Asianet Suvarna News Asianet Suvarna News

ರಾಜಕೀಯ ಲಾಭವೇ ಸಿದ್ಧಾಂತವೆಂದು ನಂಬಿ ಸಾವರ್ಕರ್‌ಗೆ ಅಪಮಾನ ಮಾಡಿದವರನ್ನು ಖಂಡಿಸ್ತೇನೆ: ಸಿಟಿ ರವಿ

ಇಡೀ ರಾಷ್ಟ್ರದಲ್ಲಿ ಮನೆಯಲ್ಲಿ ರಾಷ್ಟ್ರದ ಹಬ್ಬ ಆಚರಣೆ ಮಾಡಿದ್ದಾರೆ. ಮುಂದಿನ 25 ವರ್ಷದ ಗುರಿಯನ್ನು ಹಾಕಿಕೊಂಡು ಕೆಲಸ ಮಾಡಲು ಮುಂದಾಗಿರುವ ಪ್ರಧಾನಿ ಕಾರ್ಯವನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಸಿಟಿ ರವಿ ಹೇಳಿದ್ದಾರೆ.

CT Ravi condemn those who insulted Savarkar gow
Author
Bengaluru, First Published Aug 16, 2022, 5:06 PM IST

ಬೆಂಗಳೂರು (ಆ.16): ಇಡೀ ದೇಶ ಕನ್ಯಾಕುಮಾರಿ ಇಂದ ಕಾಶ್ಮೀರದ ವರೆಗೆ ಸ್ವಾತಂತ್ರ್ಯ ಉತ್ಸವದ ಅಮೃತಮಹೋತ್ಸವದ ಆಚರಣೆಯೊಂದಿಗೆ ಮನೆಮನೆಯಲ್ಲಿ ರಾಷ್ಟ್ರದ ಧ್ವಜ ಹಾರಿಸುವ ಮೂಲಕ ರಾಷ್ಟ್ರ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ಇಡೀ ರಾಷ್ಟ್ರದಲ್ಲಿ ಮನೆಯಲ್ಲಿ ರಾಷ್ಟ್ರದ ಹಬ್ಬ ಆಚರಣೆ ಮಾಡಿದ್ದಾರೆ. ಮುಂದಿನ 25 ವರ್ಷದ ಗುರಿಯನ್ನು ಹಾಕಿಕೊಂಡು ಕೆಲಸ ಮಾಡಲು ಮುಂದಾಗಿರುವ ಪ್ರಧಾನಿ ಕಾರ್ಯವನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿಕೆ ನೀಡಿದ್ದಾರೆ.  ರಾಷ್ಟ್ರ ಭಾವನೆ ಮಾತ್ರ ರಾಷ್ಟ್ರವನ್ನು ಉಳಿಸಬಲ್ಲದು. ಅದು ಈಗ ಜಾಸ್ತಿ ಆಗಿದೆ. ಬ್ರಿಟಿಷ್‌ ರ ವಿರುದ್ಧ ಕೇವಲ ಸಿಪಾಯಿ ದಂಗೆ ಎಂದು ನಮೂದಾಗಿದ್ದ 1857 ರ ಸ್ವಾತಂತ್ರ್ಯ ಸಂಗ್ರಾಮವನ್ನು ಕೃತಿಗೆ ಇಳಿಸಿ ಮದನ್ ಲಾಲ್ ದಿಂಗ್ರಾರಂತ ಶೋಕಿಲಾಲ ಆಗಿದ್ದ ನವಯುವಕನನ್ನು ರಾಷ್ಟ್ರ ಭಕ್ತನಾಗಿ ಬದಲಾಯಿಸಿ, ಅಭಿನವ ಭಾರತ ಕಟ್ಟಿ, ಬ್ರಿಟಿಷ್ ಗೆ ಸಿಂಹ ಸ್ವಪ್ನ ಆಗಿ, 50 ವರ್ಷಗಳ ಕರಿನೀರಿನ ಶಿಕ್ಷೆ ಅನುಭವಿಸಿ, ಅಂಡಮಾನ್ ಸೆರಮನೆಯಲ್ಲಿ ನರಕಯಾತನೆ ಅನುಭವಿಸಿ, ಬೇಡಿಯನ್ನೆ ಲೇಖನಿಯಾಗಿಸಿ.  ಗೋಡೆಯನ್ನೇ ಹಾಳೆಯಾಗಿಸಿ. ದೇಶ ಭಕ್ತಿ ಗೀತೆ ರಚಿಸಿದವರು ವೀರ್ ಸಾವರ್ಕರ್. ಆದ್ರೆ ಕೆಲವು ಮತಿಯ ಸಂಘಟನೆಗಳು ರಾಜಕೀಯ ಲಾಭವೇ ಸಿದ್ಧಾಂತ ಎಂದು ನಂಬಿ ಸಾವರ್ಕರ್ ಗೆ ಅಪಮಾನ ಮಾಡಿದವರನ್ನು ನಾನು ಖಂಡಿಸ್ತೇನೆ ಎಂದಿದ್ದಾರೆ.

ಆಗಿನ ಪ್ರಧಾನಿ ಇಂದಿರಾ ಗಾಂಧಿ ಮೇ 28-5- 1970 ರಲ್ಲಿ ಅಂಚೆ ಚೀಟಿ ಜಾರಿಗೆ ತಂದಿದ್ರು. 2003 ರಲ್ಲಿ ಪಾರ್ಲಿಮೆಂಟ್ ನ ಸೆಂಟ್ರಲ್ ಹಾಲ್ ನಲ್ಲಿ ಅವರ ಭಾವಚಿತ್ರ ಅನಾವರಣ ಮಾಡಲಾಯ್ತು. ಸಾವರ್ಕರ್ ಅವರ ದೂರ ದೃಷ್ಟಿ ಹೇಗಿತ್ತು ಅಂದ್ರೆ, ಸ್ವಾತಂತ್ರ್ಯ ಸಿಗೋದು ಖಚಿತ. ಆದ್ರೆ ಸ್ವಾತಂತ್ರ್ಯ ನಂತರ ದೇಶ ರಕ್ಷಣೆಗೆ ಸೈನ್ಯ ಸೇರಲು ಪ್ರೇರೇಪಣೆ. ಪಾಕಿಸ್ತಾನ ನಮ್ಮನ್ನು ಆವರಿಸಿದಾಗ ನಮ್ಮ ಸೈನ್ಯ ಗೆದ್ದಿತು.  ಸಾವರ್ಕರ್ ದೂರದೃಷ್ಟಿ ಕೆಲಸ ಮಾಡಿತು. ಕೆಲವರಿಗೆ ಇದು ಅರಿವೆ ಇಲ್ಲ. ಆ ಸಾಲಿನಲ್ಲಿ ಸಿದ್ದರಾಮಯ್ಯ ಇರೋದು ದುರಾದೃಷ್ಟ . ಧ್ವಜದಲ್ಲಿ ಅಶೋಕ ಚಕ್ರ ಹಾಕಿಸಿದ್ದು ಸಾವರ್ಕರ್
ಇದು ಶಾಂತಿ ಚಕ್ರ. ಯುದ್ಧ ಕಾಲದಲ್ಲಿ ಇದು ಸುದರ್ಶನ ಚಕ್ರ ಎಂದವರು ಸಾವರ್ಕರ್ ಎಂದು ಸಿಟಿ ರವಿ ಹೇಳಿದ್ದಾರೆ.

ಸನಾತನ ಧರ್ಮದ ಪ್ರೇರಪಕ ಸಾವರ್ಕರ್ ದೇಶ ತುಂಡು ಮಾಡಬೇಕು ಎಂದು ಮುಸ್ಲಿಂ ಲೀಗ್ ಪ್ರಯತ್ನ ಪಟ್ಟಾಗ ಅದನ್ನು ಖಂಡತುಂಡಾಗಿ ವಿರೋಧ ಮಾಡಿದವರು ಸಾವರ್ಕರ್. ಅಂದಿನಂದಿಲೇ ಅವರಿಗೆ ಸಾವರ್ಕರ್ ಮೇಲೆ ದ್ವೇಷ. ಅದನ್ನೆ ಮತಿಯವಾದಿಗಳು ಮುಂದುವರಿಸಿಕೊಂಡು ಬಂದಿದ್ದಾರೆ. ಅಂಬೇಡ್ಕರ್ ತನ್ನ ತಾಟ್ಸ್ ಆಫ್ ಪಾಕಿಸ್ತಾನ್ ಪುಸ್ತಕದಲ್ಲಿ ಒಂದು ರಾಷ್ಟ್ರದ  ಎರಡು ರಾಷ್ಟ್ರೀಯವಾದಿಗಳು ಇರೋದು ಸರಿಯಲ್ಲ, 
ಗ್ರೀಕ್ ಮತ್ತು ಟಕ್ರಿ ಉದಾಹರಣೆ ನೀಡಿ  ಎಲ್ಲಾ ಮುಸ್ಲಿಂರನ್ನು ಪಾಕಿಸ್ತಾನಕ್ಕೆ ಕಳಿಸಿ, ಅಲ್ಲಿರುವ ಎಲ್ಲಾ ಹಿಂದೂಗಳನ್ನು ಇಲ್ಲಿಗೆ ಕರೆತನ್ನಿ. ಅಲ್ಲಿ ತನಕ ಸಹಿ ಹಾಕಬೇಡಿ ಎಂದು ಅಂಬೇಡ್ಕರ್ ಹೇಳಿದ್ರು. ಈಗ ಸಾವರ್ಕರ್ ನೆಪ. ಅದಕ್ಕೆ ಕೆಲ ಕಾಂಗ್ರೆಸ್ ನಾಯಕರು ಬೆಂಬಲ ನೀಡ್ತಾ ಇರೋದು ದುರಾದೃಷ್ಟ.  ಎಂದು ಸಿಟಿ ರವಿ ಕಿಡಿಕಾರಿದರು.

ಕರಿನೀರ ಶಿಕ್ಷೆಯ ಕರಾಳತೆಯನ್ನು ಅನುಭವಿಸಿದ್ದ ದೇಶಭಕ್ತ ಸಾವರ್ಕರ್‌!

 ಶಿವಮೊಗ್ಗದಲ್ಲಿ ಚಾಕು ಇರಿತ ಆಗಿದೆ. ಕಠಿಣ ಕ್ರಮ ತಗೊಬೇಕು. ಮತೀಯ ಶಕ್ತಿಗಳನ್ನು ಮಟ್ಟ ಹಾಕಬೇಕು. ಆಘಾತದ ಸಂಗತಿ ಎಂದರೆ ಕೆಲವು ಐಟಿ ಕಂಪೆನಿಗಳು ಸ್ಲೀಪರ್ ಸೆಲ್ ಆಗಿ ಬದಲಾಗಿದೆ ಎನ್ನೋದನ್ನ ಟಿವಿಯಲ್ಲಿ ನೋಡಿದೆ. ಭಾರತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುವ ನೌಕರರು ಪಾಕಿಸ್ತಾನದ ರಾಷ್ಟ್ರ ಗೀತೆ ಹಾಕಿ ವಿಕೃತಿ ಮರೆದಿದ್ದಾರೆ ಎಂದು ವರದಿ ನೋಡಿದೆ. ಇದರ ಸತ್ಯಾಸತ್ಯತೆ ಅರಿಯಬೇಕು.  ಗೃಹ ಇಲಾಖೆ ಇದನ್ನು ಪತ್ತೆ ಹಚ್ಚಬೇಕು.  ಪಾಕಿಸ್ತಾನ ಆಕ್ರಮಿತ ಕಾಶ್ಮೀರ ವನ್ನು ಪಾಕಿಸ್ತಾನದ ಕಾಶ್ಮೀರ ಎಂದು, ಭಾರತದ ಭೂಭಾಗವನ್ನು ಭಾರತ ಆಕ್ರಮಿಸಿಕೊಂಡ ಕಾಶ್ಮೀರ ಎಂದೂ ಕೆಪಿ ಜಲೀಲ್ ಎಂದು ಹಾಕಿದ್ದಾರೆ. ಇದಕ್ಕೆ ಸಿಪಿಎಂ ಉತ್ತರ ನೀಡಬೇಕು. ದೇಶದ ಒಳಗೆ ಇಂತವರು ಇದ್ದಾರೆ. ಅವರ ಜೊತೆ ಕೆಲ ರಾಜಕಾರಣಿಗಳು ಸೇರಿದ್ದಾರೆ. ಮತ್ತೊಂದು ವಿಭಜನೆ ಬಯಸಿದಂತೆ ಕಾಣುತ್ತಿದೆ. ಇದರ ಬಗ್ಗೆ ಸಿಎಂ ಮತ್ತು ಗೃಹ ಸಚಿವರು ತನಿಖೆ ಮಾಡಬೇಕು ಎಂದು  ಹೇಳಿದರು.

ಸಾವರ್ಕರ್‌ ಅಂದ್ರೆ, ತತ್ವ, ತರ್ಕ, ತ್ಯಾಗದ ರೂಪ.. ಅಟಲ್‌ ಹೇಳಿದ್ದ ಮಾತುಗಳಲ್ಲಿತ್ತು ಮಹಾನ್‌ ನಾಯಕನ ನೋವು!

ಶಿವಮೊಗ್ಗ ಗಲಾಟೆ ಬಗ್ಗೆ ಒಬ್ಬನ ಕಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ್ದಾರೆ. ಪೊಲೀಸ್ ಏನು ಮಾಡಿಲ್ಲ ಎನ್ನಲ್ಲ. ಆದ್ರೆ ಇಂತಹ ದುಷ್ಯಕೃತ್ಯ ಮಾಡಿದವರನ್ನು ಉಳಿಸಲ್ಲ ಎನ್ನುವ ಭಯ ಮೂಡಬೇಕು. ಆದ್ರೆ ಹಾಗೆ ಮಾಡೋಕೆ ಯಾಕೊ ಯೋಚನೆ ಮಾಡ್ತಾ ಇದ್ದಾರೆ. ಆ ರೀತಿಯ ಕಠಿಣ ಕ್ರಮ ಮಾಡಬೇಕು ಎನ್ನೋದು ಸಾರ್ವಜನಿಕರ ಮನಸ್ಸಿನಲ್ಲಿ ಇದೆ. ಅಂದು ಪೊಲೀಸ್ ಮೇಲೆ ಕತ್ತಿ ಝಳಪಿಸಿದವರ ಮೇಲೆ ಆವತ್ತೆ ಕ್ರಮ ತಗೊಂಡಿದ್ದರೆ ಇಂತಹ ಘಟನೆ ಆಗ್ತಾ ಇರಲಿಲ್ಲ ಎನ್ನುವ ಅಭಿಪ್ರಾಯ ಸಾರ್ವಜನಿಕರಲ್ಲಿ ಇದೆ.  ಸರ್ಕಾರ ಕಠಿಣ ಕ್ರಮ ತಗೊತಾ ಇಲ್ಲ ಎನ್ನೋದನ್ನು ನೇರವಾಗಿಯೆ ಹೇಳಿದ ಸಿಟಿ ರವಿ.

Follow Us:
Download App:
  • android
  • ios