Asianet Suvarna News Asianet Suvarna News

ಮಗನ‌ ನಾಮಕರಣ ಆಹ್ವಾನ ಪತ್ರಿಕೆಯಲ್ಲೂ ಸೈಬರ್ ಜಾಗೃತಿ ಮೂಡಿಸಿದ ಕಾನ್‌ಸ್ಟೇಬಲ್!

ಇಲ್ಲೋರ್ವ ಪೋಲಿಸ್ ಕಾನ್ಸ್‌ಟೇಬಲ್ ತಮ್ಮ ಮಗನ ನಾಮಕರಣ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳ ತುರ್ತುಪರಿಸ್ಥಿತಿ, ಮಕ್ಕಳ ಸಹಾಯ ವಾಣಿ ಹಾಗೂ ಕಳೆದು ಹೋದ ಮೊಬೈಲ್ ಗಳ ದುರ್ಬಳಕೆ ತಡೆಯುವ ಕುರಿತು ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

Cyber awareness in sons naming invition card at uttara kannada rav
Author
First Published Aug 21, 2023, 2:14 PM IST

ಬೆಂಗಳೂರು (ಆ.21) : ಸೈಬರ್ ಅಪರಾಧಗಳನ್ನು ‌ಜಾಗೃತಿ ಕಾರ್ಯಗಳ ಮೂಲಕ ತಡೆಗಟ್ಟಲು ಪೋಲಿಸ್ ಇಲಾಖೆ ಸೇರಿದಂತೆ ಮಾಧ್ಯಮ, ಬ್ಯಾಂಕ‌್‌ಗಳು, ವಿವಿಧ ಸಂಪರ್ಕ ಸಾಧನ ಕಂಪೆನಿ, ಸಂಘ ಸಂಸ್ಥೆಗಳು ಶ್ರಮಿಸುತ್ತಿದೆ. ಆದರೆ, ಇಲ್ಲೋರ್ವ ಪೋಲಿಸ್ ಕಾನ್ಸ್‌ಟೇಬಲ್ ತಮ್ಮ ಮಗನ ನಾಮಕರಣ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳ ತುರ್ತುಪರಿಸ್ಥಿತಿ, ಮಕ್ಕಳ ಸಹಾಯ ವಾಣಿ ಹಾಗೂ ಕಳೆದು ಹೋದ ಮೊಬೈಲ್ ಗಳ ದುರ್ಬಳಕೆ ತಡೆಯುವ ಕುರಿತು ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಪೋಲಿಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ  ಎಂ.ಎಸ್.ನಾರಾಯMSಣ ಎಂಬವರೇ ಸಾಮಾಜಿಕ ಕಾಳಜಿ ಮೆರೆದವರು. ಮೂಲತಃ ಹಾವೇರಿ ಜಿಲ್ಲೆಯ ತಿಲವಳ್ಳಿ ಗ್ರಾಮದವರಾಗಿರುವ ಇವರು ಎಂ.ಎ., ಬಿಎಡ್‌, ಡಿಎಡ್ ಹಾಗೂ ನಾಟಕ ಕಲೆಯಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದು ಸುಮಾರು 5 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಕಳೆದ 5 ವರ್ಷಗಳಿಂದ ಪೋಲಿಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

RAW ಏಜೆಂಟ್ ಎಂದು ಹೇಳಿಕೊಂಡು ವಂಚನೆ: ಕೇರಳ ಮೂಲದ ಬೆನೆಡಿಕ್ಟ್ ಸಾಬು ಬಂಧನ

ರಂಗ ಕಲಾವಿದರಾದ ಇವರು ಅನೇಕ ನಾಟಕಗಳನ್ನು ನಿರ್ದೇಶನ ಮಾಡುವುದರ ಜತೆಗೆ ನಾಟಕಗಳಲ್ಲಿ ಅಭಿನಯವನ್ನು ಕೂಡಾ ಮಾಡಿದ್ದಾರೆ. ಇವರ ಕಲಾ ಸೇವೆಗೆ ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಪೋಲಿಸ್ ಇಲಾಖೆಯ ತರಬೇತಿ ಅವಧಿಯಲ್ಲಿ ಗೃಹಮಂತ್ರಿಗಳಿಂದ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಜಾಗೃತಿ ಮೂಡಿಸಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 ಪೋಲಿಸ್ ಇಲಾಖೆಯಂತಹ  ಬಿಡುವಿಲ್ಲದ ಇಲಾಖೆಯಲ್ಲಿದ್ದುಕೊಂಡು ಖಾಸಗಿ ಬದುಕಿನ ಕಾರ್ಯಕ್ರಮದಲ್ಲಿಯೂ ಕೂಡ ಸಾಮಾಜಿಕ ಜಾಗೃತಿಯನ್ನು ಮೂಡಿಸಲು ಮುಂದಾಗಿರುವ ಕಾನ್ಸ್‌ಟೇಬಲ್ ಎಮ್.ಎಸ್. ನಾರಾಯಣ ಅವರ ಜನಪರ ಕಾಳಜಿಯನ್ನು ಪೋಲಿಸ್ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ವ್ಯಾಪಕವಾಗಿ ಪ್ರಶಂಸಿಸುತ್ತಿದ್ದಾರೆ.

ಮಗನ ಅನಾರೋಗ್ಯಕ್ಕೆ ಮನನೊಂದ ತಾಯಿ ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಬಂದು ಆತ್ಮಹತ್ಯೆ!

Follow Us:
Download App:
  • android
  • ios