Asianet Suvarna News Asianet Suvarna News

ನಾವಿಕ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ರಂಗು

ಸಾಂಸ್ಕೃತಿಕ ನಗರಿಯಲ್ಲಿ ವಿಶ್ವದ ಮೂಲೆ ಮೂಲೆಗಳಿಂದ ಬಂದ ಕನ್ನಡಿಗರು ತಮ್ಮ ತನವನ್ನು, ತಮ್ಮ ಭಾಷೆಯನ್ನು ನೆನಪು ಮಾಡಿಕೊಂಡರು. ಇದಕ್ಕೆ ಸಾಕ್ಷಿಯಾಗಿದ್ದು ನಾಲ್ಕನೇ ನಾವಿಕ ಸಮ್ಮೇಳನ.
 

Cultural Event Highlights Navika 2018 Mysuru
Author
Bengaluru, First Published Aug 5, 2018, 6:20 PM IST

ಮೈಸೂರು(ಆ.5): ಅಲ್ಲಿ ನುಡಿನಮನವಿತ್ತು, ಭರತನಾಟ್ಯವಿತ್ತು, ನಾಟಕವಿತ್ತು, ಸಂಗೀತವಿತ್ತು, ಚಿತ್ರಗೀತೆಗಳ ಹೂರಣ ಇತ್ತು. ಅಷ್ಟೇ ಏಕೆ ಹೊರದೇಶದ ಯಾವುದೋ ಮೂಲೆಯಲ್ಲಿ ನೆಲೆಸಿರುವ ಕನ್ನಡಿಗರಿಗೆ ತಮ್ಮ ನೆಲದಲ್ಲಿ ಪ್ರತಿಭೆ ಪ್ರದರ್ಶನ ಮಾಡುತ್ತಿರುವ ಆತ್ಮವಿಶ್ವಾಸ ಇತ್ತು.

ನುಡಿನಮನ:  

ಶನಿವಾರ ಮಂಡ್ಯ ರಮೇಶ್ ನೇತೃತ್ವದ ನಟನಾ ರಂಗ ಶಾಲೆಯ ಕೆಂಪು ಕಣಗಿಲು ನಾಟಕದಿಂದ ಮುಕ್ತಾಯವಾಗಿದ್ದ ಕಾರ್ಯಕ್ರಮ ಭಾನುವಾರ ಬೆಳಗ್ಗೆ ಆರಂಭವಾಯಿತು. ದಿವಂಗತ ಶಿಕಾರಿಪುರ ಹರಿಹರೇಶ್ವರ ಅವರಿಗೆ ಸಾಹಿತಿಗಳಾದ ಎಚ್.ವಿ.ನಾಗರಾಜ್ ರಾವ್, ನಾಗಲಕ್ಷ್ಮೀ ಹರಿಹರೇಶ್ವರ ನುಡಿನಮನ ಸಲ್ಲಿಸಿದರು. ಎಚ್.ವೈ.ರಾಜಗೋಪಾಲ ಅವರನ್ನು ಕುರಿತು ನೀರಜ ಅಚ್ಯತ್ ರಾವ್ ನುಡಿನಮನ ಸಲ್ಲಿಸಿದರು.

Cultural Event Highlights Navika 2018 Mysuru

ಕಾವ್ಯ ಮೀಮಾಂಸೆ: 

ಡಾ.ಟಿ.ವಿ.ವೆಂಕಾಟಚಲ ಶಾಸ್ತ್ರಿ, ಡಾ.ಎನ್.ಎಸ್.ತಾರಾನಾಥ, ಡಾ.ವಸಂತ್ ಭಾರಧ್ವಜ್, ಪ್ರೊ.ಎಚ್.ಎಸ್.ಹರಿಶಂಕರ್  ಮತ್ತು ಟೋರಾಂಟಾ ವಿಶ್ವವಿದ್ಯಾಲಯದ ಪ್ರೋಫೆಸರ್ ಸಾರಾ ಟೇಲರ್ ಅವರಿಂದ ನಡೆದ ಸಾಹಿತ್ಯಗೋಷ್ಠಿಯಲ್ಲಿ ಕನ್ನಡದ ಕಾವ್ಯ ಮತ್ತು ಗದ್ಯ ಪರಂಪರಯು ಯಾವ ಕಾಲಘಟ್ಟದಲ್ಲಿ ಹೇಗೆ ಬದಲಾಯಿತು ಎಂಬುದನ್ನು ವಿಶ್ಲೇಷಣೆ ಮಾಡಲಾಯಿತು.

Cultural Event Highlights Navika 2018 Mysuru

ಸಾಂಸ್ಕೃತಿಕ ಕಾರ್ಯಕ್ರಮದ ಸೊಗಡು:  ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಸೊಗಡು ತಂಡ ನಡೆಸಿಕೊಟ್ಟ ಹಾಡು ಮತ್ತು ಗದ್ಯ ಮಿಶ್ರಿತ ನೃತ್ಯ ರೂಪಕ, ಉನ್ನತಿ ಭಕ್ತರಾಮ್, ದೀಪಿಕಾ ಶ್ರೀಧರ್,ಜಾಹ್ನವಿ ಸುರೇಶ್ ಅವರಿಂದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಯುಕೆಯ ಆದ್ಯಾ ಆಚಾರ್ಯ ನೃತ್ಯ, ದುಬೈನ ಬಾಲಕ ಅಮೋಘ ವರ್ಷನ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಇಂಚರಾ ಮತ್ತು ಇಷಿಕಾ ಗಿರೀಶ್ ನೃತ್ಯ ಹೊರದೇಶದಲ್ಲಿ ನೆಲೆಸಿರುವ ಕನ್ನಡದ ಮಕ್ಕಳ ಪ್ರತಿಭೆ ಪರಿಚಯಿಸಿತು.  ಮೈಸೂರಿನ ಗಾಯಕಿ ಡಾ.ಶ್ರೀದೇವಿ ಕುಳೆನೂರು ಅವರ ಗಾಯನ  ಹಳೆಯ ಹಾಡುಗಳನ್ನು ಗುನುಗುವಂತೆ ಮಾಡಿತು.

ಮೈಸೂರು ಆನಂದ ಹಾಸ್ಯ:

ಎಲ್ಲದಕ್ಕಿಂತ ಮುಖ್ಯವಾಗಿ ಸಭಿಕರನ್ನು ರಂಜಿಸಿದ್ದು ಮೈಸೂರು ಆನಂದ್ ಹಾಸ್ಯ ಸಂಜೆ. ಕನ್ನಡದ ಭಾಷೆಯ ಸೊಗಡು, ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುವ ಕನ್ನಡ ಇವುಗಳನ್ನು ಇಟ್ಟುಕೊಂಡು ನಡೆಸಿಕೊಟ್ಟ  ಹಾಸ್ಯ ಸಂಜೆ ಎಲ್ಲರನ್ನು ರಂಜಿಸಿತು.

Follow Us:
Download App:
  • android
  • ios