Asianet Suvarna News Asianet Suvarna News

ಕೆಂಪೇಗೌಡರ ಹೆಸರಲ್ಲಿ ಸರ್ಕಾರಿ ಶಾಲೆ, ಹಾಸ್ಟೆಲ್‌ ನಿರ್ಮಾಣ: ಶಾಸಕ ಸತೀಶ್‌ ರೆಡ್ಡಿ

ಕೆಂಪೇಗೌಡರ ಹೆಸರಿನಲ್ಲಿ ಸರ್ಕಾರಿ ಶಾಲೆ ಮತ್ತು ಹಾಸ್ಟೆಲ್‌ ನಿರ್ಮಿಸಲಾಗುತ್ತದೆ ಎಂದು ಶಾಸಕ ಎಂ.ಸತೀಶ್‌ ರೆಡ್ಡಿ ಭರವಸೆ ನೀಡಿದ್ದಾರೆ.

Construction of school and hospital in the name of Nadaprabhu Kempegowda says satishreddymla rav
Author
First Published Jul 3, 2023, 1:48 PM IST

ಬೊಮ್ಮನಹಳ್ಳಿ (ಜು.3) :  ಕೆಂಪೇಗೌಡರ ಹೆಸರಿನಲ್ಲಿ ಸರ್ಕಾರಿ ಶಾಲೆ ಮತ್ತು ಹಾಸ್ಟೆಲ್‌ ನಿರ್ಮಿಸಲಾಗುತ್ತದೆ ಎಂದು ಶಾಸಕ ಎಂ.ಸತೀಶ್‌ ರೆಡ್ಡಿ ಭರವಸೆ ನೀಡಿದ್ದಾರೆ.

ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಎಚ್‌.ಎಸ್‌.ಆರ್‌. ಲೇಔಟ್‌ನಲ್ಲಿ ಇರುವ ವಾಜಪೇಯಿ ಕ್ರೀಡಾಂಗಣ ಮುಂಭಾಗದಲ್ಲಿ ಇರುವ ಕೆಂಪೇಗೌಡರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಶಾಸಕರು ಚಾಲನೆ ನೀಡಿದರು. ಇದೇ ವೇಳೆ ಎಚ್‌.ಎಸ್‌.ಆರ್‌. ವಾಣಿಜ್ಯ ಸಂಕೀರ್ಣದಲ್ಲಿ ಏರ್ಪಡಿಸಲಾಗಿದ್ದ ಕೆಂಪೇಗೌಡ ದಿನಾಚರಣೆಯಲ್ಲಿ ಜ್ಯೋತಿ ಬೆಳಗಿಸಿ ಕಾರ‍್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕೊಡುಗೆಗಳನ್ನು ಸ್ಮರಿಸುತ್ತಾ, 500 ವರ್ಷಗಳ ಹಿಂದೆಯೇ ಬೆಂಗಳೂರಿಗೆ ನಾಲ್ಕು ಮುಖ್ಯ ದ್ವಾರಗಳನ್ನು ನಿರ್ಮಿಸಿ, ಮುಂದಾಲೋಚನೆಯಿಂದಾಗಿ ನೂರಾರು ಕೆರೆಗಳನ್ನು ಅಭಿವೃದ್ಧಿಪಡಿಸಿದ್ದರು. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹೋಗುವಂತೆ ಮಾಡುವ ಮೂಲಕ ಜನತೆಗೆ ಕುಡಿಯುವ ನೀರಿನ ಅನುಕೂಲ ಕಲ್ಪಸಿಕೊಟ್ಟಿದ್ದರು ಎಂದು ಸ್ಮರಿಸಿದರು.

ಬಿಜೆಪಿ ಅಭ್ಯರ್ಥಿ ವಿರುದ್ಧ ಪತ್ನಿ ಆಸ್ತಿ ವಿವರ ಮುಚ್ಚಿಟ್ಟ ಆರೋಪ, ಕೋರ್ಟ್ ಮೊರೆಗೆ ಉಮಾಪತಿ ಶ್ರೀನಿವಾಸ್ ಗೌಡ ನಿರ್ಧಾರ

ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳಾಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರೊಡನೆ ಕಾಲ್ನಡಿಗೆ ಜಾಥಾ ಮತ್ತು ಸಾಂಸ್ಕೃತಿಕ ವೀರಗಾಸೆ ಆಯೋಜಿಸಲಾಗಿತ್ತು.

ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಜಂಟಿ ಆಯುಕ್ತ ಕೃಷ್ಣಮೂರ್ತಿ, ಬಿಬಿಎಂಪಿ ನಿಕಟಪೂರ್ವ ಸದಸ್ಯ ಗುರುಮೂರ್ತಿ ರೆಡ್ಡಿ, ಮಾಜಿ ನಗರಸಭಾ ಸದಸ್ಯರಾದ ಮುರಳಿ, ಬೆಂ.ದಕ್ಷಿಣ ಮಹಿಳಾ ಮೋರ್ಚಾ ಅಧ್ಯಕ್ಷ ಜಯಲಕ್ಷ್ಮಿ ಆನಂದ್‌, ಬಿಜೆಪಿ ಮುಖಂಡರಾದ ನಾಗೇಂದ್ರ, ಪಿ.ಸಿ.ಪ್ರೇಮ್‌ ಕುಮಾರ್‌, ಗುಂಡುತೋಪು ರವಿ, ಬಿಬಿಎಂಪಿ ಕಾರ‍್ಯಪಾಲಕ ಅಭಿಯಂತರ ಪಾಪಯ್ಯರೆಡ್ಡಿ ಇದ್ದರು.

 

Bengaluru: ಅಕ್ರಮವಾಗಿ ಬಂಧಿಸಿ ಕಿರುಕುಳ ನೀಡಿ ವ್ಯಕ್ತಿಯಿಂದ ಹಣ ವಸೂಲಿ, ಹೆಡ್ ಕಾನ್ಸ್ ಟೇಬಲ್ ಸಸ್ಪೆಂಡ್!

Follow Us:
Download App:
  • android
  • ios