Asianet Suvarna News Asianet Suvarna News

ಕರ್ನಾಟಕದಲ್ಲಿ 4 ತಿಂಗಳಲ್ಲಿ ಕೊರೋನಾ ಕೇಸ್‌ ಭಾರಿ ಏರಿಕೆ

ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಶೇ.80ರಷ್ಟು ಬೆಂಗಳೂರಿನದ್ದು

Corona Cases Increased Drastically in Karnataka grg
Author
Bengaluru, First Published Aug 3, 2022, 1:00 AM IST

ಬೆಂಗಳೂರು(ಆ.03):  ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ಹೊಸ ಕೋವಿಡ್‌ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಏಪ್ರಿಲ್‌ ತಿಂಗಳಲ್ಲಿ ಒಟ್ಟಾರೆ ಎರಡು ಸಾವಿರದಷ್ಟಿದ್ದ ಹೊಸ ಪ್ರಕರಣಗಳ ಸಂಖ್ಯೆ ಜುಲೈ ಮಾಸದಲ್ಲಿ 40 ಸಾವಿರಕ್ಕೆ ಸಮೀಪಿಸಿದೆ. ಆದರೆ ಸೋಂಕಿನ ತೀವ್ರತೆ ಕಡಿಮೆ ಇದ್ದು ಕೋವಿಡ್‌ ಸಾಮಾನ್ಯ ವೈರಲ್‌ ಜ್ವರದ ಮಟ್ಟಕ್ಕೆ ಇಳಿದಿದೆ ಎಂದು ತಜ್ಞರು ಹೇಳುತ್ತಾರೆ. ಹೊಸ ಅಪಾಯಕಾರಿ ತಳಿಗಳು ಕಂಡುಬಂದಿಲ್ಲ. ಆದ್ದರಿಂದ ಮಾಸ್‌್ಕ ಧಾರಣೆ, ಸಾಮಾಜಿಕ ಅಂತರ ಮತ್ತು ಲಸಿಕೆ ಪಡೆಯುವುದರಿಂದ ಸೋಂಕು ಹರಡುವುದನ್ನು ಹತೋಟಿಗೆ ತರಬಹುದು, ಬೇರೆ ಕಠಿಣ ಕ್ರಮದ ಕಠಿಣ ಕ್ರಮದ ಅಗತ್ಯವಿಲ್ಲ ಎಂದು ಸಾಂಕ್ರಾಮಿಕ ತಜ್ಞರು ವಿವರಿಸುತ್ತಾರೆ.

ರಾಜ್ಯದಲ್ಲಿ ಕೋವಿಡ್‌ ವೇಗವಾಗಿ ಹಬ್ಬಲು ಪ್ರಾರಂಭಿಸಿದ 2020ರ ಜುಲೈ ತಿಂಗಳ ಬಳಿಕದ ಕನಿಷ್ಠ ಪ್ರಕರಣ 2022ರ ಏಪ್ರಿಲ್‌ನಲ್ಲಿ ದಾಖಲಾಗಿತ್ತು. ಆದರೆ ಆ ಬಳಿಕ ನಿರಂತರವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಇದೀಗ ರಾಜಕೀಯ ಸಮಾರಂಭಗಳು, ಹಬ್ಬ ಹರಿದಿನಗಳು ಕಳೆಗಟ್ಟುತ್ತಿರುವ ಆಗಸ್ಟ್‌ ಹೊತ್ತಿಗೆ ಸೋಂಕಿತರ ಸಂಖ್ಯೆ ಮತ್ತು ಮರಣದ ಸಂಖ್ಯೆಯೂ ಏರಿದೆ.

CORONA CRISIS: ಕರ್ನಾಟಕದಲ್ಲಿ 1287 ಹೊಸ ಕೋವಿಡ್‌ ಪ್ರಕರಣ ಪತ್ತೆ, 2 ಸಾವು

ಮೂರನೇ ಅಲೆ ತನ್ನ ಪ್ರಖರತೆ ಕಳೆದುಕೊಂಡ ಬಳಿಕ ಏಪ್ರಿಲ್‌ನಲ್ಲಿ ಕೇವಲ 2,108 ಮಂದಿಯಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿತ್ತು. 5 ಸಾವು ಮಾತ್ರ ವರದಿಯಾಗಿತ್ತು. ಆದರೆ, ಬಳಿಕ ಸೋಂಕಿತರ ಸಂಖ್ಯೆ ಮತ್ತು ಸಾವು ಏರುಗತಿಯಲ್ಲಿ ಸಾಗಿದೆ. ಜೂನ್‌ನಲ್ಲಿ 17,309 ಕೇಸು ಪತ್ತೆಯಾಗಿ, 10 ಮಂದಿ ಮೃತರಾಗಿದ್ದರು. ಆದರೆ ಈ ಸಂಖ್ಯೆಗೆ ಹೋಲಿಸಿದರೆ ಜುಲೈಯಲ್ಲಿ ಸೋಂಕಿತರ ಸಂಖ್ಯೆ ಡಬಲ್‌ ಆಗಿದ್ದು, ಸೋಂಕಿನಿಂದ ಮೃತರಾದವರ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ. ಇನ್ನು ಜುಲೈನಲ್ಲಿ 37,952 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 29 ಮಂದಿ ಮೃತಪಟ್ಟಿದ್ದಾರೆ. ಸಾರ್ವಕಾಲಿಕ ಕನಿಷ್ಠ ಪ್ರಕರಣ ದಾಖಲಾದ ಏಪ್ರಿಲ್‌ಗೆ ಹೋಲಿಸಿದರೆ ಜುಲೈಯಲ್ಲಿ ಪ್ರಕರಣ ಸಂಖ್ಯೆ ಹತ್ತೊಂಬತ್ತು ಪಟ್ಟು ಹೆಚ್ಚಾಗಿದೆ.

ಕೋವಿಡ್‌ ಲಸಿಕೆ: ಫ್ರೀ 3ನೇ ಡೋಸ್‌ಗೆ ಭಾರೀ ಬೇಡಿಕೆ

ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಡಾ.ಎಂ. ಕೆ. ಸುದರ್ಶನ್‌, ಕೋವಿಡ್‌ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಆಸ್ಪತ್ರೆಯ ದಾಖಲೀಕರಣ ಕಡಿಮೆಯೇ ಇದೆ. ಜುಲೈನಲ್ಲಿ 29 ಮಂದಿ ಮೃತರಾಗಿದ್ದು ಈ ಪೈಕಿ 26 ಮಂದಿ ಸಹ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಸೋಂಕಿತರ ಸಂಖ್ಯೆ ಪತ್ತೆ ಆಗುತ್ತಿದ್ದರೂ ಸೋಂಕಿನ ಗುಣ ಲಕ್ಷಣ ಗಂಭೀರವಾಗಿಲ್ಲ. ಜಗತ್ತಿನ ಯಾವುದೇ ಭಾಗದಲ್ಲಿ ಕೋವಿಡ್‌ ತೀವ್ರತೆ ಹೆಚ್ಚಿಸುವ ತಳಿ ಸದ್ಯಕ್ಕೆ ವರದಿ ಆಗಿಲ್ಲ. ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ. ಹೊಸ ಕಠಿಣ ಕ್ರಮಗಳ ಅಗತ್ಯವಿಲ್ಲ ಎಂದು ಹೇಳುತ್ತಾರೆ.

ತಿಂಗಳು ಹೊಸ ಪ್ರಕರಣ ಸಾವು ಪರೀಕ್ಷೆ

ಫೆಬ್ರವರಿ 1,31,596 952 26,12,472
ಮಾರ್ಚ್‌ 4,451 104 10,76,246
ಏಪ್ರಿಲ್‌ 2,108 5 2,93,628
ಮೇ 4,480 6 4,89,865
ಜೂನ್‌ 17,309 10 6,26,662
ಜುಲೈ 37,952 29 8,13,635

ಬೆಂಗಳೂರಿನದ್ದೇ ಸಿಂಹಪಾಲು

ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರಿನದ್ದು ಸಿಂಹಪಾಲಿದೆ. ಜುಲೈ ತಿಂಗಳಿನಲ್ಲಿ ವರದಿಯಾದ 37,952 ಪ್ರಕರಣಗಳಲ್ಲಿ ಬೆಂಗಳೂರಿನ ಪ್ರಕರಣಗಳ ಸಂಖ್ಯೆ 31,933. ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಶೇ.80ರಷ್ಟು ಬೆಂಗಳೂರಿನದ್ದು.
 

Follow Us:
Download App:
  • android
  • ios