Asianet Suvarna News Asianet Suvarna News

ಶಾಕಿಂಗ್ ನ್ಯೂಸ್: ಕರ್ನಾಟಕದಲ್ಲಿ ಏ.6ರಂದು ಹೊಸ ದಾಖಲೆ ಬರೆದ ಕೊರೋನಾ 2ನೇ ಅಲೆ!

ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಹೊಸ ದಾಖಲೆ ಬರೆದಿದೆ. ಈ ಹಿನ್ನೆಲೆಯಲ್ಲಿ  ಜನರ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಮಾಡಿದೆ.

Corona second wave 6150 New Cases In Karnataka On April 6th rbj
Author
Bengaluru, First Published Apr 6, 2021, 7:12 PM IST

ಬೆಂಗಳೂರು, (ಏ.06): ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಜೋರಾಗಿದ್ದು, ದಾಖಲಾಗುತ್ತಿರುವ ಸೋಂಕಿತ ಪ್ರಕರಣಗಳ ಸಂಖ್ಯೆ ಹಾಗೂ ಸಾಯುವವರ ಸಂಖ್ಯೆಯಲ್ಲೂ ಹೊಸ ದಾಖಲೆ ಬರೆಯುತ್ತಿದೆ.

ಹೌದು...ಇಂದು (ಮಂಗಳವಾರ) ಒಂದೇ ದಿನ ಬರೋಬ್ಬರಿ 6150 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳ ಪತ್ತೆಯಾಗಿದ್ದು, 39 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು 3487 ಸೋಂಕಿತರು ಗುಣಮುಖರಾಗಿದ್ದಾರೆ.

ದೇಶದಲ್ಲಿ ಒಂದೇ ದಿನ ಲಕ್ಷ ಕೊರೋನಾ ಕೇಸ್, 478 ಸಾವು!

ಕರ್ನಾಟಕದಲ್ಲಿ ಒಟ್ಟು 1026584ಕ್ಕೆ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳಿವೆ. ಈ ಪೈಕಿ 968762 ಸೋಂಕಿತರು ಗುಣಮುಖರಾಗಿದ್ದು, ಸೋಂಕಿಗೆ ಈವರೆಗೂ 12696 ಜನರು ಸಾವನ್ನಪ್ಪಿದ್ದಾರೆ. ಇನ್ನು ಪ್ರಸ್ತುತ ರಾಜ್ಯದಲ್ಲಿ 45107 ಸಕ್ರಿಯ ಪ್ರಕರಣಗಳಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
 ಬಾಗಲಕೋಟೆ 18, ಬಳ್ಳಾರಿ 87, ಬೆಳಗಾವಿ 47, ಬೆಂಗಳೂರು ಗ್ರಾಮಾಂತರ 80, ಬೆಂಗಳೂರು 4266, ಬೀದರ್ 167, ಚಾಮರಾಜನಗರ 5, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 29, ಚಿತ್ರದುರ್ಗ 21, ದಕ್ಷಿಣ ಕನ್ನಡ 89, ದಾವಣಗೆರೆ 47, ಧಾರವಾಡ 43, ಗದಗ 12, ಹಾಸನ 110, ಹಾವೇರಿ 5, ಕಲಬುರಗಿ 261, ಕೊಡಗು 22, ಕೋಲಾರ 56, ಕೊಪ್ಪಳ 20, ಮಂಡ್ಯ 102, ಮೈಸೂರು 237, ರಾಯಚೂರು 29, ರಾಮನಗರ 14, ಶಿವಮೊಗ್ಗ 49, ತುಮಕೂರು 157, ಉಡುಪಿ 57, ಉತ್ತರ ಕನ್ನಡ 66, ವಿಜಯಪುರ 22, ಯಾದಗಿರಿ 16 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Follow Us:
Download App:
  • android
  • ios