Asianet Suvarna News Asianet Suvarna News

Covid Crisis: ಬೆಂಗ್ಳೂರಲ್ಲಿ 21 ದಿನದ ಬಳಿಕ 10 ಸಾವಿರಕ್ಕೆ ತಗ್ಗಿದ ಸೋಂಕು

*  ಪಾಸಿಟಿವಿಟಿ ದರ ಶೇ.17
*  ಪರೀಕ್ಷೆಯ ಪ್ರಮಾಣವೂ ಇಳಿಕೆ
*  ಕಂಟೈನ್ಮೆಂಟ್‌ ಇಳಿಮುಖ
 

Decreasing Corona Cases in Bengaluru grg
Author
Bengaluru, First Published Feb 1, 2022, 4:26 AM IST

ಬೆಂಗಳೂರು(ಫೆ.01): ರಾಜಧಾನಿಯಲ್ಲಿ(Bengaluru) ಕೊರೋನಾ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿದ್ದು, ಸೋಮವಾರ 10,692 ಮಂದಿ ಸೋಂಕಿತರಾಗಿದ್ದು, 12 ಜನರು ಸಾವಿಗೀಡಾಗಿದ್ದಾರೆ. 8,812 ಮಂದಿ ಗುಣಮುಖರಾಗಿದ್ದಾರೆ. ಸದ್ಯ 1.34 ಲಕ್ಷ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 62 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ(Positivity Rate) ಶೇ.17ರಷ್ಟು ದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಪರೀಕ್ಷೆಗಳು 20 ಸಾವಿರ ಕಡಿಮೆಯಾಗಿದ್ದು, ಹೀಗಾಗಿಯೇ ಹೊಸ ಸೋಂಕಿತರ ಹೆಚ್ಚು ಕಡಿಮೆ ಎರಡು ಸಾವಿರದಷ್ಟು ಇಳಿಕೆಯಾಗಿದೆ (ಭಾನುವಾರ 11938 ಪ್ರಕರಣ).

ಕೊರೋನಾ ಮೂರನೇ ಅಲೆಯಲ್ಲಿ(Corona 3rd Wave) ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು 30 ಸಾವಿರ ಗಡಿ ದಾಟಿದ್ದವು. ಜ.20ರಂದು ಒಂದೇ ದಿನ ಬರೋಬ್ಬರಿ 30,540 ಮಂದಿಗೆ ಸೋಂಕು ತಗುಲಿತ್ತು. ಕಳೆದ ಒಂದು ವಾರದಿಂದ ಸೋಂಕು ಇಳಿಕೆಯಾಗುತ್ತಾ ಸಾಗಿದ್ದು, ಜ.10 ನಂತರ ಅಂದರೆ 21 ದಿನಗಳ ಬಳಿ ಹೊಸ ಪ್ರಕರಣಗಳು 10 ಸಾವಿರಕ್ಕೆ ತಗ್ಗಿವೆ.

Covid 3rd Wave: ಕರ್ನಾಟಕದಲ್ಲಿ ಸಕಾಲಿಕ ನಿರ್ಬಂಧದಿಂದ ಸೋಂಕಿನ ತೀವ್ರತೆ ತಗ್ಗಿದೆ: IISC

12 ಮಂದಿ ಸಾವು: 

ನಗರದಲ್ಲಿ ಸೋಮವಾರ 35 ವರ್ಷದ ಯುವಕ, 40ರಿಂದ 59 ವರ್ಷದ ನಾಲ್ವರು, 70 ವರ್ಷ ಮೇಲ್ಪಟ್ಟಏಳು ಸೋಂಕಿತರು ಸಾವಿಗೀಡಾಗಿದ್ದಾರೆ(Death) ಎಂದು ಬಿಬಿಎಂಪಿ(BBMP) ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ. ಕೊರೋನಾದಿಂದ ಈವರೆಗೆ ನಗರದಲ್ಲಿ ಸೋಂಕಿತರಾದವರ ಸಂಖ್ಯೆ 17.2 ಲಕ್ಷಕ್ಕೆ, ಗುಣಮುಖರ ಸಂಖ್ಯೆ 15.7 ಲಕ್ಷಕ್ಕೆ, ಸೋಂಕಿತರ ಸಾವಿನ ಸಂಖ್ಯೆ 16,594ಕ್ಕೆ ಏರಿಕೆಯಾಗಿದೆ.

ಕಂಟೈನ್ಮೆಂಟ್‌ ಇಳಿಮುಖ

ನಗರದಲ್ಲಿ ಸೋಂಕು ಹೊಸ ಪ್ರಕರಣಗಳು ಇಳಿಕೆಯಾಗುತ್ತಿದ್ದಂತೆ ಸೋಂಕು ಹೆಚ್ಚು ವರದಿಯಾಗುತ್ತಿರುವ ಪ್ರದೇಶಗಳೆಂದು ಗುರುತಿಸಿದ್ದ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆಯೂ ಇಳಿಕೆಯಾಗುತ್ತಿದೆ. 10 ದಿನಗಳ ಹಿಂದೆ ಬಿಬಿಎಂಪಿ ಅಧಿಕಾರಿಗಳು 500ಕ್ಕೂ ಅಧಿಕ ಕಂಟೈನ್ಮೆಂಟ್‌ ವಲಯಗಳನ್ನು ಗುರುತಿಸಿದ್ದರು. 10 ದಿನಗಳಿಂದ ನಿರಂತರವಾಗಿ ಕಂಟೈನ್ಮೆಂಟ್‌ ವಲಯ ಇಳಿಕಯಾಗುತ್ತಿದ್ದು, ಸೋಮವಾರದ ಅಂತ್ಯಕ್ಕೆ 161ಕ್ಕೆ ಇಳಿಕೆಯಾಗಿವೆ.

*ಬಿಬಿಎಂಪಿ ವಲಯ ಕಂಟೈನ್ಮೆಂಟ್‌ ವಲಯ

ಪೂರ್ವ 20
ಬೊಮ್ಮನಹಳ್ಳಿ 49
ಯಲಹಂಕ 21
ದಕ್ಷಿಣ 27
ಮಹದೇವಪುರ 20
ಪಶ್ಚಿಮ 19
ದಾಸರಹಳ್ಳಿ 3
ಆರ್‌.ಆರ್‌.ನಗರ 2

ಕರ್ನಾಟಕದಲ್ಲಿ (Karnataka) ಕೊರೋನಾ ಸೋಂಕು (Coronavirus) ದಿನದಿಂದ ದಿನಕ್ಕೆ ಕಡೆಮೆಯಾಗುವುತ್ತಿರುವುದು ಸಂತಸದ ಸಂಗತಿ. ಆದ್ರೆ, ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳ ಮೂಡಿಸಿದೆ.
ಇಂದು(ಸೋಮವಾರ) ರಾಜ್ಯದಲ್ಲಿ 24,172 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 56 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಸಿಲಿನಾಕ್ ಸಿಟಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ10,692 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 12 ಜನರು ಬಲಿಯಾಗಿದ್ದಾರೆ.

1,41,240 ಜನರು ಇಂದು ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾರೆ. 30,869 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 17.11% ಇದ್ದು, ಒಟ್ಟು ರಾಜ್ಯದಲ್ಲಿ 2,44,331 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ. 

Covid Testing Guidelines ಕೊರೋನಾ ಪರೀಕ್ಷೆ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ

ಕರ್ನಾಟಕದಲ್ಲಿ (Karnataka) ಕೊರೋನಾ ನಿರ್ಬಂಧಗಳನ್ನು ಸೂಕ್ತ ಸಂದರ್ಭದಲ್ಲಿ ಜಾರಿಗೊಳಿಸಿ ಪರಿಣಾಮ ಸೋಂಕಿನ ತೀವ್ರತೆ ಸಾಕಷ್ಟು ಕಡಿಮೆಯಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (IISC) ಹಾಗೂ ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ. ಅಲ್ಲದೆ, ಈಗ ನಿರ್ಬಂಧ ಹಿಂಪಡೆದರೂ ಸಹ ಸೋಂಕು ಪ್ರಮಾಣ ಹೆಚ್ಚಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ತಜ್ಞರಾದ ಅನಿರುದ್ಧ್ ಅಡಿಗ, ಶಿವ ಆತ್ರೇಯ, ರಾಜೇಶ್‌ ಸುಂದರೇಶನ್‌ ನೇತೃತ್ವದಲ್ಲಿ ಬೆಂಗಳೂರಿನಲ್ಲಿ(Bengaluru) ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ(Weekend and Night Curfew) ಸೇರಿದಂತೆ ಕೊರೋನಾ ನಿರ್ಬಂಧಗಳ(Corona Restrictions) ಪರಿಣಾಮಗಳನ್ನು ಅಧ್ಯಯನ ಮಾಡಲಾಗಿದೆ. ದಕ್ಷಿಣ ಆಫ್ರಿಕಾ(South Africa) ಮತ್ತು ಬೆಂಗಳೂರಿನಲ್ಲಿ ಒಮಿಕ್ರೋನ್‌(Omicron)  ರೂಪಾಂತರಿ ಸೋಂಕಿನ ಪರಿಣಾಮಗಳು ಒಂದೇ ರೀತಿ ಕಂಡು ಬಂದ ಹಿನ್ನೆಲೆ ಈ ಅಧ್ಯಯನವನ್ನು ನಡೆಸಲಾಗಿದೆ.
 

Follow Us:
Download App:
  • android
  • ios