ಬೆಂಗಳೂರು, (ಮಾ.21): ಕೊರೋನಾ ವೈರಸ್ ಪರಿಣಾಮ ಕೆಎಸ್‌ಆರ್‌ಟಿಸಿಯಲ್ಲಿ ನೀಡಲಾಗುತ್ತಿದ್ದ ಹಿರಿಯ ನಾಗರಿಕರಿಗೆ ರಿಯಾಯಿತಿಯನ್ನ ಕ್ಯಾನ್ಸ್‌ಲ್ ಮಾಡಿದೆ.

ಕೊರೋನಾ ವೈರಸ್ ಹಿನ್ನೆಯಲ್ಲಿ ಹಿರಿಯ ನಾಗರಿಕರನ್ನ ಬಸ್ಸುಗಳಲ್ಲಿ ಪ್ರಯಾಣಿಸಲು ಪ್ರೋತ್ಸಾಹಿಸಬಾರದು ಎನ್ನುವ ಕಾರಣಕ್ಕೆ ರಿಯಾಯಿತಿ ದರವನ್ನ ಕೆಎಸ್‌ಆರ್‌ಟಿಸಿ ಸಂಸ್ಥೆ ಹಿಂಪಡೆದಿದೆ.

ಶನಿವಾರ ಒಂದೇ ದಿನ 4 ಕೊರೋನಾ ಪತ್ತೆ: ಕರುನಾಡಲ್ಲಿ 19ಕ್ಕೆ ಏರಿಕೆ

ಕೆಎಸ್‌ಆರ್‌ಟಿಸಿ ಸದ್ಯ ಹಿರಿಯ ನಾಗರಿಕರಿಗೆ ಶೇ. 21ರಷ್ಟು ಟಿಕೆಟ್‌ ದರದಲ್ಲಿ ರಿಯಾಯಿತಿಯನ್ನ ನೀಡುತ್ತಿತ್ತು. ಇದೀಗ ಅದನ್ನ ಕಡಿತಗೊಳಿಸಿದೆ.

ಇನ್ನು 60 ವರ್ಷದ ಮೇಲ್ಪಟ್ಟವರು  ಸಾಮೂಹಿಕವಾಗಿ ಸಾರಿಗೆ ಬಸ್ ಬಳಸದಂತೆ ಮನವಿ ಮಾಡಿದ್ದು, ಇದಕ್ಕೆ ನಾಗರಿಕರು ಸಹರಿಸಬೇಕೆನ್ನುವ ಮನವಿ ಸುತ್ತೋಲೆಯನ್ನ ಹೊರಡಿಸಿದೆ.

ಈಗಾಗಲೇ ರಾಜ್ಯದಲ್ಲಿ ಕೊರೋನಾ ವೈರಸ್ ಸೊಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆದಷ್ಟೂ ಎಚ್ಚರಿಕೆ ಇರುವುದು ಒಳಿತು. ಯಾವುದೇ ಕಾರಣಕ್ಕೂ ಈ ವೈರಸ್ ಬಗ್ಗೆ ನಿರ್ಲಕ್ಷ್ಯ ಮಾಡಬಾರದರು, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.