ಪರಿಶಿಷ್ಟ ಜಾತಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ನಟ ಉಪೇಂದ್ರ ವಿರುದ್ಧ ದೂರು ದಾಖಲು

ಖ್ಯಾತ ಚಲನಚಿತ್ರ ನಟರು ಆದ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಉಪೇಂದ್ರ ವಿರುದ್ಧ ಸುಮೆಟೊ ಪ್ರಕರಣ ದಾಖಲು ಮಾಡುವಂತೆ ಜಿಲ್ಲಾ ದಲಿತ ಪ್ರಗತಿಪರ ಒಕ್ಕೂಟದ ಪದಾಧಿಕಾರಿಗಳು ರಾಮನಗರ ಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

controversial statement; File a complaint against actor Upendra at ramanagar rav

ನಟ ಉಪೇಂದ್ರ ವಿರುದ್ಧ ದೂರು ದಾಖಲು

ರಾಮನಗರ (ಆ.14): ಖ್ಯಾತ ಚಲನಚಿತ್ರ ನಟರು ಆದ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಉಪೇಂದ್ರ ವಿರುದ್ಧ ಸುಮೆಟೊ ಪ್ರಕರಣ ದಾಖಲು ಮಾಡುವಂತೆ ಜಿಲ್ಲಾ ದಲಿತ ಪ್ರಗತಿಪರ ಒಕ್ಕೂಟದ ಪದಾಧಿಕಾರಿಗಳು ರಾಮನಗರ ಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸ್‌ ಠಾಣೆಯಲ್ಲಿ ವೃತ್ತ ಆರಕ್ಷಕ ನಿರೀಕ್ಷಕ ನರಸಿಂಹಮೂರ್ತಿ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ ಪದಾಧಿಕಾರಿಗಳು, ಸಾಮಾಜಿಕ ಜಾಲತಾಣಗಳಲ್ಲಿ ನಟ ಉಪೇಂದ್ರ ತಮ್ಮ ಮೂಲ ಸಂಪ್ರದಾಯಿಕ, ಮನುವಾದವನ್ನು ಅನುಸರಿಸುವ ಮೂಲಕ ತಮ್ಮ ಮನಸ್ಸಿನಲ್ಲಿ ಏನಿದಿಯೋ ಅದನ್ನು ಹೊರ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ: ನಟ ಉಪೇಂದ್ರ ಹೀಗಂದಿದ್ದೇಕೆ?

ದೂರಿನಲ್ಲಿ ಏನಿದೆ?

ನಮ್ಮ ದೇಶಕ್ಕೆ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ ಅವರು ಸಂವಿಧಾನ ಕೊಟ್ಟು 75 ವರ್ಷಗಳು ಸರಿದರೂ ಈಗಲೂ ಕೂಡ ಊರು ಅಂದ ಮೇಲೆ ಹೊಲಗೇರಿ ಇದ್ದೇ ಇರುತ್ತದೆ. ಅನ್ನುವ ಮೂಲಕ ಕರ್ನಾಟಕದಲ್ಲಿಯೇ ಅಲ್ಲ, ಇಡೀ ಭಾರತ ದೇಶದಲ್ಲಿರುವ ದಲಿತರಿಗೆ ಅವಮಾನ ಮಾಡಿದಂತೆ ಹಾಗೂ ದೇಶದ ಸಂವಿಧಾನಕ್ಕೆ ತೋರಿದ ಅಪಮಾನ. ಆದ ಕಾರಣ ತಾವುಗಳು ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಉಪೇಂದ್ರ ಅವರ ಮೇಲೆ ಎಸ್ಸಿ ಎಸ್ಟಿಕಾಯ್ದೆ ಅನ್ವಯ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು.

 

'ಊರು ಎಂದ್ಮೇಲೆ ಹೊಲೆಗೇರಿ ಇರುತ್ತೆ' ಹೇಳಿಕೆಗೆ ಆಕ್ರೋಶ: ಕ್ಷಮೆ ಕೇಳಿದ ಬುದ್ಧಿವಂತ ಉಪೇಂದ್ರ

ಮುಂದಿನ ದಿನಗಳಲ್ಲಿ ಈ ರೀತಿ ಯಾರೂ ಒಂದು ಸಮುದಾಯದ ವಿಚಾರವನ್ನು ಲಘುವಾಗಿ ಮಾತನಾಡಿ ಅಪಮಾನಿಸಬಾರದು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಈ ರೀತಿ ನಡೆದರೆ ಅದು ಭಾರತಾ, ಸಾರ್ವಭೌಮತಕ್ಕೆ ಧಕ್ಕೆ ತಂದಂತೆ. ಈ ಕೂಡಲೇ ಉಪೇಂದ್ರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸಬೇಕೆಂದು ಪದಾಧಿಕಾರಿಗಳು ದೂರಿನಲ್ಲಿ ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios