ಕೊರೋನಾ ಕಾಟದಿಂದ ನನ್ನ ಮಗಳನ್ನ ರಕ್ಷಿಸಿ ಎಂದು ಶ್ರೀರಾಮುಲುಗೆ ಪರಿ-ಪರಿಯಾಗಿ ಬೇಡಿಕೊಂಡ ಸಚಿವ
ಇಟಲಿ ದೇಶದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದ ಭಾನುವಾರ ಒಂದೇ ದಿನ ಬರೋಬ್ಬರಿ 368 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಅದೇ ಇಟಲಿಯಲ್ಲಿ ಕರ್ನಾಟಕದ ಸಚಿವರೊಬ್ಬರ ಮಗಳು ಸಹ ಸಿಲುಕಿಕೊಂಡಿದ್ದು, ರಕ್ಷಿಸುವಂತೆ ಆರೋಗ್ಯ ಸಚಿವ ಶ್ರೀರಾಮುಲು ಬಳಿ ಪರಿ-ಪರಿಯಾಗಿ ಬೇಡಿಕೊಂಡಿದ್ದಾರೆ.
ಬೆಂಗಳೂರು, [ಮಾ.16]: ವಿಶ್ವದೆಲ್ಲೆಡೆ ಕೊರೋನಾ ತನ್ನ ಅರ್ಭಟ ಮುಂದುವರಿಸಿದ್ದು, ಇಡೀ ಪ್ರಪಂಚವೇ ನಡುಗಿ ಹೋಗಿದೆ. ಇನ್ನು ಅರಣ್ಯ ಸಚಿವ ಆನಂದ್ ಸಿಂಗ್ ಅವರು ತಮ್ಮ ಮಗಳನ್ನ ರಕ್ಷಿಸಿ ಎಂದು ಆರೋಗ್ಯ ಸಚಿವ ಶ್ರೀರಾಮುಲುಗೆ ಪರಿ-ಪರಿಯಾಗಿ ಬೇಡಿಕೊಂಡಿದ್ದಾರೆ.
"
ಹೌದು...ವಿಧಾನಪರಿಷತ್ ಕಲಾಪದಲ್ಲಿ ಇಂದು [ಸೋಮವಾರ] ಆನಂದ್ ಸಿಂಗ್ ಅವರು ಇಟಲಿಯಲ್ಲಿರುವ ನನ್ನ ಮಗಳನ್ನ ರಕ್ಷಿಸಿ ಎಂದು ಶ್ರೀರಾಮುಲುಗೆ ಬಹಿರಂಗವಾಗಿಯೇ ಮನವಿ ಮಾಡಿರುವ ಪ್ರಸಂಗ ನಡೆಯಿತು.
ಇಟಲಿಯಲ್ಲಿ ಒಂದೇ ದಿನ ಕೊರೋನಾಗೆ 368 ಬಲಿ
'ನನ್ನ ಮಗಳು ಇಟಲಿಯಲ್ಲಿ ಓದುತ್ತಿದ್ದಾಳೆ. ನನ್ನ ಮಗಳ ಜತೆ 60 ಭಾರತೀಯ ವಿದ್ಯಾರ್ಥಿಗಳೂ ಇದ್ದಾರೆ. ಮಾ.10ರಿಂದ ರೋಮ್ ಏರ್ಪೋರ್ಟ್ ನಲ್ಲೇ ಸಿಕ್ಕಿಕೊಂಡಿದ್ದು, ಅವರು ಭಾರತಕ್ಕೆ ಬರಲು ಸಾಧ್ಯ ಆಗುತ್ತಿಲ್ಲ. ಇದರಿಂದ ಅವರ ನೆರವಿಗೆ ರಾಜ್ಯ-ಕೇಂದ್ರ ಸರ್ಕಾರ ಧಾವಿಸಬೇಕು' ಎಂದು ಶ್ರೀರಾಮುಲುಗೆ ಮನವಿ ಮಾಡಿಕೊಂಡರು.
ಇಟಲಿ ದೇಶದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದ ಭಾನುವಾರ ಒಂದೇ ದಿನ ಬರೋಬ್ಬರಿ 368 ಮಂದಿ ಮೃತಪಟ್ಟಿದ್ದಾರೆ. ಕೊರೋನಾ ವೈರಸ್ ವಿರುದ್ಧ ಹೋರಾಡಲು ಇಡೀ ದೇಶವನ್ನೇ ಬಂದ್ ಮಾಡಿದ್ದರೂ ವೈರಸ್'ಗೆ ಬಲಿಯಾಗುತ್ತಿರುವ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಇಟಲಿ ರಾಷ್ಟ್ರ ಕಂಗಾಲಾಗಿದೆ.