ಸಿಕ್ಕಾಪಟ್ಟೆ ಆಂಬುಲೆನ್ಸ್ ಹಣ ದಾಹಕ್ಕೆ ಸರ್ಕಾರ ಬ್ರೇಕ್
- ಸಾಕಷ್ಟು ಸುಲಿಗೆ ಮಾಡುತ್ತಿದ್ದ ಆಂಬುಲೆನ್ಸ್ ಗಳ ಹಣ ದಾಹಕ್ಕೆ ಕೊನೆಗೂ ಬ್ರೇಕ್
- ರಾಜ್ಯ ಸರ್ಕಾರ ಆಂಬುಲೆನ್ಸ್ ಗೆ ದರ ನಿಗದಿ ಮಾಡಿ ಆದೇಶ
- ಮನಸ್ಸಿಗೆ ಬಂದಷ್ಟು ಹಣ ವಸೂಲಿ ಮಾಡುತ್ತಿರುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ
ಬೆಂಗಳೂರು (ಮೇ.21): ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಇದನ್ನೇ ದಂಧೆಯಾಗಿಸಿಕೊಂಡು ಸಾಕಷ್ಟು ಸುಲಿಗೆ ಮಾಡುತ್ತಿದ್ದ ಆಂಬುಲೆನ್ಸ್ ಗಳ ಹಣ ದಾಹಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ.
ರೋಗಿಗಳನ್ನು ಸಾಗಿಸುವಾಗ ಮನಸ್ಸಿಗೆ ಬಂದಷ್ಟು ಹಣ ವಸೂಲಿ ಮಾಡುತ್ತಿರುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿದ್ದು, ರಾಜ್ಯ ಸರ್ಕಾರ ಆಂಬುಲೆನ್ಸ್ ಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.
ಖಾಸಗಿ ಅಂಬ್ಯುಲೆನ್ಸ್‌ಗಳಿಗೆ ಏಕರೂಪದ ದರ ನಿಗದಿ ..
10 ಕಿಲೋ ಮೀಟರ್ ಗೆ ಒಂದೂವರೆ ಸಾವಿರ ದರ ನಿಗದಿ ಮಾಡಿದ್ದು, 10 ಕಿ.ಮೀ. ನಂತರ ಕಿಲೋಮೀಟರ್ ಗೆ 120 ರು. ಚಾರ್ಜ್ ಮಾಡಬೇಕು. ವೈಯ್ಟಿಂಗ್ ಚಾರ್ಜ್ ಪ್ರತಿ ಗಂಟೆಗೆ 200 ರು. ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಉಚಿತ ಆ್ಯಂಬುಲೆನ್ಸ್ ಸೇವೆ ನೀಡುತ್ತಿರುವ ಏಕೈಕ ನಟ ಅರ್ಜುನ್ ಗೌಡ ಸಂದರ್ಶನ!
ಲೈಫ್ ಸಪೋರ್ಟ್ ಇರುವ ಆಂಬುಲೆನ್ಸ್ ಪ್ರತಿ 10 ಕಿಲೋ ಮೀಟರ್‌ಗೆ 2000 ರು. ದರ ನಿಗದಿ ಮಾಡಲಾಗಿದೆ. ನಂತರದ ಕಿಲೋ ಮೀಟರ್ ಗಳಿಗೆ 120 ರು. ದರ ಪಡೆಯಬೇಕೆಂದು ಸೂಚಿಸಿದೆ. ವೈಯ್ಟಿಂಗ್ ಚಾರ್ಜ್ 250 ರು.ಪಡೆಯಬೇಕೆಂದು ಸೂಚನೆ ನೀಡಲಾಗಿದೆ.
ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ವೈದ್ಯಕೀಯ ಸಚಿವ ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.