CRZ ವ್ಯಾಪ್ತಿಯ ಮರಳು ಮಾರುವಂತಿಲ್ಲ ಎನ್‌ಜಿಟಿ ಆದೇಶ

* ಕರಾವಳಿ ಜಿಲ್ಲೆಗಳಲ್ಲಿ ಮರಳುಗಾರಿಕೆ ಸಂಬಂಧ ಇದೊಂದು ಮಹತ್ವದ ಆದೇಶ
* CRZ ವ್ಯಾಪ್ತಿಯ ಮರಳು ಮಾರುವಂತಿಲ್ಲ ಎನ್‌ಜಿಟಿ ಆದೇಶ
* ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ಪೀಠ

Not Sale sand From CRZ Area Ordered By NGT Court  rbj

ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ, (ಮೇ.21):
ಸಿಆರ್ ಝಡ್ ಪ್ರದೇಶದಲ್ಲಿ ತೆಗೆದಿರುವ ಮರಳನ್ನು ಮಾರಾಟ ಮಾಡುವಂತೆ ಇಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ (NGT) ಆದೇಶ ಮಾಡಿದೆ.

ಕರಾವಳಿ ಜಿಲ್ಲೆಗಳಲ್ಲಿ ಮರಳುಗಾರಿಕೆ ಸಂಬಂಧ ಇದೊಂದು ಮಹತ್ವದ ಆದೇಶವಾಗಿದೆ. ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ಪೀಠದ ದಕ್ಷಿಣ ವಿಭಾಗದ ನ್ಯಾಯಾಂಗ ಸದಸ್ಯ ಕೆ ರಾಮಕೃಷ್ಣನ್, ತಜ್ಞ ಸದಸ್ಯ ಡಾ.ಸತ್ಯ ಗೋಪಾಲ ಕೊರ್ಲಪಾಟಿ ಅವರುಗಳಿದ್ದ ಪೀಠವು ಈ ಆದೇಶ ಮಾಡಿದೆ. ಪರ್ಮಿಟ್ ಪ್ರಕ್ರಿಯೆ ರಾಜಧನ ಸಂಗ್ರಹ , ಹೊರಗಡೆ ಮರಳು ಮಾರಾಟಕ್ಕೆ ಅನುಮತಿ ನೀಡಿರುವ ರಾಜ್ಯ ಸರಕಾರದ ನಿಯಮಾವಳಿಯೂ ಕೂಡ ಸಿಆರ್ ಝಡ್ ಅಧಿಸೂಚನೆಯಲ್ಲಿ ನಿಷೇಧಿಸಲಾದ ಮರಳುಗಾರಿಕೆಗೆ ಸಮವಾಗಿದೆ ಎಂದಿದೆ.

ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ: ಲೋಕಾಯುಕ್ತಕ್ಕೆ ಕಾಂಗ್ರೆಸ್‌ ದೂರು

ಸಿಆರ್ ಝಡ್ ಪ್ರದೇಶದಲ್ಲಿ ಮರಳನ್ನು ತೆಗೆಯುವುದೇ ಆದರೆ ಅದನ್ನು ಮಾರಾಟ ಮಾಡುವಂತಿಲ್ಲ .ತೆಗೆದಿರುವ ಮರಳನ್ನು ಕೇವಲ ನದಿ ಪಾತ್ರವನ್ನು ಸಮತಟ್ಟು ಮಾಡಲು ಅಥವಾ ನದಿಪಾತ್ರದ ದಂಡೆ ಗಟ್ಟಿಗೊಳಿಸಲು ಬಳಸಬೇಕು ಎಂದು ಸೂಚನೆ ನೀಡಲಾಗಿದೆ.

ಪರವಾನಿಗೆ ಹೊಂದಿರುವವರು ಅಥವಾ ಅವರ ಕುಟುಂಬದ ಸದಸ್ಯರು ಮಾತ್ರ ಕಟ್ಟುನಿಟ್ಟಾಗಿ ಸಾಂಪ್ರದಾಯಿಕ ವಿಧಾನಗಳನ್ನು ಮಾತ್ರ ಬಳಸಿ ಮರಳು ತೆಗೆಯಬೇಕು. ಯಾವುದೇ ಉಪಗುತ್ತಿಗೆ ಅಥವಾ ಬಾಹ್ಯ ಕಾರ್ಮಿಕರ ನಿಯೋಜನೆ ಇರಬಾರದು ಎಂಬುದನ್ನು ಪೀಠವು ಸ್ಪಷ್ಟಪಡಿಸಿದೆ.

