ಬೆಂಗಳೂರು(ಅ.17):  ಕೊರೋನಾ ಸೋಂಕು ಪತ್ತೆಗೆ ನಡೆಸುವ ಆರ್‌ಟಿ-ಪಿಸಿಆರ್‌ ಪರೀಕ್ಷೆಯ ದರವನ್ನು ಮತ್ತಷ್ಟುಕಡಿಮೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಪ್ರಯೋಗಾಲಯ ಪರೀಕ್ಷಾ ಶುಲ್ಕವನ್ನು 400 ರು.ಗಳಷ್ಟುಕಡಿತಗೊಳಿಸಿದೆ.

ಸರ್ಕಾರದಿಂದ ಖಾಸಗಿ ಲ್ಯಾಬ್‌ಗೆ ಶಿಫಾರಸು ಮಾಡುವ ವ್ಯಕ್ತಿಗಳ ಪರೀಕ್ಷೆಗೆ 1,200 ರು.ಗಳಿದ್ದ ಶುಲ್ಕವನ್ನು 800 ರು.ಗೆ ಹಾಗೂ ನೇರವಾಗಿ ಖಾಸಗಿ ಪ್ರಯೋಗಾಲಯಗಳಿಗೆ ತೆರಳಿ ಮಾಡಿಸಿಕೊಳ್ಳುವ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ 1,600 ರು.ಗಳಷ್ಟಿದ್ದ ಶುಲ್ಕವನ್ನು 1,200 ರು.ಗೆ ಇಳಿಕೆ ಮಾಡಿ ಆದೇಶಿಸಲಾಗಿದೆ.

ಶುಭ ಶುಕ್ರವಾರ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚು ...

ಉಳಿದಂತೆ ಖಾಸಗಿ ಪ್ರಯೋಗಾಲಯಗಳು ಮನೆಯಿಂದ ಸಂಗ್ರಹಿಸುವ ಆರ್‌ಟಿ-ಪಿಸಿಆರ್‌ ಮಾದರಿಗಳಿಗೆ 2 ಸಾವಿರ ರು.ಗಳಿಂದ 1,600 ರು.ಗೆ ಇಳಿಕೆ ಮಾಡಲಾಗಿದೆ. ಇನ್ನು ಟ್ರು-ನಾಟ್‌, ಸಿ.ಬಿ-ನಾಟ್‌ ಪರೀಕ್ಷೆಗಳಿಗೂ ಕ್ರಮವಾಗಿ ಹಾಲಿ ದರಗಳಿಗಿಂತ 400 ರು. ಕಡಿಮೆ ಮಾಡಲಾಗಿದೆ.

ಸರ್ಕಾರದಿಂದ ಶಿಫಾರಸು ಮಾಡುವ ವ್ಯಕ್ತಿಗಳ ರಾರ‍ಯಪಿಡ್‌ ಆ್ಯಂಟಿಬಾಡಿ ಪರೀಕ್ಷೆಯ ದರವನ್ನು 500 ರು.ಗೆ ಹಾಗೂ ಖಾಸಗಿ ಪ್ರಯೋಗಾಲಯಗಳಲ್ಲಿ ಖಾಸಗಿಯಾಗಿ ಮಾಡಿಸುವ ಆ್ಯಂಟಿಬಾಡಿ ಪರೀಕ್ಷೆಗೆ 700 ರು.ಗಳನ್ನು ನಿಗದಿ ಮಾಡಲಾಗಿದೆ. ಮಾದರಿ ಸಂಗ್ರಹ ಹಾಗೂ ಪ್ರಯೋಗಾಯಕ್ಕೆ ಸಾಗಿಸಲು 400 ರು.ಗಿಂತ ಹೆಚ್ಚು ಮೊತ್ತ ಸ್ವೀಕರಿಸಬಾರದು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.