Asianet Suvarna News Asianet Suvarna News

Corona Threat: ಮದುವೆಗಳಿಗೆ ಈ ಸಲವೂ ಸೋಂಕು ಅಡ್ಡಿ: ಸರ್ಕಾರದ ವಿರುದ್ಧ ಬೇಸರ..!

*   ಜನರಿಗೆ ಮಿತಿ ಹೇರಿರುವುದರಿಂದ ವಿವಾಹ ಸಮಾರಂಭಗಳಿಗೆ ಸಂಕಷ್ಟ
*   ಕಲ್ಯಾಣಮಂಟಪ ಬುಕಿಂಗ್‌ ರದ್ದು
*   ಇತರೆ ಉದ್ಯಮಗಳಿಗೂ ನಷ್ಟ
 

Coronavirus Often Interrupted by Marriages in Karnataka grg
Author
Bengaluru, First Published Jan 9, 2022, 6:27 AM IST

ಬೆಂಗಳೂರು(ಜ.09):  ಕೊರೋನಾ(Coronavirus) ಹರಡುವಿಕೆ ನಿಯಂತ್ರಿಸಲು ರಾಜ್ಯ ಸರ್ಕಾರ(Government of Karnataka) ಮದುವೆ(Marriage) ಸಮಾರಂಭಗಳಿಗೆ ಜನಮಿತಿ ಹೇರಿರುವುದರಿಂದ ಜನವರಿ ಮತ್ತು ಫೆಬ್ರವರಿಯಲ್ಲಿ ನಿಗದಿಯಾಗಿದ್ದ ಮದುವೆಗಳಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ಹಲವು ಕುಟುಂಬಗಳು ಮದುವೆ ದಿನಾಂಕ ಬದಲಾವಣೆ ಮಾಡಿವೆ. ಇನ್ನೂ ಹಲವು ಕುಟುಂಬಗಳು ಮದುವೆಗೆಂದು ಕಾದಿರಿಸಿದ್ದ ಸಭಾಂಗಣ, ಕಲ್ಯಾಣ ಮಂಟಪಗಳ ಬುಕಿಂಗ್‌ ಅನ್ನು ರದ್ದು ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಕಲ್ಯಾಣ ಮಂಟಪ, ಮ್ಯಾರೇಜ್‌ ಹಾಲ್‌ಗಳ ಮಾಲೀಕರು ಚಿಂತೆಗೀಡಾಗಿದ್ದು, ಮದುವೆ ಮಾಸಗಳಲ್ಲಿಯೇ (ಸೀಜನ್‌) ನಿರ್ಬಂಧ ವಿಧಿಸಿರುವ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಜನವರಿ 14 ರಿಂದ ಮದುವೆ ಮಾಸ ಆರಂಭವಾಗಿ, ಮಾರ್ಚ್‌ 31ವರೆಗೂ ನಡೆಯಲಿದೆ. ಕಳೆದ ಎರಡು ವರ್ಷ ಕೊರೋನಾ ಹಿನ್ನೆಲೆ ಅದ್ಧೂರಿ ಮದುವೆಗೆ ಕಾಯ್ದಿದ್ದ ಸಾವಿರಾರು ಮಂದಿ 3-4 ತಿಂಗಳ ಮುಂಚೆಯೇ ಕಲ್ಯಾಣ ಮಂಟಪ, ಐಷಾರಾಮಿ ಹೋಟೆಲ್‌ಗಳ ಹಾಲ್‌ಗಳು, ಸಂಘ ಸಂಸ್ಥೆಗಳ ಸಭಾಂಗಣಗಳನ್ನು ಮುಂಗಡ ಹಣ ನೀಡಿ ಬುಕ್ಕಿಂಗ್‌ ಮಾಡಿಕೊಂಡಿದ್ದಾರೆ. ಆದರೆ ಜ.4 ರಂದು ಸರ್ಕಾರ ಮದುವೆ ಸಮಾರಂಭಗಳಿಗೆ ತೆರೆದ ಪ್ರದೇಶದಲ್ಲಿ 200, ಸಭಾಂಗಣಗಳಲ್ಲಿ 100 ಮಂದಿಯ ಮಿತಿ ಹೇರಿದೆ. ಈ ಹಿನ್ನೆಲೆ ಸಾವಿರಾರು ಜನರನ್ನು ಕರೆದು ಅದ್ಧೂರಿ ಮದುವೆ ಮಾಡಿಕೊಳ್ಳಬೇಕು ಎನ್ನುವವರಿಗೆ ನಿರಾಸೆಯಾಗಿ ಹಲವರು ದಿನಾಂಕ ಬದಲಾವಣೆ, ರದ್ದು ಮಾಡಲು ಮುಂದಾಗಿದ್ದಾರೆ. ಅಲ್ಲದೆ, ಪ್ರಸಕ್ತ ತಿಂಗಳಲ್ಲಿ ಮದುವೆ ಇರುವವರು ಕಲ್ಯಾಣಮಂಟಪಗಳಿಗೆ ನೀಡಿದ್ದ ಮುಂಗಡ ಹಣವನ್ನು ವಾಪಸ್‌ ಕೇಳುತ್ತಿದ್ದು, ಕಲ್ಯಾಣ ಮಂಟಪದ(Kalyana Mantapa) ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ.

