿ ಪ್ರಕಟಣೆ ನೀಡಬೇಕಿದೆ.  ಡಾ. ಬಿ.ಯಶೋವರ್ಮ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಪತ್ನಿ, ಡಾ. ಹೇಮಾವತಿ ಹೆಗ್ಗಡೆಯವರ ಸಹೋದರರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಬಂಧುವರ್ಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಡಾ. ಬಿ ಯಶೋವರ್ಮ, ಎಸ್‌ಡಿಎಂಇ ಸೊಸೈಟಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಲ್ಲರೂ ಪ್ರೀತಿಸುವ ಮತ್ತು ಗೌರವಿಸುವ ವ್ಯಕ್ತಿ. ದೀರ್ಘಕಾಲದ ವರೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅಥವಾ ಎಸ್ ಡಿಎಂ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿದ್ದರು. 1986ರಲ್ಲಿ ಸೈಕಾಲಜಿ ಕ್ಷೇತ್ರದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದ ಅವರು ಸಸ್ಯಶಾಸ್ತ್ರದ ತೀವ್ರ ಉತ್ಸಾಹಿ. ಈ ವಿಷಯದ ಕುರಿತಾಗಿ ಮತ್ತಷ್ಟು ಡಿಮಿಸ್ಟಿಫಿನೇಶನ್ ಗೆ ನಿರಂತರವಾಗಿ ಮಾಡಿದ ಕೆಲಸ ಫಲಿತಾಂಶ ರೂಪದಲ್ಲಿ ಕಂಡು ಬಂದಿವೆ. ಅವರ ಹೆಸರಿನಲ್ಲಿ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಕಟಣೆಗಳೂ ಬಂದಿವೆ. ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಹಲವಾರು ಸಮ್ಮೇಳನಗಳನ್ನು ಕೂಡ ನಡೆಸಿದ್ದರು. 

ಅವರು ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಂಶುಪಾಲರ ಸಂಘದ ಅಧ್ಯಕ್ಷರು ಸೇರಿದಂತೆ ಹಲವಾರು ಹುದ್ದೆಗಳ ಮೂಲಕ ಸೇವೆ ಸಲ್ಲಿಸಿದ್ದರು. ಎಸ್‌ಡಿಎಂಸಿ ಉಜಿರೆಯ ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಕಾಲೇಜು ನ್ಯಾಕ್‌ನಿಂದ ಸತತ ಮೂರು ಬಾರಿ ‘ಎ’ ದರ್ಜೆಯ ಮಾನ್ಯತೆ ಪಡೆದಿತ್ತು. ಕಾಲೇಜು FJEI ಸ್ಥಾಪಿಸಿದ ಅತ್ಯುತ್ತಮ ಕಾಲೇಜಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆಯಿತು.

4 ವರ್ಷದಲ್ಲಿ ಕರ್ನಾಟಕದಲ್ಲಿ 7 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ: ಸಚಿವ ನಾಗೇಶ್‌

ಡಾ. ಬಿ ಯಶೋವರ್ಮ ಅವರು ಎಸ್‌ಡಿಎಂಸಿ ಉಜಿರೆಯನ್ನು ಹೊಂದಿದ್ದಂತೆಯೇ ಎಸ್‌ಡಿಎಂಇ ಸೊಸೈಟಿ ಮತ್ತು ಸೊಸೈಟಿಯಿಂದ ನಿರ್ವಹಿಸಲ್ಪಡುವ 56 ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ, ಸಂಸ್ಥೆಗಳು UGC ಮತ್ತು NAAC ಮಾನ್ಯತೆಗಳು, ಗಿನ್ನೆಸ್ ದಾಖಲೆಗಳು, ದಾಖಲೆ ನಿಯೋಜನೆಗಳು, ಅಭೂತಪೂರ್ವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಒಳಗೊಂಡಂತೆ ಸಾಧನೆಗಳನ್ನು ಕಂಡಿವೆ. 

CRZ ವ್ಯಾಪ್ತಿಯ ಮರಳು ಮಾರುವಂತಿಲ್ಲ ಎನ್‌ಜಿಟಿ ಆದೇಶ

ತಮ್ಮ ಸ್ನೇಹಪರ ವ್ಯಕ್ತಿತ್ವ, ನಗುಮೊಗದಿಂದಲೇ ಉಜಿರೆಯಲ್ಲಿ ಕಲಿಯುತ್ತಿದ್ದ ವಿದ್ವಾರ್ಥಿಗಳಿಗೆ ಕಾಣುತ್ತಿದ್ದ ಡಾ.ಬಿ ಯಶೋವರ್ಮ ಅವರು, ಸಂಸ್ಥೆ ಮಾಜಿ ವಿದ್ಯಾರ್ಥಿಗಳೊಂದಿಗೂ ಅಷ್ಟೇ ಒಡನಾಟ ಹೊಂದಿದ್ದರು. ತಮ್ಮ ಭಾಷಣಗಳಲ್ಲಿ ಹಾಗೂ ಬದುಕಿನಲ್ಲಿ ಮೌಲ್ಯಗಳಿಗೆ ಹೆಚ್ಚಿನ ಬೆಲೆ ನೀಡುತ್ತಿದ್ದ ಯಶೋವರ್ಮ ಅವರ ನಿಧನಕ್ಕೆ ಹಾಲಿ ಹಾಗೂ ಮಾಜಿ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.

Follow Us:
Download App:
  • android
  • ios