Asianet Suvarna News Asianet Suvarna News

ಮತಾಂತರಗೊಂಡಿದ್ದ 4 ಕುಟುಂಬಗಳು ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಘರ್​ ವಾಪಸಿ

* ಮತಾಂತರವಾಗಿದ್ದವರು ಹಿಂದೂ ಧರ್ಮಕ್ಕೆ ಘರ್​ ವಾಪಸಿ
* ಶಾಸಕ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಮರಳಿ ಹಿಂದು ಧರ್ಮಕ್ಕೆ
 * ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದ ಹೊಸದುರ್ಗ ತಾಲೂಕಿನ ಸುಡುಗಾಡು ಸಿದ್ದ ಸಮುದಾಯದವರು

converted people came back to hindu religion at Hosadurga rbj
Author
Bengaluru, First Published Oct 10, 2021, 10:11 PM IST
  • Facebook
  • Twitter
  • Whatsapp

ಚಿತ್ರದುರ್ಗ, (ಅ.10):  ಬೇರೊಂದು ಧರ್ಮಕ್ಕೆ ಮತಾಂತರಗೊಂಡಿದ್ದ (convert) ನಾಲ್ಕು ಕುಟುಂಬಗಳನ್ನು ಮತ್ತೆ ಹಿಂದೂ (Hindu)  ಧರ್ಮಕ್ಕೆ ಕರೆತರಲಾಗಿದೆ.

ನನ್ನ ತಾಯಿಯನ್ನೂ ಮತಾಂತರ ಮಾಡಿದ್ದಾರೆ ಎಂದು ಸದನದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದ ಬಿಜೆಪಿ (BJP) ಶಾಸಕ ಗೂಳಿಹಟ್ಟಿ ಶೇಖರ್ (Gulihatti shekar), ಕ್ರೈಸ್ತ ಮತಾಂತರವಾಗಿದ್ದವರನ್ನು ತಮ್ಮ ನೇತೃತ್ವದಲ್ಲಿ ಮರಳಿ ಹಿಂದು ಧರ್ಮಕ್ಕೆ (religion) ಕರೆಸಿಕೊಂಡಿದ್ದಾರೆ.

ವಿಧಾನಸಭೆಯಲ್ಲಿ 'ಕವರ್ ಸ್ಟೋರಿ' ಸದ್ದು, ಮತಾಂತರದ ಬಗ್ಗೆ ಧ್ವನಿ ಎತ್ತಿದ ಗೂಳಿಹಟ್ಟಿ!

ಹೊಸದುರ್ಗ (Hosadurga) ತಾಲೂಕಿನ ಬಲ್ಲಾಳ ಸಮುದ್ರ ಗ್ರಾಮದ ಸುಡುಗಾಡು ಸಿದ್ದ ಸಮುದಾಯದವರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದರು. ಅವರೆಲ್ಲರನ್ನೂ ಇಂದು (ಅ.10) ಹಾಲುರಾಮೇಶ್ವರ ದೇವಾಲಯದಲ್ಲಿ ಘರ್​ ವಾಪಸಿ ಮಾಡಲಾಗಿದೆ

ಹೊಸದುರ್ಗ ತಾಲೂಕಿನ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ನೇತತ್ವದಲ್ಲಿ ಪ್ರದೀಪ್ ಕುಟುಂಬ ಸೇರಿದಂತೆ ಒಟ್ಟು 4 ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರಲಾಗಿದೆ.

ಹಾಲುರಾಮೇಶ್ವರ ದೇವಸ್ಥಾನದಲ್ಲಿ ಮೈಮೇಲೆ ನೀರು ಚಿಮುಕಿಸಿಕೊಂಡು ಶಿಲುಬೆ ತೆಗೆದಿಟ್ಟ ಬಳಿಕ ಕಂಕಣ ಕಟ್ಟಿಸಿ ಜತೆಗೆ  ಮಂಜುನಾಥಸ್ವಾಮಿ ಫೋಟೋ ನೀಡಿ  ಮಾತೃಧರ್ಮಕ್ಕೆ ಸ್ವಾಗತಿಸಿಕೊಳ್ಳಲಾಯಿತು.

ಇತ್ತೀಚೆಗೆ ತಾನೆ ಗೂಳಿಹಟ್ಟಿ ಶೇಖರ್ ಅವರ ತಾಯಿಯನ್ನೇ ಮತಾಂತರ ಮಾಡಲಾಗಿತ್ತು. ಈ ಬಗ್ಗೆ ಗೂಳಿಹಟ್ಟಿ ಶೇಖರ್ ಧ್ವನಿ ಎತ್ತಿದ್ದು, ನಮ್ಮ ತಾಯಿ ಮಾತ್ರವಲ್ಲ ನೂರಾರು ಅಮಾಯಕರನ್ನೂ ಮತಾಂತರ ಪಿಡುಗಿಗೆ ಸಿಲುಕಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ಇದು ಭಾರೀ ಗಂಭೀರ ಸ್ವರೂಪ ಪಡೆದುಕೊಂಡಿತ್ತು.

"

Follow Us:
Download App:
  • android
  • ios