ಬೆಂಗಳೂರು (ಆ.18):  ರಾಜ್ಯದಲ್ಲಿ ಸೋಮವಾರ ಮತ್ತೆ ಹೊಸದಾಗಿ 6,317 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 115 ಮಂದಿ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಲ್ಲದೆ, ಸೋಂಕಿನಿಂದ ಗುಣಮುಖರಾದ 7,071 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಇದರೊಂದಿಗೆ ರಾಜ್ಯದಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 2,33,283ಕ್ಕೆ ಏರಿಕೆಯಾದರೆ, ಕೋವಿಡ್‌ಗೆ ಈ ವರೆಗೆ ಬಲಿಯಾದವರ ಒಟ್ಟು ಸಂಖ್ಯೆ ನಾಲ್ಕು ಸಾವಿರ ಗಡಿ ದಾಟಿ 4,062 ಕ್ಕೆ (ಅನ್ಯ ಕಾರಣದಿಂದ ಮೃತಪಟ್ಟ16 ಸೋಂಕಿತರನ್ನು ಹೊರತುಪಡಿಸಿ) ತಲುಪಿದೆ.

ಇನ್ನು, ಗುಣಮುಖರಾದವರ ಒಟ್ಟು ಸಂಖ್ಯೆ 1,48,562ಕ್ಕೆ ಏರಿಕೆಯಾಗಿದೆ. ಉಳಿದಂತೆ 80,643 ಮಂದಿ ಸಕ್ರಿಯ ಸೋಂಕಿತರು ನಾಡಿನ ನಾನಾ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಸೋಂಕಿತರ ಪೈಕಿ 695 ಮಂದಿಯ ಆರೋಗ್ಯ ಗಂಭೀರವಾಗಿದ್ದು ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪರೀಕ್ಷೆ ಇಳಿಕೆ:

ಈ ಮಧ್ಯೆ, ಸೋಮವಾರ ಕೋವಿಡ್‌ ಪರೀಕ್ಷಾ ಸಂಖ್ಯೆ ಇಳಿಕೆಯಾಗಿದ್ದು 37,700 ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 14,489 ರಾರ‍ಯಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಮತ್ತು 23,211 ಆರ್‌ಟಿಪಿಸಿಆರ್‌ ಮತ್ತು ಇತರೆ ಪರೀಕ್ಷೆ ನಡೆಸಲಾಗಿದೆ. ಕಳೆದ ಒಂದು ವಾರದಿಂದ ನಿತ್ಯ 50 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿತ್ತು.

ಗುಡ್‌ ನ್ಯೂಸ್: ದೇಶದಲ್ಲಿ ಕೊರೋನಾ ಅಬ್ಬರ ಇಳಿಕೆ!...

ಬೆಂಗಳೂರಲ್ಲಿ 2053 ಸೋಂಕು ಪ್ರಕರಣ:

ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ 2053 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದ ಜಿಲ್ಲೆಗಳ ಪೈಕಿ ಮೈಸೂರು 597, ಶಿವಮೊಗ್ಗ 397, ಬಳ್ಳಾರಿ 319, ಉಡುಪಿ 268, ಹಾಸನ 250, ಕಲಬುರಗಿ 211, ಧಾರವಾಡ 201, ಬೆಳಗಾವಿ 171, ಕೊಪ್ಪಳ 169, ದಾವಣಗೆರೆ 165, ಬಾಗಲಕೋಟೆ 164, ದಕ್ಷಿಣ ಕನ್ನಡ 144, ತುಮಕೂರು 130, ವಿಜಯಪುರ 106, ರಾಯಚೂರು 110, ಗದಗ 99, ಚಿಕ್ಕಮಗಳೂರು 92, ಉತ್ತರ ಕನ್ನಡ 89, ರಾಮನಗರ 85, ಬೀದರ್‌ 72, ಯಾದಗಿರಿ 69, ಚಾಮರಾಜನಗರ 61, ಹಾವೇರಿ 43, ಚಿಕ್ಕಬಳ್ಳಾಪುರ 41, ಮಂಡ್ಯ 26, ಬೆಂಗಳೂರು ಗ್ರಾಮಾಂತರ 25, ಚಿತ್ರದುರ್ಗ ಜಿಲ್ಲೆಯಲ್ಲಿ 21 ಮಂದಿಗೆ ಸೋಂಕು ದೃಢಪಟ್ಟಿದೆ.

ಕೊರೋನಾ ಸೋಂಕಿಗೆ ಹಿರಿಯ ಪತ್ರಕರ್ತ ಬಲಿ.

ಸಾವು ಎಲ್ಲಿ ಎಷ್ಟು?:

ಬೆಂಗಳೂರಿನಲ್ಲಿ ಸೋಮವಾರ ಅತಿ ಹೆಚ್ಚು 39 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಉಳಿದಂತೆ ಹಾಸನ, ಬೆಳಗಾವಿ ತಲಾ 9 ಜನ, ದಕ್ಷಿಣ ಕನ್ನಡ 8, ಕಲಬುರಗಿ 7, ಬಳ್ಳಾರಿ 6, ಧಾರವಾಡ, ಮೈಸೂರು ತಲಾ 5, ಹಾವೇರಿ, ಕೊಪ್ಪಳ, ಶಿವಮೊಗ್ಗ ತಲಾ 4, ರಾಯಚೂರು, ವಿಜಯಪುರ ತಲಾ 3, ತುಮಕೂರು, ಚಿಕ್ಕಮಗಳೂರು ತಲಾ 2, ಬಾಗಲಕೋಟೆ, ಕೊಡಗು, ಮಂಡ್ಯ, ಉಡುಪಿ, ಉತ್ತರ ಕನ್ನಡದಲ್ಲಿ ತಲಾ ಒಂದು ಸಾವು ಕೋವಿಡ್‌ನಿಂದ ಸಂಭವಿಸಿದೆ. ಈ ಪೈಕಿ ಏಳು ಮಂದಿ ಹೊರತುಪಡಿಸಿ ಉಳಿದ 108 ಜನರಿಗೆ ಸೋಂಕು ತಗುಲಿದ ಮೂಲ ಅಥವಾ ಸಂಪರ್ಕವೇ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಬುಲಿಟಿನ್‌ನಲ್ಲಿ ಪ್ರಕಟಿಸಲಾಗಿದೆ.