ಬೆಂಗಳೂರು (ನ.05):  ರಾಜ್ಯದಲ್ಲಿ ಇಳಿಮುಖವಾಗುತ್ತಿದ್ದ ಕೊರೋನಾ ಸೋಂಕಿನ ಪ್ರಕರಣಗಳು ಬುಧವಾರ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಗುಣಮುಖರ ಸಂಖ್ಯೆ ಮಾತ್ರ ಹೆಚ್ಚಳ ಆಗುತ್ತಿದೆ.

ಬುಧವಾರ 3,377 ಹೊಸ ಪ್ರಕರಣಗಳು ಪತ್ತೆಯಾಗಿದೆ. 8,045 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 34 ಮಂದಿ ತಮ್ಮ ಮೃತಪಟ್ಟಿದ್ದಾರೆ. 928 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 35,693 ಕ್ಕೆ ಇಳಿದಿದೆ. ರಾಜ್ಯದಲ್ಲಿ ಈವರೆಗೆ 8.35 ಲಕ್ಷ ಜನರಲ್ಲಿ ಸೋಂಕು ತಗುಲಿದ್ದು, ಈ ಪೈಕಿ 7.88 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಬುಧವಾರ 1.02 ಲಕ್ಷ ಜನರಿಗೆ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಒಟ್ಟು 82.88 ಲಕ್ಷ ಪರೀಕ್ಷೆ ಮಾಡಲಾಗಿದೆ.

ಮಹಾಮಾರಿಗೆ ಸಿಕ್ತು ಬ್ರಹ್ಮಾಸ್ತ್ರ : ಈ ಲಸಿಕೆಯಿಂದ ತಡೆಯಬಹುದು ಕೊರೋನಾ ...

ಬೆಂಗಳೂರು ನಗರದಲ್ಲಿ 16 ಮಂದಿ ಅಸುನೀಗಿದ್ದಾರೆ. ಬಳ್ಳಾರಿ ಮತ್ತು ಮೈಸೂರಿನಲ್ಲಿ ತಲಾ 3, ದಾವಣಗೆರೆ, ಧಾರವಾಡ ಮತ್ತು ರಾಮನಗರದಲ್ಲಿ ತಲಾ 2, ಉಡುಪಿ, ಕೋಲಾರ, ಕಲಬುರಗಿ, ಹಾಸನ, ಹಾವೇರಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ 18 ಜಿಲ್ಲೆಗಳಲ್ಲಿ ಒಂದೂ ಕೊರೋನಾ ಸಾವು ಸಂಭವಿಸಿಲ್ಲ.

ಬೆಂಗಳೂರು ನಗರ ಜಿಲ್ಲೆಯಲ್ಲಿ 1,953 ಮಂದಿಯಲ್ಲಿ ಸೋಂಕು ದೃಢವಾಗಿದೆ. ಉಳಿದಂತೆ ಬಾಗಲಕೋಟೆ 47, ಬಳ್ಳಾರಿ 66, ಬೆಳಗಾವಿ 46, ಬೆಂಗಳೂರು ಗ್ರಾಮಾಂತರ 92, ಬೀದರ್‌ 2, ಚಾಮರಾಜ ನಗರ 17, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 29, ಚಿತ್ರದುರ್ಗ 52, ದಕ್ಷಿಣ ಕನ್ನಡ 70, ದಾವಣಗೆರೆ 9, ಧಾರವಾಡ 39, ಗದಗ 2, ಹಾಸನ 172, ಹಾವೇರಿ 20, ಕಲಬುರಗಿ 45 ಕೊಡಗು 10, ಕೋಲಾರ 75, ಕೊಪ್ಪಳ 25, ಮಂಡ್ಯ 93, ಮೈಸೂರು 168, ರಾಯಚೂರು 20, ರಾಮನಗರ 22, ಶಿವಮೊಗ್ಗ 32, ತುಮಕೂರು 95 ಉಡುಪಿ 50, ಉತ್ತರ ಕನ್ನಡ 58, ವಿಜಯಪುರ 43 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 18 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ.