ಬೆಂಗಳೂರು(ಏ.24): ಕೊರೋನಾ ಸೋಂಕಿತರ ಪ್ರಮಾಣ ರಾಜ್ಯದಲ್ಲಿ ಕಡಿಮೆಯಾಗುತ್ತಿದ್ದು, ಎಲ್ಲಿ ಕ್ವಾರಂಟೈನ್‌ ಮಾಡಲಾಗುತ್ತಿದೆಯೋ ಅಲ್ಲಿ ಮಾತ್ರ ಪ್ರಕರಣಗಳು ಕಂಡು ಬರುತ್ತಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರೈಮರಿ, ಸೆಕೆಂಡರಿ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಕೊರೊನಾ ಪಾಸಿಟಿವ್‌ ಕಂಡು ಬರುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಕೆಲವೊಂದು ಲಾಕ್‌ಡೌನ್‌ ನಿಯಮ ಸಡಿಲಿಕೆ ಮಾಡಿದೆ. ಸಡಿಲಿಕೆ ಮಾಡುವ ಸಂಬಂಧ ಸಾಕಷ್ಟುಆಲೋಚನೆ ಮಾಡಲಾಗಿದೆ. ಯಾವ ಯಾವ ನಿಯಮಗಳನ್ನು ಪಾಲಿಸಬೇಕು ಎನ್ನುವ ಕುರಿತು ಆಯಾ ಇಲಾಖೆಯ ಮುಖ್ಯಸ್ಥರು ಮಾರ್ಗಸೂಚಿ ಹೊರಡಿಸಿದ್ದಾರೆ. ಆದರೂ ಕೆಲಸ ಮಾಡುವ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಇನ್ನೂ ಎರಡು ತಿಂಗಳು ಮದ್ಯ ಸಿಕ್ಕಿಲ್ಲಾಂದ್ರೆ ಕುಡಿತ ಬಿಡ್ತಾರಂತೆ ಶೇ.50ರಷ್ಟು ಜನ

ಲಾಕ್‌ಡೌನ್‌ ಸಡಿಲಿಕೆಯನ್ನು ಅಗತ್ಯಕ್ಕನುಗುಣವಾಗಿ ನೀಡಲಾಗಿದೆ. ಬೇರೆ ಬೇರೆ ಕ್ಷೇತ್ರದಲ್ಲಿ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನು ಕರೆಸಿಕೊಳ್ಳುವಂತೆ ತಿಳಿಸಲಾಗಿದೆ. ಐಟಿ ಕ್ಷೇತ್ರಕ್ಕೆ ಮೂರನೇ ಒಂದು ಭಾಗ ಸಿಬ್ಬಂದಿ ಕರ್ತವ್ಯ ಹಾಜರಾಗಲು ಅನುಮತಿ ನೀಡಲಾಗಿದೆ. ಅಧಿಕಾರಿಗಳು, ತಜ್ಞರೊಂದಿಗೆ ಚರ್ಚಿಸಿ ಅಳವಾಗಿ ಅಧ್ಯಯನ ನಡೆಸಿ ಸಡಿಲಿಕೆ ಮಾಡಲಾಗಿದೆ. ಕೊರೋನಾದಿಂದ ಸ್ಥಗಿತಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಲಾಗುವುದು ಎಂದರು.

24 ಗಂಟೆ ಸೂಪರ್‌ ಮಾರ್ಕೆಟ್‌ ತೆರೆಯಲು ಹೈಕೋರ್ಟ್‌ ಅಸ್ತು

ಇನ್ನು ನಗರ ಹೊಂಗಸಂದ್ರದಲ್ಲಿ ಸೋಂಕು ಪತ್ತೆಯಾದ ಒಂಭತ್ತು ಮಂದಿಯನ್ನು ತಪಾಸಣೆ ಮಾಡಲಾಗಿತ್ತು. ಅವರಲ್ಲಿ ಪಾಸಿಟಿವ್‌ ಬಂದಿದೆ. ಬೊಮ್ಮನಹಳ್ಳಿ ಕೈಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ಚಿಕ್ಕ ಕೋಣೆಯಲ್ಲಿ ವಾಸವಾಗಿದ್ದರು. ಸೋಂಕಿತ ವ್ಯಕ್ತಿಯು ಎಷ್ಟುಮಂದಿಯನ್ನು ಭೇಟಿಯಾಗಿದ್ದ ಎಂಬುದರ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕಲಾಗಿದೆ. ಮತ್ತಷ್ಟುಮಂದಿಯನ್ನು ಭೇಟಿಯಾಗಿರುವ ಮಾಹಿತಿ ಇದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.