ರಾಜ್ಯದಲ್ಲಿ ಮೋದಿ ತಂತ್ರಗಾರಿಕೆ ನಡೆಯಲ್ಲ: ಸಚಿವ ಎನ್‌ಎಸ್ ಬೋಸರಾಜು

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಮೋದಿಯವರು ರಾಜ್ಯಕ್ಕೆ ಬರೋಬ್ಬರಿ 26 ಬಾರಿ ಪ್ರವಾಸ ಮಾಡಿದರು. ಸಾಕಷ್ಟು ಸಭೆ, ಮೆರವಣಿಗೆಗಳನ್ನು ಮಾಡಿದರು. ಆದರೆ ಬಿಜೆಪಿ ಸೋತಿತು. ಅಂದರೆ ಮೋದಿಯವರ ತಂತ್ರಗಾರಿಕೆಗೆ ರಾಜ್ಯದ ಜನತೆಗೆ ಬೆಲೆ ಕೊಡಲಿಲ್ಲ ಎಂದು ಸಣ್ಣ ನೀರಾವರಿ ಮತ್ತು ತಂತ್ರಜ್ನಾನ ಇಲಾಖೆ ಸಚಿವ ಬೋಸರಾಜು ಹೇಳಿದರು.

Congress will definitely win the Lok Sabha elections says ns boseraju at madikeri rav

ವರದಿ : ರವಿ.ಎಸ್. ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
 
ಕೊಡಗು (ಆ.28): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಮೋದಿಯವರು ರಾಜ್ಯಕ್ಕೆ ಬರೋಬ್ಬರಿ 26 ಬಾರಿ ಪ್ರವಾಸ ಮಾಡಿದರು. ಸಾಕಷ್ಟು ಸಭೆ, ಮೆರವಣಿಗೆಗಳನ್ನು ಮಾಡಿದರು. ಆದರೆ ಬಿಜೆಪಿ ಸೋತಿತು. ಅಂದರೆ ಮೋದಿಯವರ ತಂತ್ರಗಾರಿಕೆಗೆ ರಾಜ್ಯದ ಜನತೆಗೆ ಬೆಲೆ ಕೊಡಲಿಲ್ಲ ಎಂದು ಸಣ್ಣ ನೀರಾವರಿ ಮತ್ತು ತಂತ್ರಜ್ನಾನ ಇಲಾಖೆ ಸಚಿವ ಬೋಸರಾಜು ಹೇಳಿದರು.

 ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಳೆದ 25 ವರ್ಷಗಳಲ್ಲಿ ಯಾವುದೇ ಪಕ್ಷ ಇಷ್ಟೊಂದು ದೊಡ್ಡ ಬಹುಮತ ಪಡೆದಿರಲಿಲ್ಲ. ಅಷ್ಟೊಂದು ದೊಡ್ಡ ಬಹುಮತ ಪಡೆದು ಕಾಂಗ್ರೆಸ್ ಗೆಲುವು ಸಾಧಿಸಿದೆ. ಸಹಜವಾಗಿ ಆಯಾ ಜಿಲ್ಲೆಗಳಲ್ಲಿ, ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗಲೇಬೇಕಾಗುತ್ತದೆ. ಹೀಗಾಗಿಯೇ ಬಿಜೆಪಿ ಮತ್ತು ಜೆಡಿಎಸ್ ಶಾಸಕರು(BJP JDS MLAs join congress) ಮತ್ತು ಮುಖಂಡರು ಕಾಂಗ್ರೆಸ್ಗೆ ಬರುವುದಕ್ಕೆ ಸಿದ್ಧವಾಗಿದ್ದಾರೆ ಎಂದರು.

Karnataka Politics: ಆಪರೇಶನ್‌ ಹಸ್ತ ಟಾಸ್ಕ್ ಯಾರಿ​ಗೂ ಕೊಟ್ಟಿ​ಲ್ಲ: ಎನ್‌.ಎಸ್‌.ಬೋಸರಾಜ್

ರಾಜ್ಯದಲ್ಲಿ ನಮ್ಮ ನಾಯಕರು ರಾಜ್ಯದ ಜನತೆಗೆ ಮಾತು ಕೊಟ್ಟಂತೆ ನಡೆಯುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ಸುಭದ್ರವಾಗಿ ನಡೆಯುತ್ತಿದ್ದು, ಸಹಜವಾಗಿ ಬಿಜೆಪಿ, ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಗೆ ಹೋಗಬೇಕೆಂಬ ಮನಸ್ಸು ಮಾಡಿದ್ದಾರೆ. ಹಾಗೆಂದು ಇದನ್ನು ನಾವು ಯಾವುದೇ ಆಪರೇಷನ್ ಹಸ್ತ(Operation hasta) ಮಾಡುತ್ತಿಲ್ಲ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ ಎಂದು ಹೇಳಿದರು.

ರಾಜ್ಯದ ಇತಿಹಾಸದಲ್ಲಿಯೇ ಇದುವರೆಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದ  ಪರಿಸ್ಥಿತಿಯನ್ನು ಎಂದೂ ನೋಡಿರಲಿಲ್ಲ. ಅಂತಹ ಸ್ಥಿತಿ ಬಿಜೆಪಿ(BJP Karnatak)ಯಲ್ಲಿ ಇದೆ. ಹೀಗಾಗಿ ಬಿಜೆಪಿಯ ಸಾಕಷ್ಟು ಶಾಸಕರು, ಮಾಜಿ ಶಾಸಕರು ಮತ್ತು ಮುಖಂಡರು ಕಾಂಗ್ರೆಸ್ಗೆ ಬರಲಿದ್ದಾರೆ ಎಂದು ಸಚಿವ ಎನ್‌ಎಸ್ ಬೋಸರಾಜು(kodagu incharge minister ns bosaraju) ಹೇಳಿದರು. ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಆಘಾತ ಕಾದಿದೆಯಾ ಎನ್ನುವ ಅನುಮಾನ ಎದುರಾಗಿದೆ. ಬಿಜೆಪಿಯ ಶಾಸಕರು, ಮಾಜಿ ಶಾಸಕರು ಸೇರಿದಂತೆ ನಂಬಲಾರದ ಮುಖಗಳು ಕಾಂಗ್ರೆಸ್ ಸೇರಲು ಬಯಸುತ್ತಿವೆ ಎಂದು ಸಣ್ಣ ನೀರಾವರಿ ಮತ್ತು ತಂತ್ರಜ್ನಾನ ಇಲಾಖೆ ಸಚಿವ ಭೋಸರಾಜ್ ಅವರು ಹೊಸ ಬಾಂಬ್ ಸಿಡಿಸಿದರು.

ಜಗದೀಶ್ ಶೆಟ್ಟರ್, ದಿನೇಶ್ ಗುಂಡೂರಾವ್, ಡಿಕೆಶಿ ಅವರು ಕೂಡ ಸಾಕಷ್ಟು ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಬರಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ಎಷ್ಟು ಜನ ಬರುತ್ತಾರೆ, ಯಾರು ಬರುತ್ತಾರೆ ಎಂದೆಲ್ಲಾ ಹೆಸರು ಹೇಳಲು ಆಗುವುದಿಲ್ಲ. ಆದರೆ ಕಲ್ಯಾಣ ಕರ್ನಾಟಕದ ಬಿಜೆಪಿಯ ಬಹಳಷ್ಟು ನಾಯಕರು ಕಾಂಗ್ರೆಸ್ ಗೆ ಬರುತ್ತಾರೆ. ಅವರೆಲ್ಲರೂ ನನ್ನ ಸಂಪರ್ಕದಲ್ಲಿ ಇದ್ದಾರೆ. ಅವರು ಕಾಂಗ್ರೆಸ್ ಗೆ ಬರುವುದರಿಂದ ಆಗುವ ಅನುಕೂಲ ಅನಾನುಕೂಲದ ಬಗ್ಗೆ ನಮ್ಮ ನಾಯಕರ ಜೊತೆಯಲ್ಲಿ ಚರ್ಚಿಸಿದ್ದೇವೆ ಎಂದರು.

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಲು ಸಚಿವ ಬೋಸರಾಜು ಸೂಚನೆ

ಆಪರೇಷನ್ ಹಸ್ತ ಎನ್ನುವ ಪ್ರಶ್ನೆಯೇ ಇಲ್ಲ. ಸ್ವತಃ ನಾವು ಯಾರನ್ನೂ ಪಕ್ಷಕ್ಕೆ ಕರೆತರುತ್ತಿಲ್ಲ. ಹಾಗೆ ನೋಡಿದರೆ ಆಪರೇಷನ್ ಕಮಲ ಶುರು ಮಾಡಿದ್ದೇ ಬಿಜೆಪಿಯವರು. ಇದು ಬಿಜೆಪಿ ಕೇಂದ್ರ ನಾಯಕರಿಂದಲೇ ನಡೆಯುತ್ತಿದೆ. ಆದರೆ ನಾವೆಂದೂ ರಾಜ್ಯ ಅಥವಾ ರಾಷ್ಟ್ರ ರಾಜಕಾರಣದಲ್ಲಿ ಆ ಕೆಲಸ ಮಾಡಲ್ಲ. ಯಾರೇ ಪಕ್ಷಕ್ಕೆ ಬರುವುದಾದರೆ, ಅವರು ಬರುವುದರಿಂದ ಪಕ್ಷಕ್ಕೆ, ಲೋಕಸಭಾ ಚುನಾವಣೆಗೆ ಅನುಕೂಲ ಆಗುವಂತೆ ನೋಡಬೇಕಾಗಿದೆ. ಈ ಕುರಿತು ರಾಜ್ಯ ಮತ್ತು ರಾಷ್ಟ್ರನಾಯಕರು ಚರ್ಚಿಸಿದ್ದಾರೆ. ನಮ್ಮ ಪಕ್ಷದ ಜಿಲ್ಲಾಧ್ಯಕ್ಷರು, ಮುಖಂಡರು ಮತ್ತು ಶಾಸಕರೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ಮಡಿಕೇರಿಯಲ್ಲಿ ಸಚಿವ ಭೋಸರಾಜ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios