Mandya: ಮತ್ತೆ ಚರ್ಚೆಗೆ ಬಂದ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ: ಪೂಜೆಗೆ ಅವಕಾಶ ಕೋರಿ ಡಿಸಿಗೆ ಮನವಿ!
* ಟಿಪ್ಪು ವಿರುದ್ಧ ದೇವಾಲಯ ಕೆಡವಿ ಮಸೀದಿ ನಿರ್ಮಾಣ ಆರೋಪ.
* ಜ್ಞಾನವಾಪಿ ರೀತಿ ಜಾಮಿಯಾ ಮಸೀದಿ ಪರಿಶೀಲನೆಗೆ ಆಗ್ರಹ.
* ಮನವಿಗೆ ಸ್ಪಂದಿಸಿದಿದ್ರೆ ಕಾನೂನು ಹೋರಾಟದ ಎಚ್ಚರಿಕೆ.
ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ
ಮಂಡ್ಯ (ಮೇ.14): ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ರೀತಿ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ (Srirangapatna Jamia Masjid) ಪರಿಶೀಲನೆ ನಡೆಸಬೇಕು. ಹಿಂದೂ ದೇವಾಲಯದ (Hindu Temple) ಕುರುಹುಗಳಿರುವ ಮಸೀದಿಯಲ್ಲಿ ಪೂಜೆ ಅವಕಾಶ ನೀಡಬೇಕು ಎಂದು ನರೇಂದ್ರ ವಿಚಾರ ಮಂಚ್ ಪದಾಧಿಕಾರಿಗಳು ಮಂಡ್ಯ ಜಿಲ್ಲಾಧಿಕಾರಿಗೆ (Mandya DC) ಮನವಿ ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸಿದಿದ್ರೆ ಜ್ಞಾನವಾಪಿ ಪ್ರಕರಣ ರೀತಿ ಕೋರ್ಟ್ (Court) ಮೆಟ್ಟಿಲೇರುವ ಎಚ್ಚರಿಕೆ (Warning) ನೀಡಿದ್ದಾರೆ.
ಮಸೀದಿಯಲ್ಲ ದೇವಾಲಯ: ಜಿಲ್ಲಾಧಿಕಾರಿ ಎಸ್ ಅಶ್ವಥಿ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಹಿಂದೂ ಕಾರ್ಯಕರ್ತರು. ಮಸೀದಿ ಕುರಿತು ಒಂದಷ್ಟು ಅಂಶಗಳನ್ನ ಉಲ್ಲೇಖಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟದ ಜಾಮಿಯಾ ಮಸೀದಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಮೇಲೆ ನಿರ್ಮಾಣವಾಗಿದೆ ಆರೋಪಿಸಿರುವ ಅವರು. ಟಿಪ್ಪು ಸುಲ್ತಾನ್ (Tipu Sultan) ಆಡಳಿತ ಅವಧಿಯಲ್ಲಿ ದೇವಾಲಯ ಕೆಡವಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾರೆ. ದೇವಾಲಯದ ಕುರುಹುಗಳು ಅಲ್ಲಿ ಈಗಲೂ ಇದೆ. ಕೊಳ, ದೇವರ ಕೆತ್ತನಗಳು ಕಣ್ಣಿಗೆ ಕಾಣಿಸುತ್ತದೆ. ಹೀಗಾಗಿ ಮಸೀದಿಯನ್ನು ತೆರವುಗೊಳಿಸಿ ಮತ್ತೆ ಮೂಡಲಬಾಗಿಲು ಆಂಜನೇಯ ಸ್ವಾಮಿ (Hanuman Temple) ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು ಒತ್ತಾಯಿಸಿದ್ದಾರೆ.
Mandya: ಪೊಲೀಸರಿಗೆ ಮಾಹಿತಿ ನೀಡದೆ ವಿದೇಶಕ್ಕೆ ಹಾರಿದ ಹಿಜಾಬ್ ಹುಡುಗಿ ಮುಸ್ಕಾನ್!
ಇತಿಹಾಸದಲ್ಲೂ ದೇವಾಲಯವಿದ್ದ ಬಗ್ಗೆ ಉಲ್ಲೇಖ?: 1784ರಲ್ಲಿ ಟಿಪ್ಪು ಸುಲ್ತಾನ್ ಅವಧಿಯಲ್ಲಿ ಜಾಮಿಯಾ ಮಸೀದಿ ನಿರ್ಮಾಣವಾಗಿದೆ. ಆದರೆ ಅದಕ್ಕೂ ಮೊದಲು ಆ ಜಾಗದಲ್ಲಿ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನವಿತ್ತು ಎಂಬ ವಾದವಿದೆ. ಜಾಮಿಯಾ ಮಸೀದಿಯ ಒಳ ಭಾಗದಲ್ಲಿ ಹಿಂದೂ ದೇವಸ್ಥಾನಗಳಲ್ಲಿರುವ ರೀತಿ ಕಲ್ಯಾಣಿ, ಬಾವಿಗಳು ಇವೆ. ಮಸೀದಿಯ ಮಿನಾರ್‌ಗಳ ಮೇಲೆ ಕಳಸಗಳನ್ನ ಇಡಲಾಗಿದೆ. ಸುತ್ತಲೂ ಇರುವ ಕಂಬಗಳ ಮೇಲೆ ಹಿಂದೂ ದೇವರುಗಳ ಕೆತ್ತನೆಗಳಿವೆ.
Mandya: ಊರ ಜಾತ್ರೆಯಲ್ಲಿ ಬಲಿ ತಪ್ಪಿಸಲು ಮರವೇರಿ ಕುಳಿತ ಹರಕೆ ಹುಂಜ!
ಮುಂದುವರೆದಂತೆ ಲೂಯಿಸ್ ರೈಸ್ ಬರೆದಿರುವ ಮೈಸೂರು ಗೆಜೆಟ್‍ನಲ್ಲಿ, ಟಿಪ್ಪು ಸುಲ್ತಾನ್ ಪರ್ಷಿಯಾದ ಖಲೀಫನಿಗೆ ಬರೆದಿರುವ ಪತ್ರಗಳಲ್ಲೂ ಹಿಂದೂ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಬರೆಯಲಾಗಿದೆಯಂತೆ. ಹಾಗಾಗಿ ಮಸೀದಿ ವಾಪಾಸ್ ಪಡೆಯಬೇಕು ಅಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ಆರಾಧನೆಗೆ ಅವಕಾಶ ನೀಡಬೇಕು ಎಂದು ನರೇಂದ್ರ ಮೋದಿ ವಿಚಾರ ಮಂಚ್‍ನ ಪದಾಧಿಕಾರಿಗಳು ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.