ನಾಳೆ ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಕದನ; ಭಾರತದ ಗೆಲುವಿಗೆ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿದ ಕರವೇ!

ನಾಳೆ ಅಹಮದಾಬಾದ್ ನಲ್ಲಿ ನಡೆಯಲಿರುವ ವಿಶ್ವಕಪ್ ಏಕದಿನ ಫೈನಲ್ ಪಂದ್ಯಕ್ಕೆ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದು, ಭಾರತದ ಗೆಲುವಿಗಾಗಿ ಇಂದು ಬೆಳಗಾವಿಯಲ್ಲಿ ವಿಘ್ನೇಶ್ವರನಿಗೆ ಕರವೇ ಕಾರ್ಯಕರ್ತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಗೆದ್ದು ಬಾ ಇಂಡಿಯಾ ಎಂದು ಘೋಷಣೆ ಕೂಗಿ ಶುಭ ಕೋರಿದ ಕರವೇ ಕಾರ್ಯಕರ್ತರು.

Cricket world cup 2023  final match between India Australia tomorrow; pro kannadiga workers special worship belagavi rav

ಬೆಳಗಾವಿ (ನ.18): ಕಿವೀಸ್ ತಂಡವನ್ನು ಮಣಿಸಿ ಟೀಂ ಇಂಡಿಯಾ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ನಾಳೆ ಭಾನುವಾರ(ನ.19) ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವಕಪ್ ಫೈನಲ್‌ನ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರೇಮಿಗಳ ಕಾತುರದಿಂದ ಕಾಯುವಂತೆ ಮಾಡಿದೆ. ಭಾರತ ತಂಡ ಈ ಬಾರಿ ವಿಶ್ವಕಪ್ ಗೆಲ್ಲಲು ದೇಶಾದ್ಯಂತ ಕ್ರಿಕೆಟ್ ಪ್ರೇಮಿಗಳು ವಿಶೇಷ ಪೂಜೆ, ಹೋಮ ಹವನ ಮಾಡುತ್ತಿದ್ದಾರೆ. 

ಭಾರತ ತಂಡ ವಿಶ್ವಕಪ್ ಫೈನಲ್ ಗೆಲುವಿಗಾಗಿ ಇಂದು ಬೆಳಗಾವಿಯಲ್ಲಿ ವಿಘ್ನೇಶ್ವರನಿಗೆ ಕರವೇ ಕಾರ್ಯಕರ್ತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿರುವ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದ ಕರವೇ ಕಾರ್ಯಕರ್ತರು. ಕರ್ನಾಟಕದ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಪೂಜೆ ಸಲ್ಲಿಸಿದರು ಬಳಿಕ 'ಗೆದ್ದು ಬಾ ಭಾರತ' ಎಂದು ಜಯಘೋಷ ಕೂಗಿದರು.

ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರು; ಪಬ್ಲಿಕ್‌ನಲ್ಲಿ ಸ್ಕ್ರೀನಿಂಗ್ ಅಳವಡಿಸಲು ಪೊಲೀಸ್ ಅನುಮತಿ ಕಡ್ಡಾಯ!

ಫೈನಲ್ ಪಂದ್ಯದಲ್ಲಿ ಭಾರತ ಹೊಸ ಇತಿಹಾಸ ನಿರ್ಮಿಸುತ್ತೆ. ಸೋಲರಿಯದ ತಂಡ ಭಾರತ ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲೂ ಗೆಲುವು ಸಾಧಿಸಿ ಅಧಿಕಾರಯುತವಾಗಿ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ ಈ ಬಾರಿ ವಿಶ್ವಕಪ್ ಭಾರತದ ಮುಡಿಗೇರಲಿದೆ ಎಂದ ಕರವೇ ಕಾರ್ಯಕರ್ತರು. ತಂಡದ ಎಲ್ಲಆಟಗಾರರ ಪರ ಘೋಷಣೆ ಕೂಗಿ ಟೀಂ ಇಂಡಿಯಾಗೆ ಕರವೇ ಕಾರ್ಯಕರ್ತರ ಚೀರ್ ಅಪ್ ಮಾಡಿದರು.

ಭಾರತ ತಂಡದ ಗೆಲುವಿಗೆ ದರ್ಗಾದಲ್ಲಿ ಮುಸ್ಲಿಂ ಬಾಂಧವರ ವಿಶೇಷ ಪ್ರಾರ್ಥನೆ; ಇತ್ತ ಆರ್‌ಆರ್‌ ನಗರದ ಅರ್ಚಕರಿಂದ ಚಂಡಿಕಾ ಹೋಮ!

Latest Videos
Follow Us:
Download App:
  • android
  • ios