Asianet Suvarna News Asianet Suvarna News

ಮತ್ತೆ ಏರುತ್ತಿದೆ ಕೊರೋನಾ : ಯಾವ ಜಿಲ್ಲೆಯಲ್ಲಿ ಎಷ್ಟು ..?

ರಾಜ್ಯದಲ್ಲಿ ನಿಧಾನಗತಿಯಲ್ಲಿ ಇಳಿಕೆಯಾಗಿದ್ದ ಮಹಾಮಾರಿ ಕೊರೋನಾ ಇದೀಗ ಮತ್ತೆ ಏರುಗತಿಯಲ್ಲಿ ಸಾಗಿದೆ. 

Corona Cases Slightly Raises in Karnataka Again  snr
Author
Bengaluru, First Published Dec 5, 2020, 7:02 AM IST

ಬೆಂಗಳೂರು (ಡಿ.05):  ರಾಜ್ಯದಲ್ಲಿ ಶುಕ್ರವಾರ 1,247 ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ಧೃಢಪಟ್ಟಿದ್ದು, 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 877 ಮಂದಿ ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕರಣಗಳಲ್ಲಿ ತುಸು ಏರಿಕೆ ದಾಖಲಾಗಿದೆ. ಪ್ರಸಕ್ತ 25,046 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 287 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 8.90 ಲಕ್ಷ ಮಂದಿಯಲ್ಲಿ ಸೋಂಕು ವರದಿಯಾಗಿದ್ದು ಇವರಲ್ಲಿ 8.53 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಒಟ್ಟು 11,834 ಮಂದಿ ಮರಣವನ್ನಪ್ಪಿದ್ದಾರೆ.

ಕೊರೋನಾ ದೈನಂದಿನ ಪರೀಕ್ಷೆಯಲ್ಲಿಯೂ ತುಸು ಇಳಿಕೆ ದಾಖಲಾಗಿದೆ. ಸಾಮಾನ್ಯವಾಗಿ ಲಕ್ಷದ ಮೇಲೆ ಇರುತ್ತಿದ್ದ ಪರೀಕ್ಷೆ ಶುಕ್ರವಾರ 98,049ಕ್ಕೆ ಇಳಿದಿದೆ. ಈವರೆಗೆ ಒಟ್ಟು 1.15 ಕೋಟಿ ಪರೀಕ್ಷೆ ನಡೆದಿದೆ.

ಅತೀ ಹೆಚ್ಚು ಕೊರೋನಾ ಲಸಿಕೆ ಖರೀದಿಸಿದ ದೇಶ ಭಾರತ, ಅಧ್ಯಯನ ವರದಿ ಬಹಿರಂಗ! ..

ಬೆಂಗಳೂರು ನಗರ ಜಿಲ್ಲೆಯಲ್ಲಿ 8, ತುಮಕೂರು 2, ರಾಯಚೂರು, ಕೋಲಾರ, ಧಾರವಾಡ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ.

ಬೆಂಗಳೂರು ನಗರದಲ್ಲಿ 620, ಬಾಗಲಕೋಟೆ 3, ಬಳ್ಳಾರಿ 13, ಬೆಳಗಾವಿ 17, ಬೆಂಗಳೂರು ಗ್ರಾಮಾಂತರ 19, ಬೀದರ್‌ 3, ಚಾಮರಾಜ ನಗರ 24, ಚಿಕ್ಕಬಳ್ಳಾಪುರ 20, ಚಿಕ್ಕಮಗಳೂರು 20, ಚಿತ್ರದುರ್ಗ 14, ದಕ್ಷಿಣ ಕನ್ನಡ 42, ದಾವಣಗೆರೆ 12, ಧಾರವಾಡ 32, ಗದಗ 5, ಹಾಸನ 49, ಹಾವೇರಿ 8, ಕಲಬುರಗಿ 19, ಕೊಡಗು 18, ಕೋಲಾರ 25, ಕೊಪ್ಪಳ 6, ಮಂಡ್ಯ 53, ಮೈಸೂರು 74, ರಾಯಚೂರು 14, ರಾಮನಗರ 4, ಶಿವಮೊಗ್ಗ 19, ತುಮಕೂರು 73, ಉಡುಪಿ 14, ಉತ್ತರ ಕನ್ನಡ 13, ವಿಜಯಪುರ 12 ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಇಬ್ಬರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

Follow Us:
Download App:
  • android
  • ios