ಸಿಟಿ ರವಿ ಬಂಧನದಿಂದ ಭುಗಿಲೆದ್ದ ಆಕ್ರೋಶ, ನಾಳೆ ಚಿಕ್ಕಮಗಳೂರು ನಗರ ಬಂದ್‌ಗೆ ಕರೆ!
ಬಿಜೆಪಿ ನಾಯಕ ಸಿಟಿ ರವಿ ಬಂಧನ ವಿರೋಧಿಸಿ ಪ್ರತಿಭಟನೆ ತೀವ್ರಗೊಂಡಿದೆ. ಇದೀಗ ನಾಳೆ ಚಿಕ್ಕಮಗಳೂರು ಬಂದ್‌ಗೆ ಕರೆ ನೀಡಲಾಗಿದೆ.

ಚಿಕ್ಕಮಗಳೂರು(ಡಿ.19) ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪಡಿ ಬೆಳಗಾವಿ ಪೊಲೀಸರು ಬಿಜೆಪಿ ನಾಯಕ ಸಿಟಿ ರವಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಮತ್ತೊಂದೆ ಬಿಜೆಪಿ ಹೋರಾಟ ತೀವ್ರಗೊಳಿಸಿದೆ. ಇದೀಗ ಬಿಜೆಪಿ ಮಹತ್ವದ ಕರೆ ಕೊಟ್ಟಿದೆ. ನಾಳೆ(ಡಿ.20) ಚಿಕ್ಕಮಗಳೂರು ನಗರ ಬಂದ್‌ಗೆ ಕರೆ ನೀಡಿದೆ. ಸಿಟಿ ರವಿ ಬಂಧನ ವಿರೋಧಿಸಿ ಈ ಬಂದ್‌ಗೆ ಬಿಜೆಪಿ ಕರೆ ಕೊಟ್ಟಿದೆ.
ಸಿಟಿ ರವಿ ಬಂಧನವಾಗುತ್ತಿದ್ದಂತೆ ಚಿಕ್ಕಮಗಳೂರಿನನಲ್ಲಿ ಜಿಲ್ಲಾ ಬಿಜೆಪಿ ನಾಯಕರು ಸಭೆ ಸೇರಿದ್ದಾರೆ. ಸಿಟಿ ರವಿ ಮನೆಗೆ ಆಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷರು ಸೇರಿದಂತೆ ಜಿಲ್ಲಾ ಬಿಜೆಪಿ ಸದಸ್ಯರು ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಿಟಿ ರವಿ ಬಂಧನ ವಿರೋಧಿಸಿ ನಾಳೆ ಚಿಕ್ಕಮಗಳೂರು ನಗರ ಬಂದ್‌ಗೆ ಕರೆ ನೀಡಿದೆ. ನೂರಾರು ಬಿಜೆಪಿ ಕಾರ್ಯಕರ್ತರ ಜೊತೆ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸಭೆ ನಡೆಸಿ ಈ ಘೋಷಣೆ ಮಾಡಿದ್ದಾರೆ.
ಸಿಟಿ ರವಿ ಭೇಟಿಗೆ ವಕೀಲರಿಗೂ ಅವಕಾಶ ನೀಡದ ಬೆಳಗಾವಿ ಪೊಲೀಸ್, ಆಕ್ರೋಶಗೊಂಡ ಬಿಜೆಪಿ!
ಚಿಕ್ಕಮಗಳೂರು ನಗರ ಬಂದ್‌ಗೆ ಬಿಜೆಪಿ ಕರೆ ನೀಡುತ್ತಿದ್ದಂತೆ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ಹೆಚ್ಚುವರಿ ಭದ್ರತೆ ಕೈಗೊಳ್ಳಲು ಚಿಕ್ಕಮಗಳೂರು ಜಿಲ್ಲೆಗೆ ಐಜಿಪಿ ಅಮಿತ್ ಸಿಂದ್ ತುರ್ತಾಗಿ ಆಗಮಿಸುತ್ತಿದ್ದಾರೆ. ಇತ್ತ 15 ಹೆಚ್ಚುವುರಿ ಪೊಲೀಸ್ ಅಧಿಕಾರಿಗಳಿಗೂ ಬುಲಾವ್ ನೀಡಲಾಗಿದೆ. ಹೆಚ್ಚುವರಿ ಭದ್ರತೆಗೆ 6 ಕೆಎಸ್ಆರ್‌ಪಿ ತುಕಡಿಗೆ ನಿಯೋಜಿಸಲಾಗುತ್ತಿದೆ. ಹೊರ ಭಾಗದಿಂದ 100 ಪೊಲೀಸ್ ಪೇದೆ ನಿಯೋಜನೆಗೆ ಪೊಲೀಸ್ ಮುಂದಾಗಿದೆ.
ಚಿಕ್ಕಮಗಳೂರು ಪೊಲೀಸರ ಜೊತೆಗೆ ಅಕ್ಕ ಪಕ್ಕದ ಜಿಲ್ಲಾ ಪೊಲೀಸರಿಗೂ ಭದ್ರತೆ ಹೊಣೆ ನೀಡಲಾಗಿದೆ. ಚಿಕ್ಕಮಳೂರು ಬಿಜೆಪಿ ಜಿಲ್ಲಾ ಘಟಕ ನಾಳೆ ನಗರದಲ್ಲಿ ಭಾರಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಸಿಟಿ ರವಿ ಬಂಧನ ರಾಜಕೀಯ ಪ್ರೇರಿತ ಅನ್ನೋ ಆರೋಪಗಳು ಕೇಳಿಬಂದಿದೆ.
ಏನಿದು ಪ್ರಕರಣ?
ವಿಧಾನ ಪರಿಷತ್ತಿನಲ್ಲಿ ಇತ್ತೀಚೆಗೆ ಕೇಂದ್ರದಲ್ಲಿ ಭುಗಿಲೆದ್ದ ಅಂಬೇಡ್ಕರ್ ವಿವಾದ ಕುರಿತು ಪರ ವಿರೋಧಗಳು ನಡೆಯುತ್ತಿತ್ತು. ಇದರ ನಡುವೆ ಸಿಟಿ ರವಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಪದ ಬಳಕೆ ಕಾಂಗ್ರೆಸ್ ಕಾರ್ಯಕರ್ತರ ರೊಚ್ಚಿಗೆಬ್ಬಿಸಿದೆ. ವಿಧಾನ ಪರಿಷತ್ ಸದನದಿಂದ ಹೊರನಡೆದ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಜಾಪ್ರುಭುತ್ವ ದೇಗುಲದಲ್ಲೇ ಹೊಡೆದಾಟ? ಅಲ್ಲಿ ರಾಹುಲ್ ತಳ್ಳಾಟ ಆರೋಪ, ಇಲ್ಲಿ ಸಿಟಿ ರವಿ ಮೇಲೆ ಹಲ್ಲೆ!
ಇತ್ತ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಸುವರ್ಣ ಸೌಧಕ್ಕೆ ನುಗ್ಗಿ ಸಿಟಿ ರವಿ ಮೇಲೆ ಹಲ್ಲೆ ಮಾಡಿದ್ದಾರೆ ಆನ್ನೋ ಆರೋಪ ಕೇಳಿಬಂದಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ನೇರವಾಗಿ ಸುವರ್ಣ ಸೌಧಕ್ಕೆ ನುಗ್ಗಿ ಸಿಟಿ ರವಿ ವಿರುದ್ಧ ಅವಾಚ್ಯ ಪದಗಳಿಂದ ಆಕ್ರೋಸ ಹೊರಹಾಕಿದ್ದಾರೆ. ಇದೇ ವೇಳೆ ಕಾಲಿನಿಂದ ಒದ್ದಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಕೋಲಾಹಲದ ನಡುವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ ದೂರು ಹಿಡಿದು ಬೆಳಗಾವಿ ಪೊಲೀಸರು ಸುವರ್ಣ ಸೌಧಕ್ಕೆ ಆಗಮಿಸಿ ಸಿಟಿ ರವಿ ಬಂಧಿಸಿದ್ದಾರೆ. ಸಿಟಿ ರವಿ ಬಂಧನ ರಾಜ್ಯದಲ್ಲೇ ಭಾರಿ ಕೋಲಾಹಲ ಕಾರಣವಾಗಿದೆ. ಚಿಕ್ಕಮಗಳೂರಿನಲ್ಲಿ ಈಗಾಗಲೇ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಚಕ್ಕಮಗಳೂರಿನ ಬಾರ್‌ಗಳನ್ನು ಬಂದ್ ಮಾಡಿದ್ದಾರೆ. ಇತ್ತ ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿಯಲ್ಲಿ ಸಿಟಿ ರವಿ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಇದೀಗ ಎರಡೂ ಪಕ್ಷದ ಕಾರ್ಯಕ್ರರ್ತರ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದೆ
ದೆ.