ಬೆಂಗಳೂರು (ಸೆ.08):  ಸರಿಯಾಗಿ 15 ದಿನಗಳ ನಂತರ ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 6 ಸಾವಿರದೊಳಗೆ ಬಂದಿದೆ. ನಿತ್ಯ ಎಂಟು ಅಥವಾ ಒಂಭತ್ತು ಸಾವಿರ ಸೋಂಕು ಪ್ರಕರಣ ಸಾಮಾನ್ಯವಾಗಿದ್ದ ಕೋವಿಡ್‌ ಸೋಂಕು ಸೋಮವಾರ 5773 ಮಂದಿಗೆ ಸೀಮಿತವಾಗಿದೆ.

ಹಠಾತ್ತನೇ ಸೋಂಕು ಪ್ರಮಾಣ ಈ ರೀತಿ ಕುಸಿಯಲು ಕರೋನಾ ಪರೀಕ್ಷೆ ಪ್ರಮಾಣ ಕಡಿಮೆಯಾಗಿರುವುದು ಕೂಡ ಕಾರಣವಾಗಿದೆ. ಸಾಮಾನ್ಯವಾಗಿ ಕಳೆದ ಕೆಲ ದಿನಗಳಿಂದ 70,000 ಕ್ಕೂ ಹೆಚ್ಚು ಕೊರೋನಾ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ ಸೋಮವಾರ ಕೇವಲ 45,421 ಪರೀಕ್ಷೆಗಳನ್ನು ಮಾತ್ರ ನಡೆಸಲಾಗಿದೆ. ಈ ಹಿಂದೆ ಆಗಸ್ಟ್‌ 23ರಂದು 5,938 ಪ್ರಕರಣಗಳು ವರದಿಯಾಗಿದ್ದೇ ಇತ್ತೀಚಿನ ದಿನಗಳಲ್ಲಿನ ಕನಿಷ್ಠ ಸಂಖ್ಯೆಯ ಏಕದಿನದ ಪ್ರಕರಣವಾಗಿತ್ತು.

5 ತಿಂಗ್ಳು ನಂತ್ರ ಆರಂಭವಾದ ಮೆಟ್ರೋದಲ್ಲಿ ಸಂಚರಿಸಿ ಪ್ರಯಾಣಿಕರಿಗೆ ಮಹತ್ವದ ಕರೆ ಕೊಟ್ಟ ಶ್ರೀರಾಮುಲು

ಸೋಮವಾರದ ಮತ್ತೊಂದು ಸಂಗತಿಯೆಂದರೆ 8,015 ಮಂದಿ ಕೊರೋನಾದಿಂದ ಮುಕ್ತರಾಗಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಕೊರೋನಾ ಸೋಂಕು ಜಯಿಸಿದವರ ಸಂಖ್ಯೆ 3 ಲಕ್ಷ ದಾಟಿದೆ. ರಾಜ್ಯದ ಒಟ್ಟು ಕೊರೋನಾ ಸೊಂಕಿತರ ಸಂಖ್ಯೆ 4.04 ಲಕ್ಷ ತಲುಪಿದೆ. ಒಟ್ಟು ಕೊರೋನಾ ಸೋಂಕಿತರಲ್ಲಿ ಈವರೆಗೆ ಒಟ್ಟು 3,00,770 ಮಂದಿ ಕೊರೋನಾ ಮುಕ್ತರಾಗಿದ್ದಾರೆ. ರಾಜ್ಯದಲ್ಲಿ ಇನ್ನೂ 97,0001 ಮಂದಿ ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಇವರಲ್ಲಿ 794 ಮಂದಿ ವಿವಿಧ ಅಸ್ಪತ್ರೆಗಳ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಸೋಮವಾರ ಬೆಂಗಳೂರಿನಲ್ಲಿ 7 ವರ್ಷದ ಹುಡುಗ, ಮೈಸೂರಿನಲ್ಲಿ ಲ್ಯುಕೇಮಿಯಾದಿಂದ ನರಳುತ್ತಿದ್ದ 8 ವರ್ಷದ ಹುಡುಗ ಸೇರಿದಂತೆ ಒಟ್ಟು 141 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 6,534ಕ್ಕೆ ತಲುಪಿದೆ.

ಕೊರೋನಾಗೆ ಭಾರತದಲ್ಲಿ ಸತ್ತ ಡಾಕ್ಟರ್‌ಗಳೆಷ್ಟು ಗೊತ್ತಾ? ...

ಬೆಂಗಳೂರು ನಗರದಲ್ಲಿ ಸೋಮವಾರ 48 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಉಳಿದಂತೆ ಧಾರವಾಡ, ಕೊಪ್ಪಳದಲ್ಲಿ ಕೊರೋನಾದಿಂದ ತಲಾ 10 ಸಾವು ವರದಿಯಾಗಿದೆ. ಮೈಸೂರಿನಲ್ಲಿ 9 ಮಂದಿ ಕೊರೋನಾದಿಂದ ಸತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ 8 ಸಾವು ವರದಿಯಾಗಿದ್ದು ಅಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 400ರ ಗಡಿ ದಾಟಿದೆ. ಶಿವಮೊಗ್ಗ, ಬೆಳಗಾವಿಯಲ್ಲೂ ತಲಾ 8 ಸಾವು ಸಂಭವಿಸಿದೆ. ಬಳ್ಳಾರಿಯಲ್ಲಿ 7, ಹಾಸನ, ಕಲಬುರಗಿಯಲ್ಲಿ ತಲಾ 4, ಉತ್ತರ ಕನ್ನಡ, ದಾವಣಗೆರೆ ತಲಾ 3, ಚಿಕ್ಕಮಗಳೂರು, ಗದಗ, ರಾಯಚೂರು, ತುಮಕೂರು, ಉಡುಪಿ, ವಿಜಯಪುರದಲ್ಲಿ ತಲಾ 2, ರಾಮನಗರ, ಮಂಡ್ಯ, ಕೊಡಗು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆಯಲ್ಲಿ ತಲಾ 1 ಸಾವು ಸಂಭವಿಸಿದೆ.

ಬೆಂಗಳೂರು ನಗರದಲ್ಲಿ 2,942, ಬಳ್ಳಾರಿ 266, ಮೈಸೂರು 221, ದಾವಣಗೆರೆ 199, ಮಂಡ್ಯ 169, ದಕ್ಷಿಣ ಕನ್ನಡ 152, ಶಿವಮೊಗ್ಗ 150, ಕಲಬುರಗಿ 141, ಕೊಪ್ಪಳ 139, ಯಾದಗಿರಿ 137, ಹಾಸನ 128, ಬಾಗಲಕೋಟೆ 126, ಉಡುಪಿ 113, ವಿಜಯಪುರ 112, ಚಿಕ್ಕಮಗಳೂರು 101, ಗದಗ 87, ಚಿಕ್ಕಬಳ್ಳಾಪುರ 82, ಬೆಂಗಳೂರು ಗ್ರಾಮಾಂತರ ಮತ್ತು ಉತ್ತರ ಕನ್ನಡ 77, ಬೆಳಗಾವಿ 75, ಹಾವೇರಿ 53, ಚಿತ್ರದುರ್ಗ 50, ಬೀದರ್‌ 32, ಧಾರವಾಡ 29, ಕೋಲಾರ 26, ತುಮಕೂರು 25, ರಾಯಚೂರು 22, ರಾಮನಗರ, ಕೊಡಗು ತಲಾ 11 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ.