Asianet Suvarna News Asianet Suvarna News

ನಿರಂತರ 75 ದಿನ ಈಶ ಫೌಂಡೇಶನ್‌ ಕೋವಿಡ್‌ ಸೇವೆ

  • ಕೊರೋನಾ ಎರಡನೇ ಅಲೆ ವೇಳೆ ಸದ್ಗುರು ನೆತೃತ್ವದ ಈಶ ಫೌಂಡೇಶನ್‌ ಸೇವೆ
  • ರಾಜ್ಯದಲ್ಲಿ ಸತತ 75 ದಿನಗಳ ಕಾಲ ವೈದ್ಯರು, ನರ್ಸ್‌ಗಳು, ಪೊಲೀಸರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಆಹಾರ ಹಂಚಿಕೆ
COVID ISHA Foundation distributes lakhs of food snr
Author
Bengaluru, First Published Jul 13, 2021, 10:10 AM IST

 ಬೆಂಗಳೂರು (ಜು.13):  ಕೊರೋನಾ ಎರಡನೇ ಅಲೆ ವೇಳೆ ಸದ್ಗುರು ನೆತೃತ್ವದ ಈಶ ಫೌಂಡೇಶನ್‌ ರಾಜ್ಯದಲ್ಲಿ ಸತತ 75 ದಿನಗಳ ಕಾಲ ವೈದ್ಯರು, ನರ್ಸ್‌ಗಳು, ಪೊಲೀಸರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಆಹಾರ ಪೊಟ್ಟಣ, ತಂಪು ಪಾನಿಯ, ದಿನಸಿ ಕಿಟ್‌ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದೆ.

ಆರಂಭದಲ್ಲಿ ದಿನದ 18 ತಾಸು ಪಿಪಿಇ ಕಿಟ್‌ ಧರಿಸಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯಕೀಯ ಸಿಬ್ಬಂದಿಗೆ ಹಣ್ಣು, ಬಿಸ್ಕತ್‌ ಹಾಗೂ ಪಾನಿಗಳನ್ನು ವಿತರಿಸಲು ಸುದ್ಗುರು ನಿರ್ಧರಿಸಿದ್ದರು. ಆದರೆ, ರಾಜ್ಯದ ವಿವಿಧೆಡೆಯಿಂದ ಆಹಾರ ಪೊಟ್ಟಣಗಳಿಗೆ ಭಾರೀ ಬೇಡಿಕೆ ಬಂದ ಹಿನ್ನೆಲೆಯಲ್ಲಿ ರಾಜ್ಯದ 61 ಆಸ್ಪತ್ರೆಗಳಿಗೆ ನಿರಂತರವಾಗಿ ಆಹಾರ ಹಾಗೂ ಪಾನಿಯಗಳನ್ನು ಪೂರೈಸಲಾಗಿದೆ.

ಕೋವಿಡ್ ನಿಯಮಗಳ ಬಗ್ಗೆ ಜನರ ನಿರ್ಲಕ್ಷ್ಯ, 3 ನೇ ಸನ್ನಿಹತ: ಐಎಂಎ ಎಚ್ಚರಿಕೆ ..

ಈ ಅವಧಿಯಲ್ಲಿ ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಮಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ 11 ಜಿಲ್ಲೆಗಳ 22 ನಗರಗಳಲ್ಲಿ ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾಸ್ಪತ್ರೆಗಳ ವೈದ್ಯರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಸುಮಾರು 7,34,580 ಆಹಾರ ಪೊಟ್ಟಣ ಹಾಗೂ ಪಾನೀಯಗಳನ್ನು ವಿತರಿಸಲಾಗಿದೆ. ಅಂತೆಯೆ ಬೆಂಗಳೂರು ನಗರ ಸಂಚಾರ ಪೊಲೀಸರಿಗೆ 4,500 ಆಹಾರ ಕಿಟ್‌ ವಿತರಿಸಲಾಗಿದೆ.

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು 3 ನಿಮಿಷದ ಸಿಂಹಕ್ರಿಯಾ ಅಭ್ಯಾಸ ಮಾಡಿ .

ಚಾಮರಾಜನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟು ಕುಟುಂಬಗಳಿಗೆ 1,600 ಆಹಾರ ಕಿಟ್‌ ವಿತರಿಸಲಾಗಿದೆ. ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ಫೌಂಡೇಶನ್‌ ವತಿಯಿಂದ ವೈದ್ಯಕೀಯ ಉಪಕರಣಗಳು, ಇಸಿಜಿ ಯಂತ್ರಗಳು, ವೈದ್ಯಕೀಯ ಪ್ಯಾರಮೀಟರ್‌ಗಳನ್ನು ಕೊಡುಗೆ ನೀಡಲಾಗಿದೆ. ಅಂತೆಯೆ ಬೆಂಗಳೂರಿನಲ್ಲಿ ರೈಲ್ವೆ ಕಾರ್ಮಿಕರು, ಪ್ರಯಾಣಿಕರು, ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸುಮಾರು ಎಂಟು ಸಾವಿರ ಬಿಸ್ಕೆಟ್‌ ಪೊಟ್ಟಣ ಹಾಗೂ ಪಾನಿಯಗಳನ್ನು ವಿತರಿಸಲಾಗಿದೆ. ಅಷ್ಟೇ ಅಲ್ಲದೆ, ಬಡುಕಟ್ಟು ಸಮುದಾಯಗಳು, ಪತ್ರಕರ್ತರು ಸೇರಿದಂತೆ ವಿವಿಧ ಸಮುದಾಯಗಳಿಗೆ ಯೋಗ ತರಬೇತಿ ನೀಡಲಾಗಿದೆ.

"ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಯಾವಾ ಕರೆ ನೀಡಿದರೂ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಅವರು ರಾಜ್ಯದ ಬುಡಕಟ್ಟು ಜನಾಂಗ ಹಾಗೂ ದೀನದಲಿತರ ಸೇವೆಗೆ ಬದ್ಧರಾಗಿದ್ದಾರೆ ಎಂದು ಈಶ ಫೌಂಡೇಶನ್‌ ಸದಸ್ಯ ರಾಘವೇಂದ್ರ ಶಾಸ್ತ್ರಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios