ಬೆಳ್ತಂಗಡಿ(ಏ.24): ರಾಜ್ಯದಲ್ಲಿ ಮದ್ಯವನ್ನು ನಿಷೇಧಿಸಿದಲ್ಲಿ ಜನರ ಬದುಕು ಹಸನಾಗಲಿದೆ ಎಂಬುದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗು ಜನಜಾಗೃತಿ ವೇದಿಕೆ ನಡೆಸಿದ ಸರ್ವೆಯಿಂದ ಬಹಿರಂಗಗೊಂಡಿದೆ.

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಪರಿಣಾಮಕಾರಿಯಾದ ಸರ್ವೇಕ್ಷಣೆ ನಡೆದಿದ್ದು ಅನೇಕ ಕುತೂಹಲಕಾರಿ ಅಂಶಗಳು ವ್ಯಕ್ತವಾಗಿವೆ. ಲಾಕ್‌ ಡೌನ್‌ ಸಂದರ್ಭ ಇರುವ ಮದ್ಯಪಾನ ನಿಷೇಧ ಬಗ್ಗೆ 9,400 ಜನ ಸೇವಾ ಪ್ರತಿನಿಧಿಗಳಿಂದ ಕರ್ನಾಟಕದ ಪ್ರತೀ ಜಿಲ್ಲೆಯಲ್ಲೂ ಸರ್ವೇ ನಡೆಸಿದಾಗ ಶೇ.60ರಷ್ಟುಜನರಿಂದ ಮದ್ಯ ನಿಷೇಧದಿಂದ ಗ್ರಾಮದಲ್ಲಿ ಒಳ್ಳೆಯದಾಗಿದೆ. ಶೇ.38 ಮಂದಿಯಿಂದ ತುಂಬಾ ಒಳ್ಳೆಯದಾಗಿದೆ. ಶೇ.89 ಜನರು ತಮ್ಮ ಪ್ರದೇಶದಲ್ಲಿ ಮದ್ಯ ಸಿಗದೇ ಒಳ್ಳೆಯದಾಗಿದೆ ಎಂದು ಹೇಳಿ​ದ್ದಾರೆ.

24 ಗಂಟೆ ಸೂಪರ್‌ ಮಾರ್ಕೆಟ್‌ ತೆರೆಯಲು ಹೈಕೋರ್ಟ್‌ ಅಸ್ತು

ಶೇ. 41ರಷ್ಟುಜನ ಮದ್ಯ ಸಿಗದೇ ಸಮಾಜದಲ್ಲಿ ಸಂತೋಷ ಹೆಚ್ಚಾಗಿದೆ ಎಂದು ಹೇಳಿ​ದ್ದಾರೆ. ಶೇ.67ರಷ್ಟುಮದ್ಯ ಸಿಗದೇ ಇದ್ದಿದ್ದರಿಂದ ಸಮಾಜದಲ್ಲಿ ಗೊಂದಲ, ಗಲಾಟೆ ಅಥವಾ ಸಮಸ್ಯೆ ಆಗಿಲ್ಲ ಎಂದು ತಿಳಿ​ಸಿ​ದ್ದಾರೆ. ಶೇ. 43ರಷ್ಟುಜನರಿಗೆ ವಿತ್‌ ಡ್ರಾವಲ್‌ ಸಮಸ್ಯೆ ಇದೆ ಎಂಬ ಅಂಶ ಪತ್ತೆಯಾಗಿದೆ.

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ಶೇ. 30ರಷ್ಟುಜನರು ಮಾನಸಿಕ ಖಿನ್ನತೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.12ರಷ್ಟುಜನರು ಮದ್ಯ ಅಕ್ರಮ ಸೇವನೆ ಬಗ್ಗೆ ಸರ್ವೇ ವೇಳೆ ಮಾಹಿತಿ ನೀಡಿದ್ದಾರೆ. ಮದ್ಯ ಪ್ರಿಯರು, ಮಹಿಳೆಯರು ಸೇರಿ ಹಲವರ ಅಭಿಪ್ರಾಯ ದಾಖಲಿಸಿಕೊಳ್ಳಲಾಗಿದೆ. ಮದ್ಯ ನಿಷೇಧದಿಂದ ಸಮಾಜ ಮತ್ತು ಕುಟುಂಬದಲ್ಲಿ ಶಾಂತಿ ಸ್ಥಾಪನೆಯಾಗಿದೆ. ಹೀಗಾಗಿ ಯಾಕೆ ಮದ್ಯ ನಿಷೇಧಿಸಬಾರದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದೆ.

ಕೊರೋನಾ ಆತಂಕ: ಎಂತಹ ಸಂದಿಗ್ಧ ಪರಿಸ್ಥಿತಿ ಎದುರಿಸಲು ಸಜ್ಜಾಗಿ, ಡಿಸಿಎಂ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್‌. ಎಚ್‌. ಮಂಜುನಾಥ್‌ ನೇತೃತ್ವದಲ್ಲಿ ಈ ಸರ್ವೇ ನಡೆಸಲಾಗಿತ್ತು. ಒಂದು ತಿಂಗಳು ಕುಡಿಯದೇ ಇದ್ದುದರಿಂದ ಒಳ್ಳೆಯದಾಗಿದೆಯೇ ಹೊರತು ಕೆಟ್ಟದಾಗಿಲ್ಲ. ಮದ್ಯದ ಅವಶ್ಯಕತೆಯೇ ಇಲ್ಲ ಎಂಬ ಸಂದೇಶ ಈ ಸರ್ವೆಯಿಂದ ವ್ಯಕ್ತವಾಗಿದೆ. ಹೀಗಾಗಿ ಈಗಿರುವ ಮದ್ಯ ನಿಷೇಧವನ್ನು ಯಾಕೆ ಶಾಶ್ವತ ಮಾಡಬಾರದು? ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಡಾ. ಎಲ್‌. ಎಚ್‌. ಮಂಜುನಾಥ್‌ ತಿಳಿಸಿದ್ದಾರೆ.

ತಬ್ಲೀಘಿಗಳಿಗೆ ರಕ್ಷಣೆ ನೀಡಿದ ಆರೋಪ: ಶಾಸಕ ಜಮೀರ್‌ ವಿರುದ್ಧ ದೂರು

ಈಗ ಇರುವ ಪರಿಸ್ಥಿತಿ ಇನ್ನೂ 2 ತಿಂಗಳು ಮುಂದುವರಿದರೆ ಶೇ. 80 ವ್ಯಸನಿಗಳಲ್ಲಿ ಶೇ. 50 ರಷ್ಟುಕುಡಿತ ಬಿಡಲಿದ್ದಾರೆ. ಮದ್ಯ ನಿಷೇಧ ಮಾಡಿದರೆ ಸರ್ಕಾರಕ್ಕೆ ಉತ್ತಮ ಹೆಸರು ಬರಲಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್‌ ವಿ. ಪಾಯಸ್‌ ತಿಳಿಸಿದ್ದಾರೆ.