Covid 19 Spike: ಬೆಂಗ್ಳೂರಲ್ಲಿ ಶೇ.9.8ಕ್ಕೆ ಏರಿದ ಪಾಸಿಟಿವಿಟಿ ದರ: ಹೆಚ್ಚಾದ ಆತಂಕ

ಜ.16ಕ್ಕೆ ಮದುವೆ ನಿಶ್ಚಯವಾಗಿದ್ದು, ಮುಂಗಡ ಹಣ ನೀಡಿದ್ದರು. ಈಗ ಬಂದು ದಿನಾಂಕವನ್ನು ಎರಡು ತಿಂಗಳು ಮುಂದೂಡಿದ್ದೇವೆ, ಮುಂಗಡ ಹಣ ವಾಪಸ್‌ ನೀಡಿ ಅಥವಾ ಏಪ್ರಿಲ್‌ನಲ್ಲಿ ದಿನಾಂಕ ನೀಡಿ ಎಂದು ಹಲವರು ಕೇಳುತ್ತಾರೆ. ಈಗಾಗಲೇ ಏಪ್ರಿಲ್‌ನ ದಿನಾಂಕಗಳು ಭರ್ತಿಯಾಗಿದ್ದು, ಹಲವರಿಗೆ ಮುಂಗಡ ಹಣ ಹಿಂದಿರುಗಿಸಿ ಎಂದು ಪಟ್ಟುಹಿಡಿದಿದ್ದಾರೆ ಎಂದು ರಾಜಾಜಿನಗರ ಕಲ್ಯಾಣ ಮಂಟಪದ ಮಾಲೀಕ ರಘುನಂದನ್‌ ತಮ್ಮ ಅಳಲನ್ನು ತೋಡಿಕೊಂಡರು.

ಇತರೆ ಉದ್ಯಮಗಳಿಗೂ ನಷ್ಟ

ಅದ್ಧೂರಿ ಮದುವೆಗಳು ರದ್ದಾಗುತ್ತಿರುವುದರಿಂದ ಡೆಕೋರೇಟರ್‌ಗಳು, ಕ್ಯಾಟರಿಂಗ್‌, ಅಡುಗೆ ಸೇವೆ, ಆರ್ಕೆಸ್ಟ್ರಾ, ಡಿಜೆ, ವೃತ್ತಿಪರ ಸ್ವಾಗತ ಗುಂಪು, ತರಕಾರಿ ಮಾರಾಟಗಾರರು(Vegetable Sellers), ಛಾಯಾಗ್ರಾಹಕರು(Photographers) ಸೇರಿದಂತೆ ಹಲವಾರು ಸೇವೆಗಳಲ್ಲಿಯೂ ನಷ್ಟವಾಗುತ್ತಿದೆ. ಕಳೆದ ಎರಡು ವರ್ಷ ಸಾಕಷ್ಟು ನಷ್ಟಕ್ಕೀಡಾಗಿದ್ದು, ಈ ಋುತುವಿನಲ್ಲಿ ದೊಡ್ಡ ವ್ಯಾಪಾರವನ್ನು(Business) ನಿರೀಕ್ಷಿಸಿದ್ದೆವು. ಆದರೆ, ಸರ್ಕಾರದ ನಿರ್ಧಾರ ನಮ್ಮನ್ನು ಮತ್ತೆ ನಷ್ಟಕ್ಕೆ ದೂಡಲಿದೆ ಎಂದು ಬೆಂಗಳೂರಿನ ಬಸವನಗುಡಿಯ ಶಾಮಿಯಾನ ಮಳಿಗೆ ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

Omicron Threat: 'ಕೇಸ್‌ಗಳ ಸ್ಫೋಟ ನೋಡಿ ಶಾಲೆ ಬಂದ್‌, ಲಾಕ್‌ಡೌನ್‌ ಮಾಡಬೇಡಿ'

ರಾಜ್ಯದಲ್ಲಿ ಕೊರೋನಾ ಸ್ಫೋಟ: ನಿಯಂತ್ರಣ ಮಟ್ಟಮೀರಿದ ಸೋಂಕು

ರಾಜ್ಯದಲ್ಲಿ(Karnataka) ಕೊರೋನಾ(Coronavirus) ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ನಿಯಂತ್ರಣ ಮಟ್ಟಮೀರಿದ್ದು, 2ನೇ ಅಲೆಯ ಉಚ್ಛ್ರಾಯ ಹಂತದ ಬಳಿಕ (ಏಳು ತಿಂಗಳು) ಇದೇ ಮೊದಲ ಬಾರಿ ಶೇ.5ರ ಗಡಿ ದಾಟಿದೆ. ಅಲ್ಲದೆ, ಬೆಂಗಳೂರಿನಲ್ಲಿ(Bengaluru) ಪಾಸಿಟಿವಿಟಿ ದರ ಶೇ.10ರ ಆಸುಪಾಸಿನಲ್ಲಿದೆ. ಈ ಮೂಲಕ ಸಾಂಕ್ರಾಮಿಕ ರೋಗ ತಜ್ಞರು ಲಾಕ್‌ಡೌನ್‌ಗೆ ನಿಗದಿ ಪಡಿಸಿದ್ದ ಮಾರ್ಗಸೂಚಿಯ ಹಂತವನ್ನು ರಾಜ್ಯ ತಲುಪಿದಂತಾಗಿದೆ.

ರಾಜ್ಯದಲ್ಲಿ ಶನಿವಾರ 207 ದಿನಗಳ ಬಳಿಕ 8,906 ಮಂದಿ ಸೋಂಕಿತರಾಗಿದ್ದು, 4 ಜನರು ಸಾವಿಗೀಡಾಗಿದ್ದಾರೆ. 508 ಮಂದಿ ಗುಣಮುಖರಾಗಿದ್ದು, 38,507 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಶುಕ್ರವಾರ 2.03 ಲಕ್ಷ ಇದ್ದ ಪರೀಕ್ಷೆ ಶನಿವಾರ 1.64 ಲಕ್ಷಕ್ಕೆ ಇಳಿಕೆಯಾಗಿದ್ದು, ಆದರೂ, ಸೋಂಕಿತರ ಸಂಖ್ಯೆ 487 (ಶುಕ್ರವಾರ 8,449) ಏರಿಕೆಯಾಗಿವೆ. ಇದರೊಂದಿಗೆ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 30.4 ಲಕ್ಷಕ್ಕೆ, ಗುಣಮುಖರ ಸಂಖ್ಯೆ 29.96 ಲಕ್ಷಕ್ಕೆ, ಸಾವಿಗೀಡಾದವರ ಸಂಖ್ಯೆ 38,507ಕ್ಕೆ ತಲುಪಿದೆ.

Follow Us:
Download App:
  • android
  • ios