ಕೊರೋನಾ ಸೋಂಕಿಗೆ ಹಿರಿಯ ಪತ್ರಕರ್ತ ಬಲಿ
ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಸೋಂಕಿಗೆ ಹಿರಿಯ ಪತ್ರಕರ್ತರೋರ್ವರು ಬಲಿಯಾಗಿದ್ದಾರೆ.
ಕವಿತಾಳ(ಆ.18): ಜಂಗಮ ಸಮಾಜದ ಹಿರಿಯ ಮುಖಂಡ, ಸುದ್ದಿಮೂಲ ಪತ್ರಿಕೆಯ ಹಿರಿಯ ವರದಿಗಾರ ಪರ್ವತಯ್ಯಸ್ವಾಮಿ (56) ಅವರು ಭಾನುವಾರ ನಿಧನರಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಪರ್ವತಯ್ಯಸ್ವಾಮಿ ಅವರಿಗೆ ಶನಿವಾರ ಕೋವಿಡ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ರಾಯಚೂರಿನ ಒಪೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಭಾನುವಾರ ಕೊನೆಯುಸಿರೆಳೆದಿದ್ದು, ಕೊರೋನಾದಿಂದ ಸಾವನಪ್ಪಿರುವುದರ ಕುರಿತು ಜಿಲ್ಲಾಡಳಿತ ಘೋಷಣೆ ಮಾಡಬೇಕಾಗಿದೆ.
ಮೃತರಿಗೆ ಪತ್ನಿ, ಒಬ್ಬ ಪತ್ರ ಮತ್ತುಒಬ್ಬ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.ಮೃತರ ಅಂತ್ಯಕ್ರಿಯೆ ಕೋವಿಡ್ ನಿಯಮಾನುಸಾರ ರಾಯಚೂರಿನಲ್ಲಿ ಸೋಮವಾರ ನಡೆಯಿತು.
ಸಂತಾಪ:ಇರಕಲ್ ಮಠದ ಬಸವಪ್ರಸಾದ ಸ್ವಾಮೀಜಿ, ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಪತ್ರಕರ್ತ ಎಂ.ಬಿ.ಸಿದ್ರಾಮಯ್ಯ, ಬಸವರಾಜ ಭೋಗಾವತಿ, ಪಪÜಂ ಸದಸ್ಯಶಿಶಿಧರ ಭಾವಿಕಟ್ಟಿ, ಗಂಗಪ್ಪ ದಿನ್ನಿ, ಮುಖಂಡರಾದ ಲಿಯಾಖತ್ ಅಲೀ ಮತ್ತು ಬಿ.ಎ.ಕರೀಂಸಾಬ್‌ಮತ್ತು ಸ್ಥಳೀಯ ಪತ್ರಕರ್ತರುತೀವ್ರ ಸಂತಾಪ ವ್ಯಕ್ರಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಅದೇ ರೀತಿ ಕವಿತಾಳ ಸೇರಿ ಜಿಲ್ಲೆಯ ಪತ್ರಿಕಾ ಬಳಗದ ಮಿತ್ರರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮೃತರಿಗೆ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.