ಬಿಜೆಪಿ ಅಭ್ಯರ್ಥಿ ವಿರುದ್ಧ ಪತ್ನಿ ಆಸ್ತಿ ವಿವರ ಮುಚ್ಚಿಟ್ಟ ಆರೋಪ, ಕೋರ್ಟ್ ಮೊರೆಗೆ ಉಮಾಪತಿ ಶ್ರೀನಿವಾಸ್ ಗೌಡ ನಿರ್ಧಾರ

ಆಸ್ತಿ ವಿವರ ಮರೆಮಾಚಿದ್ದಾರೆಂದು ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ವಿರುದ್ಧ  ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ  ಗಂಭೀರ ಆರೋಪ ಮಾಡಿದ್ದಾರೆ.

Umapathy Srinivasa Gowda allegations against BJP sathish reddy for hiding property details gow

ಬೆಂಗಳೂರು (ಏ.21): ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.  ಆಸ್ತಿ ವಿವರ ಮರೆಮಾಚಿದ್ದಾರೆಂದು ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ವಿರುದ್ಧ  ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ  ಗಂಭೀರ ಆರೋಪ ಮಾಡಿದ್ದಾರೆ. ಸತೀಶ್ ತಮ್ಮ ಪತ್ನಿ ಹೆಸರಿನಲ್ಲಿ  RAA ಡೆವಲಪರ್ಸ್ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡಿ ಮರೆ ಮಾಚಿದ್ದಾರೆಂದು ಎಂಬುದು ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಆರೋಪವಾಗಿದೆ.

ಸತೀಶ್ ರೆಡ್ಡಿ ತಮ್ಮ  ಪತ್ನಿ ಆಶಾ ಸತೀಶ್ ಹೆಸರಲ್ಲಿ ಹೂಡಿಕೆ ಮಾಡಿದ್ದು, ಈ ಬಗ್ಗೆ ಬಹಿರಂಗಪಡಿಸಿಲ್ಲ. ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ. RAA ಡೆವಲರ್ಸ್ ಸಂಸ್ಥೆ ಪಾಲುದಾರರಲ್ಲಿ ಆಶಾ ಸತೀಶ್ ಕೂಡ ಒಬ್ಬರಾಗಿದ್ದಾರೆ, ಆದರೂ ನಾಮಪತ್ರ  ಜೊತೆ ಸಲ್ಲಿಕೆಯಾದ ಅಪಿಡವಿಟ್ ನಲ್ಲಿ ಮರೆ ಮಾಚಿದ್ದಾರೆಂದು ಹೇಳಿದ್ದಾರೆ.

ರಾಜ್ಯಕ್ಕೆ ಬಂದ ಅಮಿತ್ ಶಾ, ಇಂದು ನಡೆಯಬೇಕಿದ್ದ ಬಿಜೆಪಿ ರೋಡ್ ಶೋ ಮುಂದೂಡಿಕೆ

ಹಾಗಾಗಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ನಾಮಪತ್ರ ತಿರಸ್ಕರಿಸಬೇಕೆಂದು ಉಮಾಪತಿ ಆಕ್ಷೇಪಣೆ ಪತ್ರ  ಸಲ್ಲಿಸಿದ್ದರು. ಈ ಆಕ್ಷೇಪಣೆ ನಡುವೆಯು ನಾಮಪತ್ರ ಅಂಗೀಕಾರವಾಗಿದೆ. ಚುನಾವಣಾ ಅಧಿಕಾರಿ ಸತೀಶ್ ಅವರ ನಾಮಪತ್ರ ಅಂಗೀಕಾರ ಮಾಡಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ  ನಿರ್ಧಾರ ಮಾಡಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿನ ಅಖಾಡವಾಗಿದೆ.

Karnataka Election 2023: ರೋಡ್ ಶೋ ರದ್ದು, ಬಿಜೆಪಿ ನಾಯಕರ ಜತೆ ಅಮಿತ್ ಶಾ ಸಭೆ

ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಮುಗಿದಿದೆ. ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.  ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios