Asianet Suvarna News Asianet Suvarna News

ಕಾಂಗ್ರೆಸ್ ಆಡಳಿತದಲ್ಲಿ ಸಂವಿಧಾನ ದಿನ ಆಚರಿಸಿದ್ದು ನೆನಪಿದ್ಯಾ? ಭಾಷಣದುದ್ದಕ್ಕೂ ವಾಗ್ದಾಳಿ ನಡೆಸಿದ ವಿಜಯೇಂದ್ರ!

ಕಾಂಗ್ರೆಸ್‌ನ ಧ್ಯೇಯ ಏನು ಅಂದರೆ ಜನರಿಗೆ ನ್ಯಾಯ ಕೊಡಬೇಕು ಎಂಬುದಲ್ಲ, ನೆಹರು ಕುಟುಂಬದ ಕಟ್ಟಕಡೆಯ ಸದಸ್ಯನಿಗೂ ಅಧಿಕಾರ ಕೊಡಬೇಕು ಎಂಬುದಾಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

constitution samarpana diwas 2023 BJP President BY Vijayendra speech at bengaluru rav
Author
First Published Nov 26, 2023, 2:00 PM IST

ಬೆಂಗಳೂರು (ನ.26): ಕಾಂಗ್ರೆಸ್‌ನ ಧ್ಯೇಯ ಏನು ಅಂದರೆ ಜನರಿಗೆ ನ್ಯಾಯ ಕೊಡಬೇಕು ಎಂಬುದಲ್ಲ, ನೆಹರು ಕುಟುಂಬದ ಕಟ್ಟಕಡೆಯ ಸದಸ್ಯನಿಗೂ ಅಧಿಕಾರ ಕೊಡಬೇಕು ಎಂಬುದಾಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ  ಅವರು, ಕಾಂಗ್ರೆಸ್ ನಾಯಕರ ಬಾಯಲ್ಲಿ ಮಾತೆತ್ತಿದ್ರೆ ಸಾಕು ಅಂಬೇಡ್ಕರ್ ಹೆಸರು ಪಠಣ ಮಾಡ್ತಾರೆ. ಆದರೆ ಅಂಬೇಡ್ಕರ್ ರವರಿಗೆ ಗೌರವಯುತವಾಗಿ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಲಿಲ್ಲ. ಇಂಥ ಕಾಂಗ್ರೆಸ್ ಪಕ್ಷಕ್ಕೆ ಇಂದು ಅಂಬೇಡ್ಕರ್ ಹೆಸರು ಹೇಳೋಕೆ ನಿಜವಾಗಿಯೂ ನೈತಿಕತೆ ಇದೆಯಾ? ರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡುವ ಯೋಗ್ಯತೆ ಕಾಂಗ್ರೆಸ್ಸಿಗೆ ಇರಲಿಲ್ವಾ? ಕಾಂಗ್ರೆಸ್ ನವರಿಂದ ನಾವು ಅಂಬೇಡ್ಕರ್ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಎಲ್ಲಾ ಸಮಾಜಗಳನ್ನು ಮತ ಬ್ಯಾಂಕ್ ಗೆ ಉಪಯೋಗ ಮಾಡಿಕೊಂಡರೇ ವಿನಃ ಆ ಸಮಾಜಗಳಿಗೆ ಯಾವತ್ತಿಗೂ ಕಾಂಗ್ರೆಸ್ ನ್ಯಾಯ ಕೊಟ್ಟಿಲ್ಲ ಎಂದು ಭಾಷಣದುದ್ದಕ್ಕೂ ವಾಗ್ದಾಳಿ ನಡೆಸಿದರು.

ಜೆಡಿಎಸ್‌ ಬಿಜೆಪಿ ಮೈತ್ರಿ ಪರಿಣಾಮ ಹೆಚ್ಚಾಗಿ ಬೀರಿದ್ದು ನನ್ನಮೇಲೆ: ಮಾಜಿ ಶಾಸಕ ಪ್ರೀತಮ್‌ಗೌಡ!

ಅಂಬೇಡ್ಕರ್ ಆಶಯ ಈಡೇರಿಸಿದ್ದ ಪ್ರಧಾನಿ ಮೋದಿ:

ಅಂಬೇಡ್ಕರ್ ಆಶಯದಂತೆ ಅನುಷ್ಠಾನ ಮಾಡುತ್ತಿರೋದು ಪ್ರಧಾನಿ ನರೇಂದ್ರ ಮೋದಿಯವರು. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನಮ್ಮ ಸಂವಿಧಾನ ಉಳಿಸುವಂತಹ ಮಹತ್ತರ ಜವಾಬ್ದಾರಿ ಇದೆ. ಇದನ್ನು ಅರ್ಥ ಮಾಡಿಕೊಂಡು ಕುಂತಲ್ಲಿ ನಿಂತಲ್ಲಿ ಚರ್ಚೆ ಮಾಡಿ. ಇದರ ಬಗ್ಗೆ ಕೇವಲ ಭಾಷಣ ಹೊಡೆಯದೇ, ಇದನ್ನು ಅಳವಡಿಸಿಕೊಂಡು ಅಂಬೇಡ್ಕರ್ ಹೊಂದಿದ್ದ ಗುರಿ ತಲುಪಬೇಕು ಎಂದರು.

ಮೋದಿಯವರಿಗೆ ಸಾಧ್ಯವಾಗಿದ್ದು, ಕಾಂಗ್ರೆಸ್‌ನವರಿಗೆ ಏಕೆ ಆಗಲಿಲ್ಲ?

ಕಾಂಗ್ರೆಸ್ ಇಷ್ಟು ವರ್ಷ ಅಧಿಕಾರದಲ್ಲಿ ಮಾಜಿ ಪ್ರಧಾನಿ ಸ್ಮಾರಕಕ್ಕೆ 30 ಎಕರೆ, ಇಂದಿರಾ ಗಾಂಧಿ ಸ್ಮಾರಕಕ್ಕೆ 20 ಎಕರೆ ಜಾಗ ಕೊಟ್ಟಿದ್ದಾರೆ ಅದು ತಪ್ಪಲ್ಲ. ಆದರೆ ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಸ್ಮಾರಕ ಕಾಂಗ್ರೆಸ್ ಯಾಕೆ ಮಾಡಲಿಲ್ಲ? 2016ರಲ್ಲಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿ, 2018ರಲ್ಲಿ ಉದ್ಘಾಟನೆ ಕೂಡ ಮಾಡಿದರು. ಅಷ್ಟೇ ಅಲ್ಲ, ಪ್ರಧಾನಿ ಮೋದಿಯವರು ಅಂಬೇಡ್ಕರ್ ಹುಟ್ಟಿದ ಮನೆ, ಓದಿದ ಮನೆ ಸಂರಕ್ಷಣೆ ಮಾಡುವ ಕೆಲಸ ಮಾಡಿದ್ರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಾವು ಎಂದಾದರೂ  ಸಂವಿಧಾನ ದಿನಾಚರಣೆ ಮಾಡಿದ್ದು ನೆನಪಿದೆಯಾ? ಇಲ್ಲ, ಅದು ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕವೇ ಸಾಧ್ಯವಾಯಿತು. ಮೋದಿಯವರಿಗೆ ಸಾಧ್ಯವಾಗಿದ್ದು ಕಾಂಗ್ರೆಸ್‌ನವರಿಗೆ ಏಕೆ ಆಗಲಿಲ್ಲ? ಸ್ಮಾರಕ ಬಿಡಿ ಅಂಬೇಡ್ಕರ್ ಶವ ಸಂಸ್ಕಾರವನ್ನೂ ಗೌರವಯುತವಾಗಿ ನಡೆಸಿಕೊಡಲಿಲ್ಲ. ಈಗ ಅಧಿಕಾರದ ಉದ್ದೇಶಕ್ಕಾಗಿ ಅಂಬೇಡ್ಕರ್, ಸಂವಿಧಾನ ಎಂದು ಜಪ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರಲ್ಲಿ ವಂಚನೆ: ಸುಳ್ಳೇ ಈತನ ಬಂಡವಾಳ..!

ಕಾಂಗ್ರೆಸನವರದ್ದು ವೋಟ್ ಬ್ಯಾಂಕ್ ಪಾಲಿಟಿಕ್ಸ್:

ಎಲ್ಲ ಸಮುದಾಯವನ್ನ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಕೆಲಸ ಮಾಡಿದ್ರೆ ವಿನಃ ಅವರಿಗೆ ನ್ಯಾಯ ಕೊಡಿಸುವ ಕೆಲಸ ಕಾಂಗ್ರೆಸ್ ಎಂದೂ ಮಾಡಿಲ್ಲ. ಬಿಜೆಪಿ ಬಂದ್ರೆ ಸಂವಿಧಾನ ಬದಲಿಸಿಬಿಡ್ತೀವಿ ಅಂತಾ ಆರೋಪ ಮಾಡಿದ್ರು‌. ಆದ್ರೆ ಭಾರತದ ಪ್ರತಿಯೊಬ್ಬ ಪ್ರಜೆ ಕೂಡ ಸಂವಿಧಾನ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಕೇವಲ ಸಂವಿಧಾನ ದಿನ ಆಚರಿಸಿದ್ರೆ ಸಾಲದು, ಅದನ್ನ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ಅವರ ಆಶಯದಂತೆ ಪ್ರತಿಯೊಬ್ಬ ವ್ಯಕ್ತಿಗೂ ಸರ್ಕಾರದ ಯೋಜನೆ ಮುಟ್ಟುವಂತೆ ಕೆಲಸ ಮಾಡಬೇಕು ಎಂದರು.

Follow Us:
Download App:
  • android
  • ios