Asianet Suvarna News Asianet Suvarna News

ಇಂದು ಭಾರತ-ನೆದರ್‌ಲ್ಯಾಂಡ್ ಮುಖಾಮುಖಿ; ಕೊಹ್ಲಿ ಮತ್ತೊಂದು ದಾಖಲೆ ಬರೆಯುವ ನಿರೀಕ್ಷೆಯಲ್ಲಿ ಅಭಿಮಾನಿಗಳು

ಇಂದು ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ನೆದರ್‌ಲ್ಯಾಂಡ್ ನಡುವೆ ಏಕದಿನ ವಿಶ್ವಕಪ್ ನ ಕೊನೆಯ ಪಂದ್ಯ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಶುರುವಾಗಲಿರುವ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಿರಲಿರುವ ಹಿನ್ನೆಲೆ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Cricket world cup 2023 India Netherlands match at M Chinnaswamy Stadium today rav
Author
First Published Nov 12, 2023, 12:56 PM IST

ಬೆಂಗಳೂರು (ನ.12): ಇಂದು ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ನೆದರ್‌ಲ್ಯಾಂಡ್ ನಡುವೆ ಏಕದಿನ ವಿಶ್ವಕಪ್ ನ ಕೊನೆಯ ಪಂದ್ಯ ನಡೆಯಲಿರುವ ಹಿನ್ನೆಲೆ ಬ್ಲೂ ಜರ್ಸಿ ಧರಿಸಿ ಕ್ರೀಡಾಂಗಣದತ್ತ ಹರಿದು ಬರುತ್ತಿರುವ ಕೊಹ್ಲಿ ಅಭಿಮಾನಿಗಳು.

ಮದ್ಯಾಹ್ನ 2 ಗಂಟೆಗೆ ಪಂದ್ಯ ಶುರುವಾಗಲಿರುವ ಹಿನ್ನೆಲೆ ಬೆಳಗಿನಿಂದಲೇ ಬ್ಲೂ ಜರ್ಸಿ, ಕೊಹ್ಲಿ ಮಾಸ್ಕ್ ಧರಿಸಿ ಬರುತ್ತಿರೋ ಅಭಿಮಾನಿಗಳ ದಂಡು. ಪಂದ್ಯ ಆರಂಭಕ್ಕೆ ಮುನ್ನವೇ ಅಭಿಮಾನಿಗಳ ಸಂಭ್ರಮ. ಈಗಾಗಲೇ ಕ್ರೀಡಾಂಗಣದ ಮುಂದೆ ಕೊಹ್ಲಿ ಶತಕ ಬಾರಿಸಿದ ವಿವಿಧ ಪೋಸುಗಳ ಫ್ಲೆಕ್ಸ್‌ಗಳನ್ನು ಸಾಲುಸಾಲಾಗಿ ನಿಲ್ಲಿಸಿರುವ ಅಭಿಮಾನಿಗಳು ಫ್ಲೆಕ್ಸ್ ಮುಂದೆ ಸೇಲ್ಫಿ ತೆಗೆದುಕೊಳ್ಳಲು ನೂಕುನುಗ್ಗಲು. ಇಂದಿನ ಪಂದ್ಯದಲ್ಲಿ ಮತ್ತೊಮ್ಮೆ ಕೊಹ್ಲಿ ವಿರಾಟ್ ರೂಪ ತೋರಿಸಿದರೆ ತೆಂಡೂಲ್ಕರ್‌ರ ಮತ್ತೊಂದು ದಾಖಲೆ ಮುರಿಯುತ್ತಾರೆ ಎಂಬ ನಿರೀಕ್ಷೆಯಲ್ಲಿ ಬಂದಿರುವ ಅಭಿಮಾನಿಗಳು. 

2019ರ ಸೋಲನ್ನು ಮರೆತಿಲ್ಲ ಭಾರತೀಯರು..! 4 ವರ್ಷಗಳ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಸಿಕ್ಕದೆ ಗೋಲ್ಡನ್ ಚಾನ್ಸ್

ಒಟ್ಟಿನಲ್ಲಿ ಇಂದು ನೆದರ್‌ಲ್ಯಾಂಡ್ ವಿರುದ್ಧ ನಡೆಯುತ್ತಿರುವ ಪಂದ್ಯವೂ ಹೈವೋಲ್ಟೇಜ್ ಆಗಿರುವ ಹಿನ್ನೆಲೆ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣದತ್ತ ಹರಿದುಬರುತ್ತಿದ್ದಾರೆ. ಇಂದು ಕ್ರೀಡಾಂಗಣದ ಸುತ್ತಮುತ್ತಾ ಸಂಚಾರದಟ್ಟಣೆ ಆಗಲಿದೆ. ಮುಂಜಾಗ್ರತಾ ಕ್ರಮವಾಗಿ ನಿನ್ನೆಯೇ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿರುವ ನಗರ ಪೊಲೀಸ್ ಆಯುಕ್ತರು.

ಈ ವಿಶ್ವಕಪ್‌ನಲ್ಲಿ ಪಾಕ್‌ಗಿಂತ ಅಫ್ಘನ್‌ ಆಟ ಚೆನ್ನಾಗಿತ್ತು: ವಾಸೀಂ ಅಕ್ರಂ

Follow Us:
Download App:
  • android
  • ios