ಬೆಂಗಳೂರು (ಜೂ.08): ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಇಳಿಕೆ ಗತಿ ಮುಂದುವರಿದಿದ್ದು, ಸೋಮವಾರ 54 ದಿನದ ಕನಿಷ್ಠ ಸೋಂಕು ದಾಖಲಾಗಿದೆ. 11,958 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದ್ದು 340 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 27,299 ಮಂದಿ ಗುಣಮುಖರಾಗಿದ್ದಾರೆ.

ಏ.14 ರಂದು 11,265 ಪ್ರಕರಣ ದಾಖಲಾದ ಬಳಿಕ ಮೊದಲ ಬಾರಿಗೆ 12 ಸಾವಿರಕ್ಕಿಂತ ಕಡಿಮೆ ಪ್ರಕರಣ ಬಂದಿದೆ. ಸೋಮವಾರ 1.31 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ. 9.08ರ ಪಾಸಿಟಿವಿಟಿ ದರ ವರದಿಯಾಗಿದೆ. ಸತತ ಮೂರನೇ ದಿನ ಪಾಸಿಟಿವಿಟಿ ದರ ಶೇ. 10ರೊಳಗೆ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 1,992 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದ್ದು ಉಳಿದ ಪ್ರಕರಣಗಳು ರಾಜ್ಯದ ಇತರ ಭಾಗಗಳಿಂದ ವರದಿಯಾಗಿದೆ. ರಾಜ್ಯದಲ್ಲಿ ಸೋಮವಾರ 1.48 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

ರಾಜ್ಯಗಳ ಹೊರೆ ತಪ್ಪಿಸಿದ ಪ್ರಧಾನಿ; ಉಚಿತ ಲಸಿಕೆ, ಉಚಿತ ರೇಶನ್ ಘೋಷಿಸಿದ ಮೋದಿ! .

ಸಾವು 4ನೇ ದಿನ 300 :  ಆದರೆ, ಕರೋನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚೇ ಇದ್ದು ಸತತ ನಾಲ್ಕನೇ ದಿನ 300 ಮೀರಿದ ಸಾವು ದಾಖಲಾಗಿದೆ. ಮರಣ ದರ ಶೇ. 2.84ಕ್ಕೆ ಏರಿದೆ. ಬೆಂಗಳೂರು ನಗರದಲ್ಲಿ 199 ಮಂದಿ ಮರಣವನ್ನಪ್ಪಿದ್ದಾರೆ. ಮೈಸೂರು 17, ಬೆಳಗಾವಿ 15, ಹಾಸನ ಮತ್ತು ಹಾವೇರಿಯಲ್ಲಿ ತಲಾ 10 ಮಂದಿ ಮೃತರಾಗಿದ್ದಾರೆ.

ಅನೇಕ ದಿನಗಳಿಂದ ಗುಣಮುಖರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2.43 ಲಕ್ಷಕ್ಕೆ ಕುಸಿದಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 27.07 ಲಕ್ಷ ಮಂದಿಯಲ್ಲಿ ಸೋಂಕು ಧೃಢ ಪಟ್ಟಿದ್ದು 24.36 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 31,920 ಮಂದಿ ಮೃತರಾಗಿದ್ದಾರೆ. ಒಟ್ಟು 3.07 ಕೋಟಿ ಕೋವಿಡ್‌ ಪರೀಕ್ಷೆ ನಡೆದಿದೆ.

ಮೈಸೂರಲ್ಲಿ ಸಾವಿರದ ಮೇಲೆ ದೈನಂದಿನ ಪ್ರಕರಣ ವರದಿಯಾಗುವ ಪೃವೃತ್ತಿ ಮುಂದುವರಿದಿದ್ದು, 1,213 ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ಶಿವಮೊಗ್ಗ (1,224) ಮತ್ತು ಹಾಸನ (1,108) ಜಿಲ್ಲೆಗಳಲ್ಲಿ ಮತ್ತೆ ಸಾವಿರ ಮೀರಿ ಪ್ರಕರಣ ದಾಖಲಾಗಿದೆ. ಬೀದರ್‌ 13, ಯಾದಗಿರಿ 37, ರಾಮನಗರ 48, ರಾಯಚೂರು 64, ಕಲಬುರಗಿ 67 ಜಿಲ್ಲೆಗಳಲ್ಲಿ ಕನಿಷ್ಠ ಪ್ರಕರಣ ವರದಿಯಾಗಿದೆ.

ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳು ..

1.36 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದು 11,843 ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ.

18 ರಿಂದ 44 ವರ್ಷದೊಳಗಿನ 79,635 ಮಂದಿ, 45 ವರ್ಷ ಮೇಲ್ಪಟ್ಟ53,804 ಮಂದಿ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು 3,500 ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. 45 ವರ್ಷ ಮೇಲ್ಪಟ್ಟ10,330, 18 ರಿಂದ 44 ವರ್ಷದೊಳಗಿನ 323 ಮಂದಿ ಮತ್ತು ಆರೋಗ್ಯ ಹಾಗು ಮುಂಚೂಣಿ ಕಾರ್ಯಕರ್ತರು 1,090 ಮಂದಿಗೆ ಎರಡನೇ ಡೋಸ್‌ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 1.53 ಕೋಟಿ ಡೋಸ್‌ ನೀಡಲಾಗಿದ್ದು 28.81 ಲಕ್ಷ ಮಂದಿ ಎರಡೂ ಡೋಸ್‌ ಸ್ವೀಕರಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona