Asianet Suvarna News Asianet Suvarna News

ಕೋವಿಡ್‌ ನಿಯಂತ್ರಣದಲ್ಲಿದೆ, ಆತಂಕ ಬೇಡ: ಅಶ್ವತ್ಥನಾರಾಯಣ

*  ಕಟ್ಟುನಿಟ್ಟಿನ ಕ್ರಮಗಳ ಮೂಲಕ 3ನೇ ಅಲೆ ನಿಯಂತ್ರಣ
*  ರಾಜ್ಯದಲ್ಲಿ ಉತ್ತಮವಾಗಿ ನಡೆಯುತ್ತಿರುವ ಲಸಿಕೆ ಅಭಿಯಾನ
*  ಸೋಂಕು ತಡೆಯಲು ಸರ್ಕಾರದಿಂದ ಎಲ್ಲ ರೀತಿಯ ಕ್ರಮ

Covid is in Control in Karnataka Says Minister CN  Ashwathnarayan grg
Author
Bengaluru, First Published Aug 20, 2021, 2:14 PM IST
  • Facebook
  • Twitter
  • Whatsapp

ಬೆಂಗಳೂರು(ಆ.20):  ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣದಲ್ಲಿದ್ದು, ಮೂರನೇ ಅಲೆ ಕುರಿತು ಆತಂಕಪಡುವ ಅಗತ್ಯವಿಲ್ಲ. ಕಟ್ಟುನಿಟ್ಟಿನ ಕ್ರಮಗಳ ಮೂಲಕ 3ನೇ ಅಲೆ ನಿಯಂತ್ರಿಸಲಾಗುವುದು ಎಂದು ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ. 

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್‌ ಬಗ್ಗೆ ಅನಿಶ್ಚಿತತೆ, ಆತಂಕದ ಅಗತ್ಯವಿಲ್ಲ. ಸೋಂಕು ತಡೆಯಲು ಸರ್ಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದ್ದು ಕೊರೋನಾ ಮಾರ್ಗಸೂಚಿ ಪಾಲಿಸುವ ಮೂಲಕ ಜನರು ಬೆಂಬಲ ನೀಡಬೇಕು ಎಂದರು.

2 ಡೋಸ್‌ ಲಸಿಕೆ ಪಡೆದ 87 ಸಾವಿರ ಜನರಿಗೆ ಕೊರೋನಾ

ಲಸಿಕೆ ಅಭಿಯಾನ ಉತ್ತಮವಾಗಿ ನಡೆಯುತ್ತಿದೆ. ಆಕ್ಸಿಜನ್‌, ಬೆಡ್‌ಗಳ ಕೊರತೆ ಉಂಟಾಗದಂತೆ ಸಿದ್ಧತೆ ನಡೆಸಿದ್ದೇವೆ. ವೈದ್ಯಕೀಯ ಸಲಕರಣೆ, ಔಷಧ ಕೊರತೆಯೂ ಇಲ್ಲ. ಜತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಸಿಬ್ಬಂದಿ ಕೊರತೆಯನ್ನೂ ನೀಗಿಸಿದ್ದು ಎಲ್ಲಾ ರೀತಿಯಲ್ಲೂ ಸರ್ಕಾರ ತಯಾರಿ ನಡೆಸಿದೆ ಎಂದರು.
 

Follow Us:
Download App:
  • android
  • ios