ಬೆಂಗಳೂರು, (ಮಾ.21): ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಮಾಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು (ಶನಿವಾರ) ಒಂದೇ ದಿನ ನಾಲ್ವರಿಗೆ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ.

"

ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮೂರು ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ 1, ಒಟ್ಟು  ಶನಿವಾರ ಒಂದೇ ದಿನದಲ್ಲಿ ನಾಲ್ಕು ಕೇಸ್ ಪತ್ತೆಯಾಗಿವೆ ಎನ್ನುವುದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೊಟ್ಟಿರುವ ಮಾಹಿತಿ.

ಶ್ರೀರಾಮುಲು ಟ್ವೀಟ್ ಮೂಲಕ ಕೊಟ್ಟ ಮಾಹಿತಿ ಪ್ರಕಾರ ಸೋಂಕಿತರ ಸಂಖ್ಯೆ 18. ಇಬ್ಬರು ಸಚಿವರುಗಳಲ್ಲಿ ಸ್ಪಷ್ಟ ಮಾಹಿತಿಯೇ ಇಲ್ಲ. ಒಬ್ಬರು 18 ಅಂದ್ರೆ, ಇನ್ನೊಬ್ಬರು 19 ಅಂತಿದ್ದಾರೆ.

 ಆದರೆ, ಸೋಂಕಿತ ಸಂಖ್ಯೆ ಏರಿಕೆಯಾಗುತ್ತಿರುವುದು ಮಾತ್ರ  ಭಯ ಹುಟ್ಟಿಸುತ್ತಿದ್ದಂತೂ ಸತ್ಯ. ಯಾವುದಕ್ಕೂ ಜನತೆ ಎಚ್ಚರದಿಂದ ಇರುವುದು ಒಳಿತು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.

"