ನಿನ್ನೆ 877 ಕೇಸ್, 1084 ಗುಣಮುಖ | ಸಕ್ರಿಯ ಸೋಂಕಿತರ ಸಂಖ್ಯೆ 11 ಸಾವಿರಕ್ಕೆ ಇಳಿಕೆ | ಕೇವಲ 6 ಮಂದಿ ಸೋಂಕಿಗೆ ಬಲಿ
ಬೆಂಗಳೂರು(ಜ.02): ರಾಜ್ಯದಲ್ಲಿ ಸತತವಾಗಿ ಒಂದು ವಾರದಿಂದ ಕೊರೋನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿರುವುದು ಮುಂದುವರೆದಿದ್ದು, ಶುಕ್ರವಾರ 877 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದೆ. 1,084 ಮಂದಿ ಗುಣಮುಖರಾಗಿದ್ದಾರೆ. 6 ಮಂದಿ ಮೃತರಾಗಿದ್ದಾರೆ.
ಪ್ರಸ್ತುತ 11,058 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 189 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 9.20 ಲಕ್ಷ ಜನರಿಗೆ ಕೊರೋನಾ ಸೋಂಕು ಬಂದಿದ್ದು 8.97 ಲಕ್ಷ ಜನರು ಗುಣವಾಗಿದ್ದಾರೆ. ಒಟ್ಟು 12,096 ಮಂದಿ ಮರಣವನ್ನಪ್ಪಿದ್ದಾರೆ. ಒಂದೇ ದಿನ 1.17 ಲಕ್ಷ ಕೊರೋನಾ ಪರೀಕ್ಷೆಗಳು ನಡೆದಿದೆ.
ಕೊರೋನಾ ಭಯ: ಬೇಗ ಬೇಗ ಮದ್ವೆಯಾಗ್ತಿದ್ದಾರೆ ಜನ, ಬಾಲ್ಯವಿವಾಹ ಶೇ.15 ಹೆಚ್ಚಳ!
ಈವರೆಗೆ ಒಟ್ಟು 1.41 ಕೋಟಿ ಪರೀಕ್ಷೆಗಳು ನಡೆದಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ನಾಲ್ಕು, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿನಿಂದ ಮರಣವನ್ನಪ್ಪಿದ್ದಾರೆ. ರಾಮನಗರ ಮತ್ತು ಕೊಪ್ಪಳದಲ್ಲಿ ಶುಕ್ರವಾರ ಹೊಸ ಪ್ರಕರಣಗಳು ವರದಿಯಾಗಿಲ್ಲ.
ಬೆಂಗಳೂರು ನಗರದಲ್ಲಿ 464 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ಬಾಗಲಕೋಟೆ 16, ಬಳ್ಳಾರಿ 4, ಬೆಳಗಾವಿ 14, ಬೆಂಗಳೂರು ಗ್ರಾಮಾಂತರ 28, ಬೀದರ್ 6, ಚಾಮರಾಜನಗರ 12, ಚಿಕ್ಕಬಳ್ಳಾಪುರ 29, ಚಿಕ್ಕಮಗಳೂರು 8, ಚಿತ್ರದುರ್ಗ 39, ದಕ್ಷಿಣ ಕನ್ನಡ 27, ದಾವಣಗೆರೆ 10, ಧಾರವಾಡ 5, ಗದಗ 12, ಹಾಸನ 20, ಹಾವೇರಿ 2, ಕಲಬುರಗಿ 11, ಕೊಡಗು 7, ಕೋಲಾರ 14, ಮಂಡ್ಯ 13, ಮೈಸೂರು 26, ರಾಯಚೂರು 3, ಶಿವಮೊಗ್ಗ 20, ತುಮಕೂರು 32, ಉಡುಪಿ 14, ಉತ್ತರ ಕನ್ನಡ 16, ವಿಜಯಪುರ 19 ಮತ್ತು ಯಾದಗಿರಿ ಜಿಲ್ಲೆಯಲ್ಲಿ ಆರು ಮಂದಿಯಲ್ಲಿ ಕೊರೋನಾ ಸೋಂಕು ವರದಿಯಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 2, 2021, 8:23 AM IST