ಸದಾ ಲಾಲ್ ಬಾಗ್ ನಲ್ಲಿ ನೋಡ್ತಿದ್ದ ಪುಷ್ಪ ಪ್ರದರ್ಶನ ಈ ಬಾರಿ ಕಬ್ಬನ್ ಪಾರ್ಕ್ ಗೂ ಕಾಲಿಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಬ್ಬನ್ ಪಾರ್ಕ್ ಹೂವಿನಿಂದ ಕಂಗೊಳಿಸಲಿದೆ. ಯಾವಾಗಿಂದ ಹೂವಿನ ಜಾತ್ರೆ ಶುರು ಎಂಬ ಮಾಹಿತಿ ಇಲ್ಲಿದೆ.

ಪುಷ್ಪ ( ಫ್ಲಾವರ್ ) ಪ್ರೇಮಿಗಳಿಗೊಂದು ಖುಷಿ ಸುದ್ದಿ ಇದೆ. ಪುಷ್ಪ ಪ್ರದರ್ಶನ ನೋಡಲು ಜನವರಿ 26ರವರೆಗೆ ಕಾಯ್ಬೇಕಾಗಿಲ್ಲ. ಪ್ರತಿ ವರ್ಷ ಆಗಸ್ಟ್ 15 ಹಾಗೇ ಜನವರಿ 26ರ ಟೈಂನಲ್ಲಿ ಲಾಲ್ ಬಾಗ್ ನಲ್ಲಿ ಫಲ – ಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತೆ. ಆದ್ರೆ ಈ ಬಾರಿ ವರ್ಷಾಂತ್ಯದಲ್ಲೇ ನೀವು ಬಣ್ಣ ಬಣ್ಣದ ಹೂವಿನ ಸೌಂದರ್ಯ ಕಣ್ತುಂಬಿಕೊಳ್ಬಹುದು. ತೋಟಗಾರಿಕಾ ಇಲಾಖೆ, ಪುಷ್ಪ ಪ್ರದರ್ಶನ ಏರ್ಪಡಿಸ್ತಿದೆ.

ಎಲ್ಲಿ ನಡೆಯಲಿದೆ ಪುಷ್ಪ ಪ್ರದರ್ಶನ? : 

ಈ ಬಾರಿ ಪುಷ್ಪ ಪ್ರದರ್ಶನ ಲಾಲ್ ಬಾಗ್ ಬದಲು ಕಬ್ಬನ್ ಪಾರ್ಕ್ ನಲ್ಲಿ ನಡೆಯಲಿದೆ. ತೋಡಘಾರಿಕಾ ಇಲಾಖೆ ಈ ಪ್ರದರ್ಶನವನ್ನು ಏರ್ಪಡಿಸಿದೆ. ಇದೇ ನವೆಂಬರ್ 27 ರಿಂದ ಪುಷ್ಪ ಪ್ರದರ್ಶನ ಶುರುವಾಗಲಿದ್ದು, ಡಿಸೆಂಬರ್ 7ರವರೆಗೆ ನಿಮಗೆ ಪುಷ್ಪ ಪ್ರದರ್ಶನ ನೋಡುವ ಅವಕಾಶ ಸಿಗಲಿದೆ. ಪ್ರತಿ ವರ್ಷ ನಡೆಯುವ ಲಾಲ್ ಬಾಗ್ ಪುಷ್ಪ ಪ್ರದರ್ಶನದ ಮಾದರಿಯಲ್ಲಿಯೇ ಇದು ನಡೆಯಲಿದೆ. 11 ದಿನಗಳ ಕಾಲ ನಡೆಯುವ ಈ ಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಇಲಾಖೆ ಸುಮಾರು 40 ಲಕ್ಷ ಖರ್ಚು ಮಾಡ್ತಿದೆ.

ಮೆಟ್ರೋ ಬಗ್ಗೆ ಗೊಂದಲ ಬೇಡ, 2ನೇ ಏರ್‌ಪೋರ್ಟ್ ತುಮಕೂರಿಗೇ ಬೇಕು: ಮಾಜಿ ಸಂಸದ ಜಿ.ಎಸ್. ಬಸವರಾಜ್ ಪಟ್ಟು!

ಪುಷ್ಪ ಪ್ರದರ್ಶನದ ಥೀಮ್ ಏನು? : 

ಎರಡು ವಿಷ್ಯಗಳನ್ನು ಮಿಕ್ಸ್ ಮಾಡಿ ಈ ಬಾರಿ ಥೀಮ್ ಮಾಡಲಾಗಿದೆ. ಮಕ್ಕಳ ದಿನಾಚರಣೆ ಮತ್ತು ಕರ್ನಾಟಕ ರಾಜ್ಯೋತ್ಸವ ಎರಡೂ ಥೀಮ್ ಇದು ಒಳಗೊಂಡಿದೆ. ಪುಷ್ಪ ಪ್ರದರ್ಶನದ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗ್ತಿದೆ. ಬ್ಯಾಂಡ್ಸ್ಟ್ಯಾಂಡ್ ಬಳಿಯ ಫೌಂಟೇನ್ ವೃತ್ತದಿಂದ ಕಬ್ಬನ್ ಪಾರ್ಕ್ನ ಅತ್ಯಂತ ಜನನಿಬಿಡ ಕಾರಿಡಾರ್ಗಳಲ್ಲಿ ಒಂದಾದ ಬಾಲ ಭವನ ಗೇಟ್ವರೆಗೆ ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ಪುಷ್ಪ ಪ್ರದರ್ಶನ ವೀಕ್ಷಿಸಲು ಅವಕಾಶ ಇದೆ. ಎರಡು ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದೆ.

ವೀಕ್ಷಣೆ ಶುಲ್ಕ ಎಷ್ಟು ? : 

ತೋಡಗಾರಿಕಾ ಇಲಾಖೆ ಪುಷ್ಪ ಪ್ರದರ್ಶನಕ್ಕೆ ಶುಲ್ಕ ನಿಗದಿಪಡಿಸಿದೆ. ವಯಸ್ಕರಿಗೆ 30 ರೂಪಾಯಿ ಮತ್ತು ಮಕ್ಕಳಿಗೆ 10 ರೂಪಾಯಿ ಪ್ರವೇಶ ದರ ನಿಗದಿಯಾಗಿದೆ. ಮಾನ್ಯ ಗುರುತಿನ ಚೀಟಿಗಳೊಂದಿಗೆ ಸಮವಸ್ತ್ರದಲ್ಲಿ ಬರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು. ಹೆಚ್ಚಿನ ಮಕ್ಕಳನ್ನು ಪಾರ್ಕ್ ಗೆ ಆಕರ್ಷಿಸುವುದು ಇದ್ರ ಗುರಿಯಾಗಿದೆ. ಅಲ್ಲದೆ ತೋಟಗಾರಿಕೆಯಲ್ಲಿ ಮಕ್ಕಳಿಗೆ ಆಸಕ್ತಿ ಹುಟ್ಟಿಸುವ, ಪ್ರೋತ್ಸಾಹ ನೀಡುವ ಗುರಿ ಹೊಂದಲಾಗಿದೆ. ಪುಷ್ಪ ಪ್ರದರ್ಶನದ ಹಿನ್ನೆಲೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗಳನ್ನು ಬದಲಾವಣೆ ಮಾಡಲಾಗ್ತಿದೆ. ಕೇಂದ್ರ ಗ್ರಂಥಾಲಯದ ಸುತ್ತಲೂ ಪಾರ್ಕಿಂಗ್ ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ. ವಾರಾಂತ್ಯಗಳಲ್ಲಿ ಕೆಜಿಡಿ ಕಟ್ಟಡದಲ್ಲಿ ಮತ್ತು ಹೈಕೋರ್ಟ್ ಬಳಿ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. 

ಬ್ಯಾಡಗಿ: ಇದು ಸಾಮೂಹಿಕ ವಿವಾಹ ಅಲ್ಲ, ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ!

ಈ ಹಿಂದೆಯೂ ತೋಟಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಸಹಯೋಗದೊಂದಿಗೆ ಸಣ್ಣ ಪ್ರದರ್ಶನಗಳನ್ನು ನಡೆಸಿತ್ತು. ಆದ್ರೆ ಇಷ್ಟು ದೊಡ್ಟ ಮಟ್ಟದಲ್ಲಿ ಪ್ರದರ್ಶನ ನಡೆದಿರಲಿಲ್ಲ. ನರ್ಸರಿ, ತೋಟಗಾರಿಕೆಗೆ ಅಗತ್ಯ ಇರುವ ವಸ್ತುಗಳು, ಕರಕುಶಲ ಮಳಿಗೆಗಳು ಮತ್ತು ಆಹಾರ ಕೌಂಟರ್ಗಳು ಸೇರಿದಂತೆ 100 ಕ್ಕೂ ಹೆಚ್ಚು ಮಳಿಗೆಗಳನ್ನು ಕಬ್ಬನ್ ಪಾರ್ಕ್ ನಲ್ಲಿ ನೋಡ್ಬಹುದು. ಇದಲ್ಲದೆ ಶಾಸ್ತ್ರೀಯ ಸಂಗೀತ, ಜಾನಪದ ಪ್ರದರ್ಶನ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ವಾಸ್ತುಶಿಲ್ಪದ ತುಣುಕುಗಳು ಮತ್ತು ಕಲ್ಲಿನ ಶಿಲ್ಪಗಳನ್ನು ನೀವು ನೋಡ್ಬಹುದಾಗಿದೆ. ಈ ವೀಕ್ ಆಂಡ್ ಕಡಲೆಕಾಯಿ ಪರಿಷೆ ಎಂಜಾಬ್ ಮಾಡಿದ ಜನರು ಮುಂದಿನ ವಾರಾಂತ್ಯದಲ್ಲಿ ಪುಷ್ಪ ಪ್ರದರ್ಶನ ಎಂಜಾಯ್ ಮಾಡ್ಬಹುದು.