ವಿದೇಶದಿಂದ ಬರುವವರಿಗೆ ಕೋವಿಡ್ ಪರೀಕ್ಷೆ ಇಲ್ಲ!
- ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇದಿನೇ ಇಳಿಕೆಯಾಗುತ್ತಿರುವ ಹಿನ್ನೆಲೆ
- ಸರ್ಕಾರ ಪರಿಷ್ಕೃತ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಿದೆ
ಬೆಂಗಳೂರು (ಅ.19): ರಾಜ್ಯದಲ್ಲಿ ಕೋವಿಡ್ (Covid) ಪ್ರಕರಣಗಳ ಸಂಖ್ಯೆ ದಿನೇದಿನೇ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ (Govt) ಪರಿಷ್ಕೃತ ಕೋವಿಡ್ ಮಾರ್ಗಸೂಚಿ (Covid Rules) ಬಿಡುಗಡೆ ಮಾಡಿದ್ದು, ಈಜುಕೊಳ (Swimming Fool) ಆರಂಭ, 1ರಿಂದ 5ನೇ ತರಗತಿ ಪುನಾರಂಭಕ್ಕೆ ಅನುಮತಿಸಿದೆ. ವಿಮಾನ ನಿಲ್ದಾಣಗಳಲ್ಲಿ (Airport) ವಿದೇಶಿ ಪ್ರಯಾಣಿಕರ ಆರೋಗ್ಯ ತಪಾಸಣೆ, ಕೋವಿಡ್ ಪರೀಕ್ಷೆಗೆ (Covid test) ವಿನಾಯಿತಿ ಕಲ್ಪಿಸಿದೆ.
ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದಲೂ ಪಾಸಿಟಿವಿಟಿ ದರ (positivity Rate) ಇಳಿಕೆಯಾಗಿದೆ. ಅಲ್ಲದೆ ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಚಟುವಟಿಕೆಗಳಿಗೆ ಅವಕಾಶ ನೀಡಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿತ್ತು. ಈ ಶಿಫಾರಸಿನ ಅನ್ವಯ ಸರ್ಕಾರ ಹೊಸ ಕೋವಿಡ್-19 ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಇವುಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ.
ಒಂದೂವರೆ ವರ್ಷದ ಬಳಿಕ ಅತ್ಯಂತ ಕನಿಷ್ಠ ಕೋವಿಡ್ ಕೇಸ್ : ಭಾರೀ ಇಳಿಕೆ
ಹೊಸ ಮಾರ್ಗಸೂಚಿಗಳೇನು: ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ (Forign) ಆಗಮಿಸುವವರ ಆರೋಗ್ಯ ತಪಾಸಣೆ (Health Checkup) ಕ್ರಮಗಳನ್ನು ಸರಳಗೊಳಿಸಲಾಗಿದೆ. ಪ್ರಯಾಣಿಕರಿಗೆ ಎಸ್‌ಪಿಒ2 (SPO) ಸಾಮಾನ್ಯ ತಪಾಸಣೆಯನ್ನು ನಿಲ್ಲಿಸಲು (ಜ್ವರ, ಕೆಮ್ಮು, ಶೀತ, ಉಸಿರಾಟದಲ್ಲಿ ತೊಂದರೆ ಪ್ರಕರಣಗಳನ್ನು ಹೊರತುಪಡಿಸಿ) ಆದೇಶಿಸಿದೆ. ಕೇಂದ್ರ ಸರ್ಕಾರದ (Central govt) ಸೂಚಿಸಿರುವ ದೇಶಗಳನ್ನು ಹೊರತುಪಡಿಸಿ, ಉಳಿದಂತೆ ವಿದೇಶಗಳಿಂದ ಆಗಮಿಸಿದ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ (RTPCR) ಟೆಸ್ಟ್ ರಿಪೋರ್ಟ್ (Test Report) ಚೆಕ್ ಮಾಡುವುದನ್ನು ನಿಲ್ಲಿಸುವುದು. ಇದರ ಬದಲು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮೊದಲೇ ತಮ್ಮ ಆರ್‌ಟಿಪಿಸಿಆರ್ ರಿಪೋರ್ಟ್ ಅನ್ನು ಏರ್ ಸುವಿಧಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಬೇಕು. ಇದನ್ನು ಆಯಾ ಏರ್‌ಲೈನ್‌ಗಳು ಪರಿಶೀಲಿಸಬೇಕು ಎಂದು ಸೂಚಿಸಿದೆ. ಪ್ರಯಾಣಿಕರನ್ನು ಸ್ವಯಂಚಾಲಿತ ಥರ್ಮಲ್ ಕ್ಯಾಮರಾ ಮೇಲ್ವಿಚಾರಣೆ ಮಾಡುವುದು ಮುಂದುವರೆಯಲಿದೆ.
ಆದರೆ, ಬ್ರಿಟನ್‌ನಿಂದ ಆಗಮಿಸುವ ಪ್ರಯಾಣಿಕರು ಭಾರತ ಸರ್ಕಾರದ ಕ್ವಾರಂಟೈನ್ ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ.
ಬೆಂಗ್ಳೂರಲ್ಲಿ 2ನೇ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಳ
ಈಜುಕೊಳಗಳಿಗೆ ಅವಕಾಶ: ಈಜುಕೊಳಗಳನ್ನು ಕೆಲವು ಷರತ್ತುಗಳ ಮೇರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಈಜುಕೊಳದ (Swimming Pool) ಒಟ್ಟು ಸಾಮರ್ಥ್ಯದ ಶೇ.50ರಷ್ಟುಮಂದಿಗೆ ಮಾತ್ರವೇ ಪ್ರವೇಶಕ್ಕೆ ಅನುಮತಿ ನೀಡಿದೆ. ಪ್ರತಿ ಬ್ಯಾಚ್‌ನಲ್ಲಿ ಎಷ್ಟುಜನರಿಗೆ ಅವಕಾಶವಿದೆ ಎಂಬುದನ್ನು ಪ್ರವೇಶದ್ವಾರದಲ್ಲಿ ನಮೂದಿಸಬೇಕು. ಜನರು ಈಜುಕೊಳಕ್ಕೆ ಪ್ರವೇಶಿಸುವ ಸಮಯದಲ್ಲಿ ಜ್ವರ, ಉಸಿರಾಟದ ತೊದರೆ ಮೊದಲಾದ ಲಕ್ಷಣಗಳನ್ನು ತಪಾಸಣೆ ಮಾಡಬೇಕು. ಯಾವುದೇ ರೋಗಲಕ್ಷಣಗಳು ಇಲ್ಲದವರನ್ನು ಮಾತ್ರವೇ ಒಳಗೆ ಬಿಡಬೇಕು. ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರವೇ ಅವಕಾಶ ನೀಡಬೇಕು. ಪ್ರತಿ ಬ್ಯಾಚ್ ಮುಗಿದ ಕೂಡಲೇ ಶೌಚಾಲಯ ಮೊದಲಾದ ಪ್ರದೇಶಗಳನ್ನು ಸ್ವಚ್ಛಗೊಳಿಸಬೇಕು ಎಂದು ಆದೇಶಿಸಿದೆ.
1ರಿಂದ 5ನೇ ತರಗತಿಗೆ ಅನುಮತಿ: 1ರಿಂದ 5ನೇ ತರಗತಿಗಳನ್ನು ಅಕ್ಟೋಬರ್ 25ರಿಂದ ಪುರಾಂಭ ಮಾಡಲು ಅನುಮತಿ ನೀಡಲಾಗಿದೆ. ಆದರೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ನೀಡಿರುವ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಸೂಚಿಸಿದೆ.