Asianet Suvarna News Asianet Suvarna News

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರಲ್ಲಿ ವಂಚನೆ: ಸುಳ್ಳೇ ಈತನ ಬಂಡವಾಳ..!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪರಿಚಯ ಇದೆ ಅಂತ ಹೇಳಿ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಬಿಜೆಪಿ ಹೈಕಮಾಂಡ್‌ನವರೂ ಕೂಡ ಪರಿಚಯ ಇದ್ದಾರೆ ಎಂದು ಹೇಳಿ ವಂಚನೆ ಮಾಡಿದ್ದಾನೆ. ಬಿಜೆಪಿ ಹೈಕಮಾಂಡ್‌ನವರನ್ನ ಪರಿಚಯ ಮಾಡಿಸುತ್ತೇನೆ, ನಂತ್ರ ನಿಮಗೆ ರಾಜಕೀಯದಲ್ಲಿ ಕೆಲಸ ಮಾಡಿಕೊಡ್ತೇನೆ ಅಂತ  ಹೇಳಿದ್ದ ಆರೋಪಿ. 

Fraud in the Name of Karnataka BJP State President BY Vijayendra in Bengaluru grg
Author
First Published Nov 26, 2023, 10:18 AM IST

ಬೆಂಗಳೂರು(ನ.26):  ದೊಡ್ಡ ದೊಡ್ಡವರ ಹೆಸರು ಹೇಳಿಕೊಂಡು ಸಾಲು ಸಾಲು ವಂಚನೆ ಮಾಡುತ್ತಿದ್ದವನನ್ನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಯುಸೂಫ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.  ಆರೋಪಿ ಯುಸೂಫ್ ಮೊದಲಿಗೆ ಉದ್ಯಮಿಗಳನ್ನು ಪರಿಚಯ ಮಾಡಿಕೊಳ್ತಿದ್ದ, ನಂತ್ರ ಆ ಉದ್ಯಮಿಗಳಿಗೆ ಏನಾದ್ರೂ ಸಮಸ್ಯೆ ಇದೆಯಾ ಅಂತ ನೋಡ್ತಾ ಇದ್ದ. ಬಳಿಕ ಅವರಿಗೆ ಸಹಾಯ ಮಾಡೋ ನೆಪದಲ್ಲಿ ಆರೋಪಿ ಹಣ ಪಡೆಯುತ್ತಿದ್ದನಂತೆ. 

ಟ್ರಾವಲ್ ಕಂಪನಿ ಮಾಲೀಕರಿಗೆ ಜಿಎಸ್‌ಟಿ ಕಮಿಷನರ್ ಹೆಸರಲ್ಲಿ ವಂಚನೆ ಮಾಡಿದ್ದಾನೆ. ಟ್ರಾವಲ್ ಕಂಪನಿ ಮಾಲೀಕರು ಜಿಎಸ್‌ಟಿ ಕಟ್ಟಬೇಕಿತ್ತು, ಕೋಟ್ಯಂತರ ರೂ. ಜಿಎಸ್‌ಟಿ ಬಗ್ಗೆ ಮಾತಾನಾಡಿದ್ದರು. ಈ ವೇಳೆ ಜಿಎಸ್‌ಟಿ ಕಮಿಷನರ್ ತನಗೆ ಪರಿಚಯ ಎಂದು ಹೇಳಿಕೊಂಡು ಜಿಎಸ್‌ಟಿ ಕಮಿಷನರ್ ಕಚೇರಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದನಂತೆ. ಸಾರ್ ಇವ್ರು ನಮ್ಮ ಸ್ನೇಹಿತರು ಎಂದು ಪರಿಚಯ ಮಾಡಿಸಿದ್ದನು. ಬಳಿಕ  ಹೊರಬಂದ ಮೇಲೆ ನಾನು ಮಾತನಾಡಿದ್ದೇನೆ ನಿಮ್ಮ ಜಿಎಸ್‌ಟಿ ಬಿಲ್ 50% ಪರ್ಸೆಂಟ್ ಕಡಿಮೆ ಮಾಡ್ತಿವಿ ಎಂದು ಹೇಳ್ತಿದ್ದನಂತೆ. ಬಳಿಕ ಅಡ್ವಾನ್ಸ್ ಎಂದು 15-20 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ್ದನು.  

ಓದಿದ್ದು SSLC..ಗಳಿಸಿದ್ದು ಕೋಟಿ ಕೋಟಿ..! ಮೋಸಗಾರ ಸುಕೇಶ್ ತಗಲಾಕಿಕೊಂಡಿದ್ದು ಹೇಗೆ..?

ಬ್ಯಾಂಕ್ ಲೋನ್ ಪಡೆಯಲು ಪ್ರಯತ್ನ ಮಾಡ್ತಿದ್ದವರಿಗೆ ಬ್ಯಾಂಕ್ ಮ್ಯಾನೇಜರ್ ಪರಿಚಯ ಎಂದು ನಂಬಿಸಿದ್ದನು. ಬ್ಯಾಂಕ್‌ಗೆ ಕರೆದುಕೊಂಡು ಹೋಗಿ ಮ್ಯಾನೇಜರ್ ಬಳಿ ಮಾತಾಡಿಸಿ ಲೋನ್ ಮಾಡಿಸಿಕೊಡ್ತಿನಿ ಎಂದು ಹೇಳಿ ಹಣ ಪಡೆದುಕೊಂಡು ವಂಚಿಸುತ್ತಿದ್ದನು. 

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪರಿಚಯ ಇದೆ ಅಂತ ಹೇಳಿ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಬಿಜೆಪಿ ಹೈಕಮಾಂಡ್‌ನವರೂ ಕೂಡ ಪರಿಚಯ ಇದ್ದಾರೆ ಎಂದು ಹೇಳಿ ವಂಚನೆ ಮಾಡಿದ್ದಾನೆ. ಬಿಜೆಪಿ ಹೈಕಮಾಂಡ್‌ನವರನ್ನ ಪರಿಚಯ ಮಾಡಿಸುತ್ತೇನೆ, ನಂತ್ರ ನಿಮಗೆ ರಾಜಕೀಯದಲ್ಲಿ ಕೆಲಸ ಮಾಡಿಕೊಡ್ತೇನೆ ಅಂತ  ಹೇಳಿದ್ದನಂತೆ.  ಈ ಸಂಬಂಧ ಇದೀಗ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಅರೋಪಿ ಯುಸೂಫ್ ವಿರುದ್ಧ ಕೇಸ್ ದಾಖಲಾಗಿದೆ. ಸದ್ಯ ಪ್ರಕರಣವನ್ನು ಪೊಲೀಸರು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ. 

Latest Videos
Follow Us:
Download App:
  • android
  • ios