ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮೈಚುಂಗ್ ಚಂಡಮಾರುತ ಸೃಷ್ಟಿಯಾಗಿರುವ ಹಿನ್ನೆಲೆ ತಮಿಳನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಾಜ್ಯದಿಂದ ತಮಿಳನಾಡಿಗೆ ತೆರಳಬೇಕಿದ್ದ ಹತ್ತಕ್ಕೂ ಹೆಚ್ಚು ರೈಲುಗಳನ್ನು ರೈಲ್ವೆ ಇಲಾಖ ರದ್ದು ಮಾಡಿದೆ.

ಬೆಂಗಳೂರು (ಡಿ.4): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮೈಚುಂಗ್ ಚಂಡಮಾರುತ ಸೃಷ್ಟಿಯಾಗಿರುವ ಹಿನ್ನೆಲೆ ತಮಿಳನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಾಜ್ಯದಿಂದ ತಮಿಳನಾಡಿಗೆ ತೆರಳಬೇಕಿದ್ದ ಹತ್ತಕ್ಕೂ ಹೆಚ್ಚು ರೈಲುಗಳನ್ನು ರೈಲ್ವೆ ಇಲಾಖ ರದ್ದು ಮಾಡಿದೆ.

ಚಂಡಮಾರುತದಿಂದಾಗಿ ತಮಿಳನಾಡಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ. ತಮಿಳನಾಡಿನ ಬಹುತೇಕ ರೈಲ್ವೆ ನಿಲ್ದಾಣಗಳು ಮಳೆ ನೀರಿನಲ್ಲಿ ತುಂಬಿವೆ. ಕೆಲವೆಡೆ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ ರಾಜ್ಯದಿಂದ ತಮಿಳುನಾಡಿಗೆ ತೆರಳಬೇಕಿದ್ದ ಎಲ್ಲ ರೈಲು ಸೇವೆ ರದ್ದುಗೊಳಿಸಲಾಗಿದೆ. ಇಂದು ತಮಿಳನಾಡಿಗೆ ರೈಲು ಸಂಚಾರ ಇರುವುದಿಲ್ಲ. ಪ್ರಯಾಣಿಕರು ಸಹಕರಿಸುವಂತೆ ನೈರುತ್ಯ ರೈಲ್ವೇ ಇಲಾಖೆ ಮನವಿ ಮಾಡಿದೆ.

ಮೈಚುಂಗ್ ಚಂಡಮಾರುತ ಎಫೆಕ್ಟ್; ಕರ್ನಾಟಕದಲ್ಲೂ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ!

ಯಾವ್ಯಾವ ರೈಲು ಸೇವೆ ರದ್ದು?

ರೈಲಿನ ಸಂಖ್ಯೆ:12007
ಡಾ. ಎಂಜಿಆರ್ ಚೈನೈ – ಮೈಸೂರು

ರೈಲಿನ‌ ಸಂಖ್ಯೆ12008
ಮೈಸೂರು - Dr. MGR ರೈಲ್ವೇ ನಿಲ್ದಾಣ (ಸೆಂಟ್ರಲ್)

ರೈಲಿನ‌ ಸಂಖ್ಯೆ 22625
Dr. MGR ಚೆನೈ ಸೆಂಟ್ರಲ್- KSR ಬೆಂಗಳೂರು

ರೈಲಿನ ಸಂಖ್ಯೆ 22626
KSR ಬೆಂಗಳೂರು - Dr. MGR ಚೆನೈ ಸೆಂಟ್ರಲ್

ರೈಲಿನ ಸಂಖ್ಯೆ12639
Dr. MGR ಚೆನೈ ಸೆಂಟ್ರಲ್ – KSR ಬೆಂಗಳೂರು

ರೈಲಿನ ಸಂಖ್ಯೆ 12640
KSR ಬೆಂಗಳೂರು - Dr. MGR ಚೆನೈ ಸೆಂಟ್ರಲ್

ರೈಲಿನ ಸಂಖ್ಯೆ 12027
Dr. MGR ಚೆನೈ ಸೆಂಟ್ರಲ್- KSR ಬೆಂಗಳೂರು

ರೈಲಿನ ಸಂಖ್ಯೆ 12028
KSR ಬೆಂಗಳೂರು - Dr. MGR ಚೆನೈ ಸೆಂಟ್ರಲ್

ರೈಲಿನ ಸಂಖ್ಯೆ 12608
KSR ಬೆಂಗಳೂರು - Dr. MGR ಚೆನೈ ಸೆಂಟ್ರಲ್

ರೈಲಿನ ಸಂಖ್ಯೆ 12609
Dr. MGR ಚೆನೈ ಸೆಂಟ್ರಲ್ – ಮೈಸೂರು