ಇಟಲಿಯಲ್ಲಿ ಒಂದೇ ದಿನ ಕೊರೋನಾಗೆ 368 ಬಲಿ

ಇಟಲಿ ದೇಶದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಇದರಿಂದ ಇಟಲಿ ದೇಶದಲ್ಲಿ ಒಂದೇ ದಿನ ಬರೋಬ್ಬರಿ 368 ಮಂದಿ ಮೃತಪಟ್ಟಿದ್ದಾರೆ. 

Italy reports 368 coronavirus deaths in 24 hours

ರೋಮ್ (ಮಾ.16] : ಮಾರಕ ಕೊರೋನಾ ವೈರಸ್‌ನಿಂದ ಸಾವು ಸಂಭವಿಸುವುದಿಲ್ಲ ಎಂದು ಹೇಳುವವರಿಗೆ ಶಾಕಿಂಗ್ ನ್ಯೂಸ್. ಚೀನಾ ನಂತರ ಕೊರೋನಾ ವೈರಸ್ ಅತಿ ಹೆಚ್ಚು ತಾಂಡವವಾಡುತ್ತಿರುವ ಇಟಲಿಯಲ್ಲಿ ಭಾನುವಾರ ಒಂದೇ ದಿನ ಬರೋಬ್ಬರಿ 368  ಜನ  ಬಲಿಯಾಗಿದ್ದಾರೆ. 

"

ಇದು ಕೊರೋನಾ ಕಾಣಿಸಿದ ನಂತರ ಯಾವುದೇ ದೇಶದಲ್ಲಿ ದಾಖಲಾಗಿರುವ ಒಂದು ದಿನದ ಅತಿ ಹೆಚ್ಚಿನ ಸಾವಿನ ಸಂಖ್ಯೆಯಾಗಿದೆ. ಇಟಲಿಯಲ್ಲಿ ಭಾನುವಾರ 3590 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದ ರಿಂದಾಗಿ ದೇಶದ ಕೊರೋನಾ ಪೀಡಿತರ ಸಂಖ್ಯೆ  24,747 ಕ್ಕೇರಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ದೇಶದಲ್ಲಿ 1809 ಜನರು ಕೊರೋನಾ ವೈರಾಣುವಿಗೆ ಬಲಿ ಯಾಗಿದ್ದಾರೆ. ಮಿಲಾನ್ ಆಸುಪಾಸಿ ನಲ್ಲೇ 1218 ಸಾವು ಸಂಭವಿಸಿವೆ.

ಕಲಬುರಗಿಯಲ್ಲಿ ಮತ್ತೊಂದು ಕೊರೋನಾ: ಜನತೆಗೆ ಶ್ರೀರಾಮುಲು ವಿಶೇಷ ಮನವಿ..

ಭಾರತಕ್ಕೂ ಎಚ್ಚರಿಕೆ ಗಂಟೆ: ಕೊರೋನಾ ವೈರಸ್ ಇಟಲಿಯಲ್ಲಿ ಪ್ರಾಥಮಿಕ ಹಂತ ದಾಟಿ ಗರಿಷ್ಠ ಎನ್ನಿಸಿದ 3 ಹಾಗೂ 4 ನೇ ಹಂತ ಮುಟ್ಟಿದೆ. 

ಹೀಗಿದ್ದಾಗ ಇನ್ನೂ 1 ಹಾಗೂ 2 ನೇ ಹಂತದಲ್ಲಿರುವ ಭಾರತಕ್ಕೂ ಇದು ಎಚ್ಚರಿಕೆ ಗಂಟೆ ಎನ್ನಿಸಿದೆ. ಇಟಲಿಯಲ್ಲಿ 6 ಕೋಟಿ ಜನಸಂಖ್ಯೆ ಇದೆ. ಅಲ್ಲಿಯೇ ಇಷ್ಟು ಸಾವು ಸಂಭವಿಸುತ್ತಿದ್ದರೆ, 3  ಹಾಗೂ ೪ನೇ ಸ್ತರಕ್ಕೆ ರೋಗ ತಲುಪಿದರೆ ಸುಮಾರು 130 ಕೋಟಿ ಜನಸಂಖ್ಯೆ ಹೊಂದಿದ ಭಾರತದಲ್ಲಿ ಸಾವಿನ ಸಂಖ್ಯೆ ವಿಕೋಪಕ್ಕೆ ಹೋಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Latest Videos
Follow Us:
Download App:
  • android
  • ios