ಬೆಂಗಳೂರು (ಮೇ.11): ರಾಜ್ಯದಲ್ಲಿ ಕೊರೋನಾ ದಿನದಿನವೂ ಏರುಗತಿಯಲ್ಲೇ ಸಾಗುತ್ತಿದ್ದು ಇಳಿಯುವ ಲಕ್ಷಣಗಳೇ ಇಲ್ಲದಂತಾಗಿದೆ. ಈಗಾಗಲೇ ದೇಶದಲ್ಲಿ ಸೋಂಕು, ಸಾವಿನ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದ್ದು ಆತಂಕ ಉಂಟು ಮಾಡಿದೆ. ಇದರ ಬೆನ್ನಲ್ಲೇ ಮತ್ತೊಂದು ಆತಂಕದ ವಿಚಾರ ಇಲ್ಲಿದೆ. 

ನಿಮ್ಮ ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಜಾಗರೂಕರಾಗಿರಿ.  ಮೇ ತಿಂಗಳಲ್ಲಿ ಕೊರೊನಾಗೆ ಪುಟ್ಟ ಪುಟ್ಟ ಕಂದಮ್ಮಗಳು ಹೆಚ್ಚು ಟಾರ್ಗೆಟ್ ಆಗುತ್ತಿವೆ. ನೀವು ಎಚ್ಚರ ತಪ್ಪಿದಲ್ಲಿ ನಿಮ್ಮ ಮಕ್ಕಳು ಸೋಂಕಿತರಾಗಲು ನೀವೆ ಕಾರಣ ಆಗಬೇಕಾಗುತ್ತದೆ.  ಕೇವಲ ಹತ್ತು ದಿನಗಳಲ್ಲಿ‌ 6480 ಮಕ್ಕಳು ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. 

ಕೊರೋನಾ 2 ಅಲೆ ನಡುವೆ ಮೂರನೇ ಅಲೆ ಅಪ್ಪಳಿಸುವ ಸೂಚನೆ: ಮಕ್ಕಳೇ ಟಾರ್ಗೆಟ್‌?

ಶೇಕಾಡ 90 ರಷ್ಟು ಮಕ್ಕಳು ಸೋಂಕಿತರ ಪ್ರಾರ್ಥಮಿಕ ಹಾಗೂ ದ್ವಿತೀಯ ಸಂಪರ್ಕಿತರಾಗಿದ್ದಾರೆ. ಸೋಂಕಿತ ಮಕ್ಕಳ  ಸಂಖ್ಯೆ ದಿನದಿನವೂ ಏರಿಕೆಯಾಗುತ್ತಲೇ ಇದೆ. 

ಈ ನಿಟ್ಟಿನಲ್ಲಿ ಸೋಂಕಿನ ಲಕ್ಷಣಗಳಿದ್ದವರು ಮಕ್ಕಳಿಂದ ದೂರ ಇರುವುದು ಒಳಿತಾಗಿದ್ದು,  ತಕ್ಷಣವೆ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಮಕ್ಕಳಿಗೆ ವೇಗವಾಗಿ ಸೋಂಕು ತಗುಲುತ್ತದೆ. 

ಮೇ ತಿಂಗಳಲ್ಲಿ ಕೊರೋನಾ ಸೋಂಕಿಗೆ ಒಳಗಾಗುತ್ತಿರುವ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು,  10 ವರ್ಷದೊಳಗಿನ ಮಕ್ಕಳನ್ನೇ ಹೆಚ್ಚಾಗಿ ಕಾಡುತ್ತಿದೆ.  ಪ್ರತಿದಿನ‌ ಸೋಂಕಿಗೆ 600 ರಿಂದ 700 ಮಕ್ಕಳು ಗುರಿಯಾಗುತ್ತಿದ್ದಾರೆ.   

2-11 ವರ್ಷದ ಮಕ್ಕಳಿಗೆ ಲಸಿಕೆ : ಶೀಘ್ರ ಫೈಝರ್‌ನಿಂದ ಅರ್ಜಿ .
 
ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಪತ್ತೆಯಾಗುತ್ತಿರುವುದ ಮಾತ್ರ  ದಿನದಿನವೂ ಏರಿಕೆಯಾಗುತ್ತಲೇ ಇದೆ. 

ಮೇ - ದಿನಾಂಕ   - ಸೋಂಕಿಗೆ ಒಳಗಾದ ಮಕ್ಕಳ ಸಂಖ್ಯೆ

ಮೇ 1 - 559
ಮೇ 2- 640
ಮೇ 3- 662
ಮೇ 4- 644
ಮೇ 5- 715
ಮೇ 6- 678
ಮೇ 7- 681
ಮೇ 8 - 682
ಮೇ 9- 698
ಮೇ 10 -521

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona