ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಶ್ವಾಸಕೋಶದಲ್ಲಿ ಸಣ್ಣ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇದೀಗ ಗುಣಮುಖರಾಗುತ್ತಿದ್ದಾರೆ. 

ಬೆಂಗಳೂರು (ಏ.18): ಕೊರೊನಾ ಸೋಂಕು ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಣಿಪಾಲ್‌ ವೈದ್ಯರು ತಿಳಿದ್ದಾರೆ.

ಶುಕ್ರವಾರ ಸೋಂಕು ದೃಢಪಟ್ಟಹಿನ್ನೆಲೆ ನಗರದ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಶುಕ್ರವಾರ ತಡರಾತ್ರಿವರೆಗೂ ವಿವಿಧ ಪರೀಕ್ಷೆಗಳನ್ನು ನಡೆಸಿದ್ದು, ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಶ್ವಾಸಕೋಶದಲ್ಲಿ ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳು ಮಾತ್ರ ಕಾಣಿಸಿಕೊಂಡಿವೆ. ಕೊರೊನಾ ಮಾರ್ಗಸೂಚಿಯಂತೆ ಚಿಕಿತ್ಸೆ ನೀಡಲಾಗುತ್ತಿದೆ. ತಜ್ಞ ವೈದ್ಯರ ತಂಡವು ನಿಗಾ ವಹಿಸಿದೆ.

ಸಿಎಂ ಬಿಎಸ್‌ವೈಗೆ 2ನೇ ಬಾರಿ ಕೋವಿಡ್ : ಸಂಪರ್ಕದಲ್ಲಿದ್ದವರಿಗೆ ತೀವ್ರ ಆತಂಕ

ಶನಿವಾರ ಬೆಳಗ್ಗೆ ಕನ್ನಡ ಹಾಗೂ ಆಗ್ಲದ ಪ್ರಮುಖ ದಿನ ಪತ್ರಿಕೆಗಳು, ಆನಂತರ ಕೆಲ ಹೊತ್ತು ಮಹಾತ್ಮ ಗಾಂಧೀಜಿ ಅವರ ‘ಆತ್ಮಕತೆ- ಸತ್ಯಾನ್ವೇಷಣೆ’, ರವಿ ಬೆಳಗೆರೆ ಅವರ ಹಿಮಾಲಯನ್‌ ಬ್ಲಂಡರ್‌, ಶ್ರೀಕೃಷ್ಣ ಕಥಾಮಂಜರಿ ಸೇರಿದಂತೆ ವಿವಿಧ ಪುಸ್ತಕಗಳನ್ನು ಓದುತ್ತಾ ಕಾಲ ಕಳೆದರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಸಿಎಂ ಮೊಮ್ಮಗಳು, ಮೊಮ್ಮಗಳ ಪತಿಗೂ ಪಾಸಿಟಿವ್‌:

ಬಿ.ಎಸ್‌. ಯಡಿಯೂರಪ್ಪ ಅವರಿಗೂ ಮೊದಲೇ ಯಡಿಯೂರಪ್ಪ ಅವರ ಪುತ್ರಿ ಪದ್ಮ ಅವರ ಪುತ್ರಿಯಾದ ಡಾ. ಸೌಂದರ್ಯ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯೇ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜತೆಗೆ ಸೌಂದರ್ಯ ಪತಿ ಡಾ. ನಿರಂಜನ್‌ ಅವರೂ ಸಹ ಇದೇ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.