ಬೆಂಗಳೂರು(ನ.13): ರಾಜ್ಯದಲ್ಲಿ ಕೊರೋನಾ ಸೋಂಕಿನ ಉಬ್ಬರ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ. ಗುರುವಾರ 2,116 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. 3,368 ಮಂದಿ ಗುಣಮುಖರಾಗಿದ್ದಾರೆ. 21 ಮಂದಿ ಮೃತರಾಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 29,470ಕ್ಕೆ ಕುಸಿದಿದೆ. ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯಲ್ಲಿಯೂ ನಿರಂತರ ಇಳಿಕೆ ದಾಖಲಾಗುತ್ತಿದೆ. ನವೆಂಬರ್‌ 2ರಂದು 931 ಜನರು ತೀವ್ರ ನಿಗಾ ವಿಭಾಗದಲ್ಲಿ (ಐಸಿಯು) ಇದ್ದರು. ಈಗ 797 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ರಾಜ್ಯದಲ್ಲಿ 8.55 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 8.14 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ.

ಒಟ್ಟು ಮೃತರ ಸಂಖ್ಯೆ 11,474 ಕ್ಕೆ ಏರಿದೆ. 19 ಮಂದಿ ಕೋವಿಡ್‌ ರೋಗಿಗಳು ಅನ್ಯ ಕಾರಣದಿಂದ ಅಸುನೀಗಿದ್ದಾರೆ. ರಾಜ್ಯದ ಮರಣ ದರ ಶೇ.1.34 ರಷ್ಟಿದೆ. 1.15 ಲಕ್ಷ ಪರೀಕ್ಷೆ ನಡೆದಿದೆ. ಒಟ್ಟು 91.58 ಲಕ್ಷ ಪರೀಕ್ಷೆ ರಾಜ್ಯದಲ್ಲಿ ಈವರೆಗೆ ನಡೆದಿದೆ.

ಕೊರೋನಾ ಅಟ್ಟಹಾಸಕ್ಕೆ ಸದ್ದಿಲ್ಲದೆ ಮಸಣ ಸೇರಿದ ಜೀವಗಳು..!

ಬೆಂಗಳೂರಲ್ಲಿ ಹೆಚ್ಚು:

ಬೆಂಗಳೂರು ನಗರದಲ್ಲಿ 8 ಮಂದಿ ಮೃತರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 3, ಬಳ್ಳಾರಿ, ಧಾರವಾಡ ತಲಾ 2, ಹಾಸನ, ಕಲಬುರಗಿ, ಕೋಲಾರ, ಮೈಸೂರು, ರಾಯಚೂರು ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ರಾಜ್ಯದ ಇಪ್ಪತ್ತು ಜಿಲ್ಲೆಗಳಲ್ಲಿ ಯಾರೂ ಮೃತ ಪಟ್ಟಿಲ್ಲ.

ಬೆಂಗಳೂರು ನಗರ ಜಿಲ್ಲೆಯಲ್ಲಿ 1069 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಬಾಗಲಕೋಟೆ 14, ಬಳ್ಳಾರಿ 41, ಬೆಳಗಾವಿ 54, ಬೆಂಗಳೂರು ಗ್ರಾಮಾಂತರ 43, ಬೀದರ್‌ 3, ಚಾಮರಾಜ ನಗರ 12, ಚಿಕ್ಕಬಳ್ಳಾಪುರ 24, ಚಿಕ್ಕಮಗಳೂರು 37, ಚಿತ್ರದುರ್ಗ 41, ದಕ್ಷಿಣ ಕನ್ನಡ 53, ದಾವಣಗೆರೆ 29, ಧಾರವಾಡ 18, ಗದಗ 5, ಹಾಸನ 100, ಹಾವೇರಿ 6, ಕಲಬುರಗಿ 51, ಕೊಡಗು 8, ಕೋಲಾರ 18, ಕೊಪ್ಪಳ 28, ಮಂಡ್ಯ 74, ಮೈಸೂರು 115, ರಾಯಚೂರು 9, ರಾಮನಗರ 12, ಶಿವಮೊಗ್ಗ 51, ತುಮಕೂರು 80, ಉಡುಪಿ 31, ಉತ್ತರ ಕನ್ನಡ 32, ವಿಜಯಪುರ 51 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 7 ಹೊಸ ಪ್ರಕರಣಗಳು ಧೃಢ ಪಟ್ಟಿವೆ.