ವಾಷಿಂಗ್ಟನ್‌ (ಮೇ.07): ಅಮೆರಿಕದ ಫೈಝರ್‌ ಔಷಧ ತಯಾರಿಕಾ ಕಂಪನಿ 2ರಿಂದ 11 ವರ್ಷ ಒಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ (ಎಫ್‌ಡಿಎ)ಗೆ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. 

ಅಲ್ಲದೇ 16ರಿಂದ 85 ವರ್ಷದ ಒಳಗಿನವರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ಬಳಕೆಗೆ ಅನುಮೋದನೆ ನೀಡುವಂತೆ ಕೋರಿಕೆ ಸಲ್ಲಿಸುವುದಕ್ಕೂ ಕಂಪನಿ ಸಿದ್ಧತೆ ಮಾಡಿಕೊಂಡಿದೆ.

ನಮ್ಮ ಲಸಿಕೆಗೂ ಅನುಮತಿ ಕೊಡಿ: ಭಾರತಕ್ಕೆ ಫೈಝರ್‌ ಕಂಪನಿ ಮೊರೆ!

 12ರಿಂದ 15 ವರ್ಷದ ಒಳಗಿನವರಿಗೆ ಲಸಿಕೆ ತುರ್ತು ಬಳಕೆಗೆ ಮುಂದಿನ ವಾರದ ವೇಳೆಗೆ ಎಫ್‌ಡಿಎ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಇದೆ ಎಂದು ಕಂಪನಿ ತಿಳಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona