ಕಾವೇರಿ ಪ್ರತಿಭಟನೆ ವೇಳೆ ನಟ ದರ್ಶನ ವಿವಾದಾತ್ಮಕ ಹೇಳಿಕೆ: ಕ್ಷಮೆ ಕೇಳುವಂತೆ ಹೋರಾಟಗಾರರು ಆಗ್ರಹ
ಕಾವೇರಿ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆಂದು ನಟ ದರ್ಶನ ವಿರುದ್ಧ ರೈತಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
\ಮಂಡ್ಯ (ಸೆ.25) ಕಾವೇರಿ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆಂದು ನಟ ದರ್ಶನ ವಿರುದ್ಧ ರೈತಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆಯುತ್ತಿರುವ ಹೋರಾಟ. ಹೋರಾಟಕ್ಕೆ ಬೆಂಬಲ ನೀಡಲು ಆಗಮಿಸಿದ್ದ ನಟ ದರ್ಶನ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಭಾಷಣ ಮಾಡುವ ವೇಳೆ ಎಡವಟ್ಟು. ನಟರು ಈಗ ನೆನಪಾದ್ರಾ ಎಂಬಂಥ ಮಾತಾಡಿರುವ ದರ್ಶನ.
ಕಾವೇರಿ ವಿಷಯದಲ್ಲಿ ದೊಡ್ಡ ಕಾನೂನು ಹೋರಾಟ ಅಗತ್ಯ: ದರ್ಶನ್ ಪುಟ್ಟಣ್ಣಯ್ಯ
ಈ ಹೇಳಿಕೆಗೆ ರೈತರು ಆಕ್ರೋಶ. ನಾವು ತಿಂಗಳಿಂದ ಹೋರಾಟ ಮಾಡ್ತಿದ್ದೇವೆ. ನಟರಿಂದ ಹೋರಾಟಕ್ಕೆ ಬಲ ಸಿಗುತ್ತೆ ಅಂತಾ ಕರೆಸಿದ್ರೆ ಬೇಜವಾಬ್ದಾರಿತನದ ಹೇಳಿಕೆ ನೀಡೋದಾ? ಹೋರಾಟಕ್ಕೆ ನಿಮ್ಮ ಬೆಂಬಲ ಬೇಕು ಅಂತಲೇ ನಾವು ಆಹ್ವಾನ ನೀಡಿದ್ದೆವು. ಆದರೆ ಕಾವೇರಿ ಕೊಳ್ಳದ ಜಿಲ್ಲೆಯವರಾಗಿ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಬಾರದು. ಜವಾಬ್ದಾರಿಯುತ ನಟನಾಗಿ ಹೋರಾಟಕ್ಕೆ ದನಿಗೂಡಿಸಬೇಕಿತ್ತು.ಆದರೆ ರೈತರನ್ನೇ ಅವಮಾನ ಮಾಡ್ತಿರಾ ಎಂದು ಆಕ್ರೋಶ. ರೈತ ಸಂಘದ ವಿರುದ್ಧ ಮಾತಾಡಿರುವುದಕ್ಕೆ ಕ್ಷಮೆ ಕೇಳುವಂತೆ ಒತ್ತಾಯಿಸಿರುವ ರೈತರು.
ದರ್ಶನ ಮಾತಾಡಿದ್ದೇನು?
ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿ ಪ್ರತಿಭಟನೆಗೆ ಸಾಥ್ ನೀಡಿದ್ದ ದರ್ಶನ. ಪ್ರತಿಭಟನೆ ವೇಳೆ ಮಾತಾಡುವಾಗ ಸಣ್ಣದೊಂದು ಎಡವಟ್ಟು ಮಾಡಿಕೊಂಡ ದರ್ಶನ. ಕಾವೇರಿ ಹೋರಾಟದ ಬಗ್ಗೆ ಮಾತಾಡಿದ್ರೆ ಮುಗಿಯುತ್ತಿತ್ತು. ಆದರೆ ದರ್ಶನ ಕನ್ನಡ ಸಿನಿಮಾ ನಟರ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಪ್ರಸ್ತಾಪಿಸಿ ಆಡಿದ ಮಾತಿನಿಂದ ಹೊತ್ತಿಕೊಂಡ ವಿವಾದ. ಅಷ್ಟಕ್ಕೂ ದರ್ಶನ ಮಾತಾಡಿದ್ದಾದರೂ ಏನು?
ದರ್ಶನ ನೇರಾನೇರ ಮಾತಾಡಿ ತಗಾಲಕೊಂಡಿದ್ದಾರೆ ನೋಡಿ. ಮೊದ್ಲು ಕಾಂಟ್ರವರ್ಸಿ ಬಗ್ಗೆ ಮಾತಾಡೋಣ ಚಿನ್ನ ಎಂದು ಮಾತು ಪ್ರಾರಂಭಿಸಿದ ದರ್ಶನ. ಇವತ್ತು ಕನ್ನಡ ಸಿನಿಮಾ ನಟರು ಹೋರಾಟಕ್ಕೆ ಬರುತ್ತಿಲ್ಲ ಎಂದು ಹೋರಾಟಗಾರರು ಹೇಳ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗ್ತಿವೆ.ಆದರೆ ಮೊನ್ನೆ ತಮಿಳು ಸಿನಿಮಾಗಳನ್ನು ನೋಡಿ ಅವರಿಗೆ ಲಾಭ ಮಾಡಿಕೊಟ್ಟಿದ್ದಾರೆ. ಕನ್ನಡಿಗರು ಕನ್ನಡ ಸಿನಿಮಾಗಳನ್ನು ನೋಡೋದಿಲ್ಲ. ಕನ್ನಡ ಸಿನಿಮಾಗಳನ್ನು ಗೆಲ್ಲಿಸೋದಿಲ್ಲ. ಆದರೆ ಅದಕ್ಕೆ ಬರಲಿಲ್ಲ ಇದಕ್ಕೆ ಬರಲಿಲ್ಲ ಅಂತಾ ನಟರನ್ನು ಟ್ರೋಲ್ ಮಾಡ್ತಾರೆ. ಮೊನ್ನೆ ಬಿಡುಗಡೆಯಾದ ತಮಿಳು ಸಿನಿಮಾವನ್ನು ಒಬ್ಬ 6 ಕೋಟಿಗೆ ಖರೀದಿಸಿ ಕರ್ನಾಟಕದಲ್ಲಿ 36 ಕೋಟಿ ಲಾಭ ಮಾಡಿದ್ರು. ಹಾಗಾದರೆ ಆ ಸಿನಿಮಾ ಇಲ್ಲಿ ತಮಿಳಿನವರು ನೋಡಿದ್ರಾ ಸ್ವಾಮಿ? ಕನ್ನಡದವರೇ ನೋಡಿರೋದು. ಕನ್ನಡ ಸಿನಿಮಾವನ್ನು ಕಡೆಗಣಿಸಿ ತಮಿಳುಸಿನಿಮಾಗಳನ್ನು ಹೆಚ್ಚು ನೋಡಿ ಅವರ ಸಿನಿಮಾಗಳನ್ನು ಗೆಲ್ಲಿಸ್ತಿರಲ್ಲ ಯಾಕೆ ಸ್ವಾಮಿ ಎಂದು ಪ್ರಶ್ನೆ ಮಾಡಿರುವ ದರ್ಶನ.
ದರ್ಶನ್, ಸುದೀಪ್, ಶಿವಣ್ಣ, ಯಶ್ ಮಾತ್ರ ಕಾಣೋದಾ? ಮೊದಲು ತಮಿಳು ಸಿನಿಮಾ ನೋಡೋದು ಬಿಡಿ: ಕನ್ನಡಿಗರಿಗೆ ದರ್ಶನ್ ಛಾಟಿ!
ಕನ್ನಡಿಗರಾಗಿ ಕನ್ನಡ ಸಿನಿಮಾ ನೋಡಿದ್ರೆ ಇಂಥ ಕಷ್ಟಕಾಲದಲ್ಲಿ ಕನ್ನಡದ ನಟರು ಜೊತೆಗೆ ನಿಲ್ತಾರೆ. ತಮಿಳು ಸಿನಿಮಾಕ್ಕೆ 36ಕೋಟಿ ಲಾಭ ಮಾಡಿಕೊಟ್ರಿ ಆದರೆ ಈಗ ಅವರು ಕಾವೇರಿ ಬಗ್ಗೆ ಮಾತಾಡ್ತಾರಾ? ಒಂದು ಟ್ವೀಟ್ ಮಾಡಿದ್ದಾರಾ? ಈಗ ಕಾವೇರಿಗೆ ಶಿವಣ್ಣ ಬರಲಿಲ್ಲ, ದರ್ಶನ ಬರಲಿಲ್ಲ, ಯಶ್ ಬರಲಿಲ್ಲ ಅಂತಾ ಟ್ರೋಲ್ ಮಾಡ್ತಾರೆ, ಕಿಡಿ ಕಾರುತ್ತಿದ್ದಾರೆ. ಆದರೆ ನಾವು ಈಗ ಮಾತ್ರ ಕಾಣೋದಾ? ಎಂದು ಗರಂ ಆಗಿ ಪ್ರಶ್ನಿಸಿರುವ ದರ್ಶನ. ಕನ್ನಡಿಗರು ಕನ್ನಡ ಸಿನಿಮಾಗಳನ್ನು ನೋಡಬೇಕು, ಕನ್ನಡ ಸಿನಿಮಾಗಳನ್ನು ಗೆಲ್ಲಿಸಬೇಕು ಇಂಥ ಸಮಯದಲ್ಲಿ ಎಲ್ಲರೂ ಬರ್ತಾರೆ ಸ್ವಾಮಿ ಎಂಬರ್ಥದಲ್ಲಿ ಹೇಳಿದ್ದ ನಟ ದರ್ಶನ. ಈಗ ಇದೇ ಮಾತು ವಿವಾದಕ್ಕೆ ಕಾರಣವಾಗಿ ದರ್ಶನ ವಿರುದ್ಧ ಘೋಷಣೆ ಕೂಗಿದ ಘಟನೆ ನಡೆದಿದೆ.