ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ, ಗುಣಮುಖ ಸಂಖ್ಯೆ ಹೆಚ್ಚಳ
ನಿನ್ನೆ 755 ಕೇಸ್, 976 ಗುಣಮುಖ | ಸಕ್ರಿಯ ಸೋಂಕಿತರ ಸಂಖ್ಯೆ 11 ಸಾವಿರಕ್ಕಿಂತ ಕೆಳಗೆ | ಕೋರೋನಾಗೆ ಕೇವಲ 3 ಬಲಿ
ಬೆಂಗಳೂರು(ಜ.03): ರಾಜ್ಯದಲ್ಲಿ ಶನಿವಾರ 755 ಕೊರೋನಾ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿದೆ. 976 ಮಂದಿ ಗುಣಮುಖರಾಗಿದ್ದಾರೆ. ಮೂವರು ಸೋಂಕಿತರು ಮೃತರಾಗಿದ್ದಾರೆ.
ಒಟ್ಟು ಕೊರೋನಾ ಬಾಧಿತರ ಸಂಖ್ಯೆ 9.21 ಲಕ್ಷಕ್ಕೆ ತಲುಪಿದ್ದು ಈ ಪೈಕಿ 8.98 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 10,834 ಸಕ್ರಿಯ ಪ್ರಕರಣಗಳಿದ್ದು ಇವರಲ್ಲಿ 186 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12,099 ಮಂದಿ ಮರಣವನ್ನಪ್ಪಿದ್ದಾರೆ. 19 ಮಂದಿ ಕೊರೋನಾ ಸೋಂಕಿತರು ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಶೇ.50 ಮಂದಿಗೆ ಕೊರೋನಾ?
ಶನಿವಾರ 1.14 ಲಕ್ಷ ಕೊರೋನಾ ಪರೀಕ್ಷೆಗಳು ನಡೆದಿದೆ. ಒಟ್ಟು 1.43 ಕೋಟಿ ಪರೀಕ್ಷೆಗಳು ಈವರೆಗೆ ನಡೆಸಲಾಗಿದೆ. ಈ ಮಧ್ಯೆ ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಲಕ್ಷದ ಮೇಲೆ ನಡೆಯುತ್ತಿದೆ. ಬೆಂಗಳೂರು ನಗರ, ತುಮಕೂರು ಮತ್ತು ಧಾರವಾಡ ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿನಿಂದ ಅಸುನೀಗಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಬೆಂಗಳೂರು ನಗರ ಜಿಲ್ಲೆಯಲ್ಲಿ 343, ಬಾಗಲಕೋಟೆ 4, ಬಳ್ಳಾರಿ 22, ಬೆಳಗಾವಿ 16, ಬೆಂಗಳೂರು ಗ್ರಾಮಾಂತರ 12, ಬೀದರ್ 7, ಚಾಮರಾಜನಗರ 13, ಚಿಕ್ಕಬಳ್ಳಾಪುರ 29, ಚಿಕ್ಕಮಗಳೂರು 11, ಚಿತ್ರದುರ್ಗ 5, ದಕ್ಷಿಣ ಕನ್ನಡ 37, ದಾವಣಗೆರೆ 4, ಧಾರವಾಡ 11, ಗದಗ 1, ಹಾಸನ 7, ಹಾವೇರಿ 3, ಕಲಬುರಗಿ 17, ಕೊಡಗು 12, ಕೋಲಾರ 7, ಕೊಪ್ಪಳ 5, ಮಂಡ್ಯ 15, ಮೈಸೂರು 78, ರಾಯಚೂರು 5, ಶಿವಮೊಗ್ಗ 4, ತುಮಕೂರು 20, ಉಡುಪಿ 12, ಉತ್ತರ ಕನ್ನಡ 28, ವಿಜಯಪುರ 25 ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಬ್ಬರಲ್ಲಿ ಕೊರೋನಾ ಸೋಂಕು ಧೃಢ ಪಟ್ಟಿದೆ.