ಬೆಂಗಳೂರು, (ಜೂನ್.07): ರಾಜ್ಯದಲ್ಲಿ ಹಂತ ಹಂತವಾಗಿ ಅನ್​ಲಾಕ್ ಮಾಡುತ್ತೇವೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಇಂದು (ಸೋಮವಾರ) ಬೆಂಗಳೂರಿನಲ್ಲಿ  ಮಾತನಾಡಿದ ಅವರು, ಕಳೆದ ಬಾರಿ ಒಮ್ಮೆಲೆ ಅನ್​ಲಾಕ್ ಮಾಡಿದ್ದರಿಂದ ಸಮಸ್ಯೆ ಆಯ್ತು. ಈ ಬಾರಿ ಆ ರೀತಿ ಆಗದಂತೆ ಹಂತ ಹಂತವಾಗಿ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು. 

ಕೊಂಚ ಲಾಕ್‌ಡೌನ್‌ ಸಡಿಲಿಸಿದ ಸರ್ಕಾರ

ಇಂದಿನಿಂದ ನೋಂದಣಿ ಕಚೇರಿಗಳು ಕಾರ್ಯಾರಂಭವಾಗಿವೆ. ಕೊರೋನಾ ನಿಯಮಗಳನ್ನ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಪಾಸಿಟಿವಿಟಿ ಪ್ರಮಾಣ 5ಕ್ಕೆ ಇಳಿಕೆಯಾದ್ರೆ ಅನ್‌ಲಾಕ್ ಮಾಡುವುದಾಗಿ ಇತ್ತೀಚೆಗೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದರು. ಪ್ರಸ್ತುತ ಪಾಸಿಟಿವಿಟಿ ಪ್ರಮಾಣ ಶೇ.9.08 ಇದೆ.

ಇನ್ನು ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 11,958 ಮಂದಿಗೆ ಸೋಂಕು ದೃಢಪಟ್ಟಿದ್ದು, 340 ಜನರು ಮೃತಪಟ್ಟಿದ್ದಾರೆ ಈ ಮೂಲಕ  ರಾಜ್ಯದಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 27,07,481ಕ್ಕೆ ಏರಿಕೆಯಾಗಿದೆ. 

ಸೋಂಕಿತರ ಪೈಕಿ 24,36,716 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 2,38,824 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.