ಗೋಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಹಿಂಜಾವೇ ಮುಖಂಡ ಒತ್ತಾಯ

ನಮ್ಮ ದೇಶದ ಪವಿತ್ರವಾದ ದೇವರ ಸಮಾನವಾದ ಗೋವು ತಾಯಿ ಇದ್ದಂತೆ. ಆದರೆ, ರಾಜ್ಯದ ಎಲ್ಲೆಡೆ ಗೋವುಗಳ ಮಾರಣಹೋಮ ನಡೆಯುತ್ತಿದೆ. ಇದನ್ನು ನೋಡಿಯೂ ನಾವು ಸುಮ್ಮನೆ ಕುಳಿತುಕೊಳ್ಳದೇ ಗೋಹತ್ಯೆ ಮಾಡುವವರ ಕೈ ಕಡಿಯಬೇಕಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹಸಂಯೋಜಕ ಶ್ರೀಕಾಂತ ಹೊರಕೇರಾ ಆಕ್ರೋಶ ಹೊರಹಾಕಿದರು.

Cow slaughter issue VHP leader hokera shrikanth outraged against coow slaughters at bagalkote rav

ಗುಳೇದಗುಡ್ಡ (ಜು.6) :  ನಮ್ಮ ದೇಶದ ಪವಿತ್ರವಾದ ದೇವರ ಸಮಾನವಾದ ಗೋವು ತಾಯಿ ಇದ್ದಂತೆ. ಆದರೆ, ರಾಜ್ಯದ ಎಲ್ಲೆಡೆ ಗೋವುಗಳ ಮಾರಣಹೋಮ ನಡೆಯುತ್ತಿದೆ. ಇದನ್ನು ನೋಡಿಯೂ ನಾವು ಸುಮ್ಮನೆ ಕುಳಿತುಕೊಳ್ಳದೇ ಗೋಹತ್ಯೆ ಮಾಡುವವರ ಕೈ ಕಡಿಯಬೇಕಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹಸಂಯೋಜಕ ಶ್ರೀಕಾಂತ ಹೊರಕೇರಾ ಆಕ್ರೋಶ ಹೊರಹಾಕಿದರು.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಗೋಹತ್ಯೆ ಕಾನೂನು ನಿಷೇಧಿಸುತ್ತಿರುವ ಸರ್ಕಾರದ ನಿರ್ಧಾರ ಖಂಡಿಸಿ ಬುಧವಾರ ಅಂಗಡಿ ಮುಂಗಟ್ಟುಗಳು ಹಾಗೂ ಭಾರತ ಮಾರುಕಟ್ಟೆಯ ವಾರದ ಸಂತೆಯೂ ಸ್ವಯಂ ಪ್ರೇರಿತವಾಗಿ ಸಂಜೆವರೆಗೆ ಬಂದ್‌ ಮಾಡಲಾಗಿತ್ತು. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದು ಹರದೊಳ್ಳಿ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಯಿತು.

ಬಕ್ರೀದ್ ಹಬ್ಬದಂದು ಗೋಹತ್ಯೆ ತಡೆದಿದ್ದ ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧ ಎಫ್‌ಐಆರ್ ದಾಖಲು!

ಈ ವೇಳೆ ಮಾತನಾಡಿದ ಅವರು, ರಾಮನ ಹೆಸರು ಇಟ್ಟುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರ ವೋಟಿಗಾಗಿ ಬಹುಸಂಖ್ಯಾತ ಹಿಂದುಗಳ ಭಾವನೆಗೆ ದಕ್ಕೆ ತರುತ್ತಿದ್ದಾರೆ. ಹಿಂದುಗಳ ಘೋಷಣೆಗಳು ಈಗ ಬದಲಾಗಬೇಕಿದೆ. ಯಾರು ಗೋಹತ್ಯೆ ಮಾಡ್ತಾನೋ ಅವರ ಕೈ ಕಡಿಯಬೇಕು. ಅವರು ಕಾನೂನು ಉಲ್ಲಂಘನೆ ಮಾಡಿದರೆ ನಾವು ಸುಮ್ಮನಿರಬೇಕೆ? ನಮ್ಮ ತಾಯಿಯ ಕುತ್ತಿಗೆಗೆ ಕತ್ತಿ ಬೀಸುತ್ತಾರೋ ಅವರ ಕೈ ಕಡಿಯಬೇಕು. ಗೋ ಹತ್ಯೆ ಮಾಡಿದವರನ್ನು ಹಿಡಿದುಕೊಟ್ಟರೆ ಅಂತವರ ಮೇಲೆ ಕೇಸ್‌ ದಾಖಲಿಸುತ್ತಾರೆ. ಇದೆಂತ ಕಾನೂನು ಎಂದು ಗುಡುಗಿದರು.

ಶ್ರೀಗುರುಬಸವ ದೇವರು ಮಾತನಾಡಿ, ಬಾದಾಮಿಯಲ್ಲಿ ಬಕ್ರೀದ್‌ ಹಬ್ಬದಲ್ಲಿ ಅನೇಕ ಗೋಹತ್ಯೆ ಮಾಡಿದವರು ಸರ್ವನಾಶವಾಗಲಿ. ಗೋಹತ್ಯೆ ಎಲ್ಲಿಯೇ ನಡೆಯಲಿ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಭಾರತದಲ್ಲಿ ಗೋವಿಗೆ ಪೂಜ್ಯ ಸ್ಥಾನವಿದೆ ಎಂದರು.

ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ಒಪ್ಪತ್ತೇಶ್ವರಮಠದ ಅಭಿನವ ಒಪ್ಪತೇಶ್ವರ ಶ್ರೀಗಳು ಮಾತನಾಡಿ, ರಾಜಕಾರಣಿಗಳಿಗೆ ಅಧಿಕಾರ ಶಾಶ್ವತವಲ್ಲ. ಮತಕ್ಕಾಗಿ ಧರ್ಮದಲ್ಲಿ ರಾಜಕಾರಣ ಮಾಡಬಾರದು. ಗೋಹತ್ಯೆ ನಿಲ್ಲಬೇಕು. ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಅತ್ಯಂತ ಶಿಸ್ತು ಬದ್ಧವಾಗಿ ಜಾರಿಗೆ ಬರಬೇಕೆಂದರು.

ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ ವಾಪಸ್‌ ಪಡೆದರೆ ವಿಧಾನಸೌಧಕ್ಕೆ ಮುತ್ತಿಗೆ: ಮಠಾಧೀಶರ ಎಚ್ಚರಿಕೆ

ಗೋವಿನಲ್ಲಿ ಅಪಾರವಾದ ಶಕ್ತಿ ಇದೆ. ಪ್ರಾಣಿ ಕೊಲ್ಲುವುದು ಧರ್ಮವಲ್ಲ. ಜಾಗೃತಿ ಮೂಡಿಸಬೇಕು. ಧರ್ಮ, ಭಾಷೆ, ಪ್ರಾಂತ್ಯ ಬಿಟ್ಟು ಕಾಮಧೇನು ಕೊಲೆ ನಿಲ್ಲಲಿ. ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಿ ಜನಾಂಗೀಯ ಗೌರವಕ್ಕೆ ಧಕ್ಕೆ ಆಗದಂತೆ ಸರ್ಕಾರ ಗಮನ ಹರಿಸಬೇಕು.

-ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀ

ಗೋಹತ್ಯೆ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಸಂಘಟಿತ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಬೇಕಾಗಿದೆ.

-ಕಾಶಿನಾಥ ಶ್ರೀ ಮುರುಘಾಮಠ

Latest Videos
Follow Us:
Download App:
  • android
  • ios