ಬ್ರಹ್ಮಾವರದ ಉದಯ ಸುವರ್ಣ , ಕಲ್ಯಾಣಪುರದ ದಿನೇಶ್ ಕುಂದರ್ ಎಂಬ ಅರ್ಜಿದಾರರು ಜಿಲ್ಲೆಯ ಸಿ ಆರ್ ಝಡ್ ವ್ಯಾಪ್ತಿಗೆ ಬರುವ ಸೌಪರ್ಣಿಕಾ ,ವಾರಾಹಿ ,ಪಾಪನಾಶಿನಿ, ಸ್ವರ್ಣ ,ಮಾವಿನಹೊಳೆ ನದಿಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಿದ್ದಾರೆ ಎಂದು ಆಕ್ಷೇಪಿಸಿದ್ದರು. ಜಿಲ್ಲಾಡಳಿತವು ಎನ್ ಜಿಟಿ ಆ ದೇಶವನ್ನು ಪಾಲನೆ ಮಾಡದೆ ಪರಿಸರಕ್ಕೆ ಈ ಮೂಲಕ ಸಾಕಷ್ಟು ಹಾನಿ ಮಾಡಿದೆ ಎಂದು ದೂರಲಾಗಿತ್ತು. ಅರ್ಜಿದಾರರ ಪರವಾಗಿ ಬೆಂಗಳೂರಿನ ನ್ಯಾಯವಾಗಿ ರಂಜನ್ ಶೆಟ್ಟಿ ವಾದ ಮಂಡಿಸಿದ್ದರು.

ನದಿಯ ಹರಿಯುವಿಕೆಗೆ ಸಮಸ್ಯೆಯಾಗುವುದು ಮತ್ತು ಮೀನುಗಾರಿಕೆ ದೋಣಿಗಳ ಚಲನೆಗೆ ಸಮಸ್ಯೆಯಾಗುತ್ತದೆ ಮರಳನ್ನು ತೆಗೆಯದೆ ಇದ್ದಲ್ಲಿ ಪ್ರವಾಹ ಮತ್ತು ನೆರೆ ಉಂಟಾಗಲು ಕಾರಣವಾಗುತ್ತದೆ ಎಂಬ ವಾದವನ್ನು ಜಿಲ್ಲೆಯ ಸಿಆರ್ ಝಡ್ ಮರಳು ಪರವಾನಿಗೆದಾರರ ಪರ ವಕೀಲರು ವಾದ ಮಂಡಿಸಿದ್ದರು.

ಜಿಲ್ಲೆಯಲ್ಲಿ ಸಿ ಆರ್ ಝಡ್ ವ್ಯಾಪ್ತಿಯಲ್ಲಿ 23 ಮರಳು ದಿಬ್ಬಗಳನ್ನು ಗುರುತಿಸಿ ರಾಜ್ಯ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರ ಅನುಮೋದನೆ ನೀಡಿತ್ತು. ಅದರಲ್ಲಿ ನಾಲ್ಕು ಮರಳು ದಿಬ್ಬಗಳು ಕುಂದಾಪುರ ವ್ಯಾಪ್ತಿಯಲ್ಲಿದ್ದು ಅದರ ಪರವಾನಿಗೆ ಅವಧಿ ಪೂರ್ಣಗೊಂಡಿದೆ. ಉಳಿದಂತೆ ಪ್ರಸ್ತುತ ಉಡುಪಿ ಬ್ರಹ್ಮಾವರ ಭಾಗದಲ್ಲಿ 13 ಮರಳು ದಿಬ್ಬಗಳಲ್ಲಿ ಮರಳನ್ನು ತೆರವುಗೊಳಿಸಲಾಗುತ್ತಿದೆ.

ಸಿಆರ್ ಝಡ್  ವ್ಯಾಪ್ತಿಯ ಮರಳು ತೆಗೆಯುವ ವಿಚಾರವಾಗಿ ಹಸಿರುಪೀಠ ನೀಡಿದ ಆದೇಶದ ಪ್ರಮಾಣಿಕೃತ ಪ್ರತಿಯನ್ನು ಪಡೆದು ಕೊಳ್ಳಬೇಕು. ಈ ಆದೇಶವನ್ನು ಜಿಲ್ಲಾ ಆಡಳಿತ ಕಟ್ಟುನಿಟ್ಟಾಗಿ ಪಾಲಿಸುತ್ತೆ. ಈ ಬಗ್ಗೆ ಗಣಿ ಇಲಾಖೆಯ ಅಧಿಕಾರಿಗಳಿಗೂ ಸ್ಪಷ್ಟ ಸೂಚನೆಯನ್ನು ನೀಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ

Latest Videos
Follow Us:
Download App:
  • android
  • ios